ಬಂದಾನೊ ದೇವರೇ ಬಂದಾನೋ-ಬಂದಾನೋ
ಬಂದಾನೊ ಸ್ವಾಮಿ ಬಂದಾನೋ-ಬಂದಾನೋ
ಉಡುಪಿಯ ಕೃಷ್ಣನೆ ಬಂದಾನೋ – ಬಂದಾನೋ
ಕೈಯಲ್ಲಿ ಕಡೆಗೋಲ ಹಿಡಿದ್ಯಾನೋ – ಹಿಡಿದ್ಯಾನೋ
ಸೊಂಟಕೆ ಉಡಿದಾರ ತೊಟ್ಯಾನೋ – ತೊಟ್ಯಾನೋ
ಕಾಲಿಗೆ ಕಿರುಗೆಜ್ಜೆ ಕಟ್ಯಾನೋ – ಕಟ್ಯಾನೋ
ಥಕಧಿಮಿ ಥಕಧಿಮಿ ಕುಣಿದಾನೋ – ಕುಣಿದಾನೋ
ತಧಿಕಿಟ ಥಕಧಿಮಿ ಕುಣಿದಾನೋ – ಕುಣಿದಾನೋ
ಭಕ್ತಿಗೆ ಒಲಿದು ಬಂದಾನೋ – ಬಂದಾನೋ
ಭಕ್ತನ ತಾತ ಅಂದಾನೋ – ಅಂದಾನೋ
ತಾತನ ತೋಳಲ್ಲಿ ಆಡ್ಯಾನೋ – ಆಡ್ಯಾನೋ
ನಾನಿನ್ನ ಶಿಷ್ಯ ಅಂದಾನೋ – ಅಂದಾನೋ
ಹಾಡು ಹೇಳು ತಾತ ಅಂದಾನೋ – ಅಂದಾನೋ
ಶ್ಲೋಕ ಹೇಳು ಅಂತ ಕೇಳ್ಯಾನೋ – ಕೇಳ್ಯಾನೋ
ಕಥೆ ಹೇಳು ಅಂತ ಕಾಡ್ಯಾನೋ – ಕಾಡ್ಯಾನೋ
ಕವಿತೆ ಹೇಳು ಅಂತ ಬೇಡ್ಯಾನೋ – ಬೇಡ್ಯಾನೋ
ಎಲ್ಲವ ಅಲ್ಲಲ್ಲೆ ಕಲಿತಾನೋ – ಕಲಿತಾನೋ
ತಾತಂಗೆ ಅಚ್ಚರಿ ತರಿಸ್ಯಾನೋ – ತರಿಸ್ಯಾನೋ
ನಾಡಲ್ಲೇ ಮೇಧಾವಿ ಆದಾನೋ – ಆದಾನೋ
ಮೊಮ್ಮಗುಗೂ ಮಿಗಿಲಿಲ್ಲ ಅನಿಸ್ಯಾನೋ – ಅನಿಸ್ಯಾನೋ
ಸೂರ್ಯಂಗೆ ತೂಕಡಿಗೆ ಬಂದಾವೋ – ಬಂದಾವೊ
ಇಲ್ಲಿಗೆ ಹಾಡು ಮುಗಿದಾವೋ – ಮುಗಿದಾವೋ.
*****