ಆರಗೊಡವಿನ್ನೇನು ಮಗಳೆ

ಆರಗೊಡವಿನ್ನೇನು ಮಗಳೆ
ಮುನ್ನೋಡಿ ಹಂಜಿ ನೂಲಮ್ಮಾ || ಪ ||

ದಾರಿಕಾರರು ನಿನ್ನ ಮಾರಿನೋಡಲು
ಮಾರಿಯತ್ತಿ ನೋಡ ಬೇಕಮ್ಮಾ || ಅ. ಪ.||

ಆಸನ ದೊಡ್ಡಾ ಮಣಿಗಳ ಮಾಡಿ
ಆ ಶಶಿ ರವಿಗಳ ಕುಂಭಗಳ್ಹೂಡಿ
ಸೂಸುವ ಚಕ್ರದ ಎಲೆಗಳಮೇಲೆ
ದಶವಾಯುಗಳೆಂಬ ನುಲಿಗಳ ಬಿಗಿದು || ೧ ||

ಹರಿಯನು ಬ್ರಹ್ಮನಾಳ ಮಾಡಿ
ಕುರುಹು ನಾಶಕ ಬೆನಕವ ಹೂಡಿ
ಪರಶಿವನೆಂಬುವ ದಾರವ ಕಟ್ಟಿ
ವೈರಾಗ್ಯವೆಂಬುವ ಬಿಲ್ಲುಗಳಿಟ್ಟು || ೨ ||

ಜ್ಞಾನವೆಂಬುವಾ ಕದರನಿಟ್ಟು
ಮಾನವ ಧರ್ಮ ಹಂಜಿಯ ಪಿಡಿದು
ಅನುಭವವೆಂಬುವ ಎಳೆಗಳು ತೆಗೆದು
ಅನುವಿಲಿ ಸುಮ್ಮನೇ ನೂಲಮ್ಮಾ || ೩ ||

ಕಕುಲಾತಿಯೆಂಬುವ ಕಸರನು ಕಳಿದು
ಸುಖ ದುಃಖೆಂಬುವ ಸಿರದೊಡಕಳಿದು
ಭಕುತಿಯೆಂಬುವಾ ಕೊಳವಿಯನ್ಹಿಡಿದು
ಕುಕ್ಕಡಿನೆಲ್ಲಾ ನೂಲಮ್ಮಾ || ೪ ||

ಇಪ್ಪತ್ತೊಂದು ಸಾವಿರದಾ
ಮೇಲಾರನೂರಾ ಎಳಿಗಳ ಹೊಯ್ದು
ತಪ್ಪದೇ ಎಣಕಿಯಮಾಡಿ ನೀನು
ಒಪ್ಪಿಸಿ ಪಟ್ಟೇವ ಸುತ್ತವ್ವಾ || ೫ ||

ಪ್ರತ್ಯಕ್ಷ ಪರಮಾತ್ಮನೆಂಬುವ
ಉತ್ತಮವಾದ ಹೊಳಾನೇಯ್ದು
ಕೃತ್ತಿವಾಸ ಶಿಶುನಾಳಧೀಶನಿಗೆ
ಮುಟ್ಟಿಸಿ ಮುಕ್ತಿ ಪಡಿಯವ್ವಾ || ೬ ||

****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಳೆದುಹೋಗಲ್ಲ ಮಗು…
Next post ವಿಪರ್ಯಾಸ

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…