ಬೇಸಗೆಯಲ್ಲಿ ಹೊಸ ಸೀಲಿಂಗ್ ಫ್ಯಾನ್ ಖರೀದಿಗಾಗಿ ಅಂಗಡಿಗೆ ಹೋದರೆ ಸಾಲು ಸಾಲಾಗಿ ಪ್ರದರ್ಶನಕ್ಕೆ ಇಟ್ಟಿರುತ್ತಾರೆ. ‘ಯಾವ ಫ್ಯಾನಾದರೇನು, ತಿರುಗಿದಾಗ ಗಾಳಿ ಬಂದರೆ ಸಾಕು ತಾನೇ?’ ಆಂದುಕೊಳ್ತೇವೆ. ಟಿವಿಯ ಆಥವಾ ಪತ್ರಿಕೆಯ ಚಾಹೀರಾತಿನಲ್ಲಿ ಕಂಡ ಯಾವುದೇ ಫ್ಯಾನ್ ನೆನಪಾಗುತ್ತದೆ. ಅದರ ಖರೀದಿಗೆ ನಾವು ಮುಂದಾಗುತ್ತೇವೆ.
ಇದು ಇಷ್ಟು ಸರಳವಲ್ಲ. ಯಾಕೆಂದರೆ ನೀವು ಖರೀದಿಸುವ ಸೀಲಿಂಗ್ ಫ್ಯಾನ್ ಎಷ್ಟು ಗಾಳಿ ನೀಡುತ್ತದೆ, ಎಷ್ಟು ವಿದ್ಯುತ್ ಬಳಸುತ್ತದೆ ಮತ್ತು ಎಷ್ಟು ಸುರಕ್ಷಿತ ಎಂದಾದರೂ ನೀವು ತಿಳಿದಿರಬೇಕು.
ಆದರೆ ಈ ಪ್ರಶ್ನೆಗಳಿಗೆ ಖರೀದಿಯ ಸಮಯದಲ್ಲಿ ಉತ್ತರ ಸಿಗುವುದಿಲ್ಲ. ಯಾಕೆಂದರೆ ಫ್ಯಾನ್ ಗಳ ಉತ್ಯಾದಕರು ಈ ಮಾಹಿತಿ ನೀಡುವುದಿಲ್ಲ. ಫ್ಯಾನಿನ ಪ್ಯಾಕೇಜಿನಲ್ಲಾಗಲೀ ಜಾಹೀರಾತಿನಲ್ಲಾಗಲೀ ಈ ಮಾಹಿತಿ ಇಲ್ಲ. ಆದಕ್ಕಾಗಿಯೇ ಆಹ್ಮದಾಬಾದಿನ ಕನ್ಸೂಮರ್ ಎಜುಕೇಶನ್ ಆಂಡ್ ರೀಸರ್ಚ್ ಸೊಸೈಟಿ 24 ಬ್ರಾಂಡ್ ಗಳ ಫ್ಯಾನ್‌ಗಳ ವೈಜ್ಞಾನಿಕ, ತಾಂತ್ರಿಕ ಪರೀಕ್ಷೆ ನಡೆಸಿತು. ಬ್ಯೂರೋ ಆಫ್ ಇಂಡಿಯನ್ ಸ್ವಾಂಡರ್ಡಿನ ಐಎಸ್ : 374 . 1979 (6 ತಿದ್ದುಪಡಿಗಳ ಸಹಿತ) ಮತ್ತು ಐಎಸ್ : 12155 . 1987ರ ಅನುಸಾರ ಪರೀಕ್ಷಿಸಲಾಯಿತು.
ಪ್ರಚಾರ ಮತ್ತು ವಾಸ್ತವ
ಪರೀಕ್ಷಿಸಲಾದ ಫ್ಯಾನ್ ಬ್ರಾಂಡ್‌ಗಳ ಪ್ರಚಾರ ಹೇಳಿಕೆ ಗಳಿಗೂ ವಾಸ್ತವಕ್ಕೂ ಅಜಗಜಾಂತರ ಎಂಬುದು ಪರೀಕ್ಷೆಯಿಂದ ದೃಢಪಟ್ಟಿತು. ವಿದ್ಯುತ್ತಿನ ದಕ್ಷ ಬಳಕೆಯ ಫ್ಯಾನ್ ಎಂದು ಪ್ರಚಾರ ಮಾಡುವ ಬಜಾಜ್ ಫ್ಯಾನಿನ ವಿದ್ಯುತ್ತಿನ ಬಳಕೆ ಸ್ಟಾಂಡರ್ಡಿನಲ್ಲಿ ನಮೂದಿಸಿದ್ದಕ್ಕಿಂತ ಜಾಸ್ತಿಯಾಗಿತ್ತು. 14 ಫ್ಯಾನ್‌ಗಳಲ್ಲಿ ಇದಕ್ಕೆ ದಕ್ಕಿದ್ದು 5ನೇ ರ್ಯಾಂಕ್.
‘ಅಲ್ಟಿಮೇಟ್ ಏರ್ ಪವರ್ – ಪಿಎಸ್‌ಪಿಓ’ ಎಂದು ಜಾಹೀರಾತು ನೀಡುವ ಓರಿಯೆಂಟ್ ಫ್ಯಾನ್ ಕಂಪೆನಿ ತನ್ನ ಪಿಎಸ್‌ಪಿಓ (ಪೀಕ್ ಸ್ಪೀಡ್ ಪರ್‌ಫಾರ್ಮೆನ್ಸ್ ಓಟ್‌ಪುಟ್) ಸಮೀಕರಣವನ್ನು ತಾನೇ ರೂಪಿಸಿದೆ. ಇದು ಕೂಡ ಸ್ಟಾಂಡರ್ಡಿನ ಪ್ರಕಾರ ದಕ್ಷ ಫ್ಯಾನ್ ಆಗಿಲ್ಲ. ಕಡಿಮೆ ವೋಲ್ಟೇಜಿನಲ್ಲಿಯೂ ಚೆನ್ನಾಗಿ ತಿರುಗುತ್ತದೆ ಎಂದು ಪ್ರಚಾರ ಮಾಡುವ ಓರ್‌ಟೆಂ ಮತ್ತು ರೆಮಿ ಫ್ಯಾನ್‌ಗಳ ಉತ್ಪಾದಕರು ಆ ಕಡಿಮೆ ವೋಲ್ಟೇಜ್ ಎಷ್ಟೆಂದು ತಿಳಿಸಿಲ್ಲ. ಫ್ಯಾನ್‌ಗಳ ಪ್ರಶ್ನಾತೀತ ಲೀಡರ್ ಎಂದು ಕರೆದುಕೂಳ್ಳುವ ಉಷಾ ಫ್ಯಾನಿಗೆ ಪರೀಕ್ಷಿಸಲಾದ 14 ಬ್ರಾಂಡ್ ಗಳಲ್ಲಿ 4ನೇ
ರ್ಯಾಂಕ್!
ಫ್ಯಾನಿನಿಂದ ಎಷ್ಟು ಗಾಳಿ?
ಇಂಡಿಯನ್ ಸ್ವಾಂಡರ್ಡಿನ (ಐಎಸ್) ಪ್ರಕಾರ ಫ್ಯಾನ್‌ಗಳು ನಿಮಿಷಕ್ಕೆ 200 ಘನ ಮೀಟರ್ ಗಾಳಿ ಒದಗಿಸಬೇಕು. ಆ
ಫ್ಯಾನ್‌ಗಳನ್ನು ಏರ್ ಡೆಲಿವರಿ ಚೇಂಬರಿನಲ್ಲಿರಿಸಿ ಪೂರ್ಣ ವೇಗದಲ್ಲಿ ಓಡಿಸಿ ಪರೀಕ್ಷಿಸಿದಾಗ ಎಲ್ಲವೂ ಈ ಪರೀಕ್ಷೆಯಲ್ಲಿ ಪಾಸಾದವು ಎಂಬುದು ಸಮಾಧಾನಕರ. ಅಶೋಕ ಫ್ಯಾನ್ ಕನಿಷ್ಠ ಮತ್ತು ಓರ್‌ಟೆಂ ಫ್ಯಾನ್ ಗರಿಷ್ಠ ಗಾಳಿ ಒದಗಿಸಿದವು.
ವಿದ್ಯುತ್ ಬಳಕೆ ಮತ್ತು ದಕ್ಷತೆ
ಐಎಸ್ ಸ್ವಾಂಡರ್ಡ್ ಫ್ಯಾನಿನ ವಿದ್ಯುತ್ ಬಳಕೆ ಬಗ್ಗೆ ಏನೆನ್ನುತ್ತದೆ? ‘ಗರಿಷ್ಠ ವೇಗದಲ್ಲಿ ತಿರುಗುವಾಗ 50 ವಾಟ್ ಗಳಿಗಿಂತ ಜಾಸ್ತಿ ವಿದ್ಯುತ್ ಬಳಸಬಾರದು’ (ಸರ್ವಿಸ್ ವ್ಯಾಲ್ಯೂ ಆಂದರೆ ದಕ್ಷತಾ ಸೂಚ್ಯಂಕ 4 ಆಗಿದ್ದರೆ ವಿದ್ಯುತ್ ಬಳಕೆ ಶೇ. 10 ಜಾಸ್ತಿಯಿರಬಹುದು.) ಈಗಿನ ಕಾಲದಲ್ಲಿ ಎಲ್ಲ ವಿದ್ಯುತ್ ಉಪಕರಣಗಳನ್ನೂ ಕಡಿಮೆ ವಿದ್ಯುತ್ ಬಳಕೆ ಮಾಡುವಂತೆ ಸುಧಾರಿಸಲಾಗುತ್ತಿದೆ. ಆದರೆ ಫ್ಯಾನ್‌ಗಳ ಉತ್ಪಾದಕರಿಗೆ ಈ ಕಾಳಜಿ ಇಲ್ಲ. ಪರೀಕ್ಷಿಸಲಾದ ಎಲ್ಲ ಬ್ರಾಂಡ್ ಗಳ ಫ್ಯಾನ್‌ಗಳೂ ಸ್ಸಾಂಡರ್ಡಿನಲ್ಲಿ ನಮೂದಿಸಿದ್ದಕ್ಕಿಂತ ಜಾಸ್ತಿ ವಿದ್ಯುತ್ತನ್ನೇ ಕಬಳಿಸಿದವು. ಪೋಲಾರ್ ಫ್ಯಾನ್ 86.24 ವಾಟ್ ಗರಿಷ್ಠ ವಿದ್ಯುತ್ ಹಾಗೂ ಬಜಾಜ್ ಫ್ಯಾನ್ 68.81 ವಾಟ್ ಕನಿಷ್ಠ ವಿದ್ಯುತ್ ಬಳಸಿದವು.
ಅತ್ಯುತ್ತಮ ಫ್ಯಾನ್ ಕನಿಷ್ಠ ವಿದ್ಯುತ್ ಬಳಸಿ ಗರಿಷ್ಠ ಗಾಳಿ ಒದಗಿಸುತ್ತದೆ. ಸಮೀಕರಣದ ಪ್ರಕಾರ ಲೆಕ್ಕ ಹಾಕಲಾಗುವ ಈ ಆನುಪಾತವೇ ಫ್ಯಾನಿನ ದಕ್ಷತಾ ಸೂಚ್ಯಂಕ. ಐಎಸ್ ಸ್ವಾಂಡರ್ಡಿನ ಪ್ರಕಾರ ಇದು 4ಕ್ಕಿಂತ ಕಡಿಮೆ ಇರಬಾರದು. ಪರೀಕ್ಷಿಸಲಾದ ಫ್ಯಾನ್‌ಗಳ ಕನಿಷ್ಠ ದಕ್ಷತಾ ಸೂಚ್ಯಂಕ 2.64 (ಅಶೋಕ ಫ್ಯಾನ್) ಮತ್ತು ಗರಿಷ್ಠ 3.35 (ಬಜಾಜ್ ಮತ್ತು ಓರಿಯಂಟ್ ಫ್ಯಾನ್‌ಗಳು). ಅಂದರೆ 14 ಬ್ರಾಂಡ್ ಗಳ ಫ್ಯಾನ್‌ಗಳಲ್ಲಿ ಯಾವುದೂ ದಕ್ಷತೆಯ ಪರೀಕ್ಷೆಯಲ್ಲಿ ಪಾಸಾಗಲಿಲ್ಲ!
ಫ್ಯಾನ್ ಸುರಕ್ಷಿತವೇ?
ಸೀಲಿಂಗ್ ಫ್ಯಾನ್ ಕಳಚಿ ಬಿದ್ದರೆ… ಎಂಬ ಕಲ್ಪನೆಯೇ ಭಯ ಹುಟ್ಟಸುತ್ತದೆ. ಫ್ಯಾನನ್ನು ಆಧರಿಸುವ ಕಬ್ಬಿಣದ ಸರಳು ಮತ್ತು ಕ್ಲಾಂಪ್ ಭದ್ರವಾಗಿರದಿದ್ದರೆ ಸೀಲಿಂಗ್ ಫ್ಯಾನ್ ಕಳಚಿ ಬಿದ್ಧೀತು. ಸರಳು ಮತ್ತು ಕ್ಲಾಂಪಿಗೆ 1,000 ಕಿಲೋಗ್ರಾಂ ಭಾರ ತಗಲಿಸಿ ಜಗ್ಗಿದಾಗಲೂ ಮುರಿಯದಿದ್ದರೆ ಅವು ಸುರಕ್ಷಿತ ಎಂದರ್ಥ. ಈ ಪರೀಕ್ಷೆಯಲ್ಲಿ ಎರಡು ಬ್ರಾಂಡ್ ಗಳ ಫ್ಯಾನ್‌ಗಳು ಪಾಸಾಗಲಿಲ್ಲ. ಆಲ್‌ಮೊನಾರ್ಡ್ ಫ್ಯಾನಿನ ಸ್ಕ್ರೂ ತುಂಡಾದರೆ ಆಂಕರ್ ಫ್ಯಾನಿನ ಕ್ಲಾಂಪ್ ಮುರಿಯಿತು.
ಕ್ರಾಂಪ್ಟನ್ ಫ್ಯಾನಿಗೆ ಅಧಿಕ ಸುರಕ್ಷಿತತೆಗಾಗಿ ರಕ್ಷಣಾ ಕೇಬಲ್ ಆಳವಡಿಸಲಾಗಿದೆ. ಹಾಗಾಗಿ ಕ್ಲಾಂಪ್ ಮುರಿದರೂ ಆ ಕೇಬಲ್ ಫ್ಯಾನನ್ನು ಆಧರಿಸಿ, ಸೀಲಿಂಗಿನ ಕೊಕ್ಕೆಯಿಂದ ಬೀಳದಂತೆ ತಡೆಯುತ್ತದೆ. ಪ್ಯಾನಿನ ಒಳಗಿನ ವಯರ್ಗಳಿಗೆ ಇನ್‌ಸುಲೇಶನ್ ಕೊಟ್ಟು ಅವನ್ನು ಅಪಾಯರಹಿತವಾಗಿಸಬೇಕು. ಫ್ಯಾನಿನ ಯಾವುದೇ ಹೊರಗಾದ ಭಾಗಕ್ಕೆ ತಗಲಿ ಧಕ್ಕೆಯಾಗದಂತೆ ವಯರ್ಗಳನ್ನು ಜೋಡಿಸಿರಬೇಕು. ಶಾನ್ ಮತ್ತು ಅಶೋಕ ಫ್ಯಾನ್ಗಳಲ್ಲಿ ಹೀಗೆ ಮಾಡಿರಲಿಲ್ಲ.
ಇತರ ಎಲ್ಲ ಫ್ಯಾನ್ಗಳಲ್ಲಿ ಆಪಾಯರಹಿತವಾಗಿ ವಯರಿಂಗ್ ಮಾಡಲಾಗಿತ್ತು.
ಲೇಬಲ್ ಮಾಹಿತಿ
ಫ್ಯಾನಿನ ಪ್ಯಾಕೇಜಿನ ಲೇಬಲಿನಲ್ಲಿ ಏನೆಲ್ಲ ಮಾಹಿತಿ ಇರಬೇಕು? ಐಎಸ್ ಸ್ಟಾಂಡರ್ಡಿನ ಪ್ರಕಾರ ಫ್ಯಾನ್ ಒದಗಿಸುವ ಗಾಳಿ, ಫ್ಯಾನಿಗೆ ಅಗತ್ಯವಾದ ವೋಲ್ಟೇಜ್ ಮತ್ತು ವಿದ್ಯುತ್ (ವಾಟ್ಗಳಲ್ಲಿ) ಇವನ್ನು ಲೇಬಲಿನಲ್ಲಿ ಉತ್ಪಾದಕರು ಮುದ್ರಿಸಲೇಬೇಕು. ಪರೀಕ್ಷಿಸಲಾದ ಯಾವುದೇ ಬ್ರಾಂಡಿನ ಫ್ಯಾನ್ ಒದಗಿಸುವ ಗಾಳಿ ಎಷ್ಟಂದು ಲೇಬಲಿನಲ್ಲಿ
ಮುದ್ರಿಸಿರಲಿಲ್ಲ. ಆರು ಬ್ರಾಂಡ್ಗಳ ಫ್ಯಾನ್‌ಗಳ ಲೇಬಲ್ ಗಳಲ್ಲಿ ಆಗತ್ಯವಾದ ವಿದ್ಯುತ್ತಿನ ವಾಟ್ ಎಷ್ಟೆಂದು ಸೂಚಿಸಿರಲಿಲ್ಲ. ನಾಲ್ಕು ಬ್ರಾಂಡ್ಗ್ ಗಳ ಫ್ಯಾನ್‌ಗಳಲ್ಲಿ ಆಗತ್ಯ ವೋಲ್ಟೇಜ್ ನಮೂದಿಸಿರಲಿಲ್ಲ. ಈ ಬಗ್ಗೆ ಸಿಇಆರ್ ಸೊಸೈಟಿ ಉತ್ಪಾದಕರನ್ನು ಪ್ರಶ್ನಿಸಿದಾಗ ಕೆಲವರು ಜಾರಿಕೆಯ ಉತ್ತರ ನೀಡಿದರು.
ಸೀಲಿಂಗ್ ಫ್ಯಾನಿನ ನಿಯಂತ್ರಕಗಳು
ಸೀಲಿಂಗ್ ಫ್ಯಾನ್ಗಳನ್ನು ವೇಗ ನಿಯಂತ್ರಕ (ರೆಗ್ಯುಲೇಟರ್)ಗಳ ಸಹಿತ ಮಾರಾಟ ಮಾಡುತ್ತಾರೆ. ಯಾವುದೇ ಫ್ಯಾನಿನ ಜೊತೆಗಿರುವ ನಿಯಂತ್ರಕದ ಬದಲಾಗಿ ನೀವು ಬೇರೆ ಉತ್ತಮ ನಿಯಂತ್ರಕ ಖರೀದಿಸಬಹುದು. ಆದರೆ ಇಲೆಕ್ಟ್ರಿಕ್ ಮತ್ತು ಇಲೆಕ್ಟ್ರಾನಿಕ್ ನಿಯಂತ್ರಕಗಳಿಗೆ ಇರುವ ವ್ಯತ್ಯಾಸವನ್ನು ನೀವು ತಿಳಿದುಕೊಳೃಬೇಕು.
ಇಲೆಕ್ಟ್ರಿಕ್ ನಿಯಂತ್ರಕಗಳು
ಫ್ಯಾನಿನ ವೇಗ ಕಡಿಮೆ ಮಾಡಲಿಕ್ಕಾಗಿ ನೀವು ಈ ನಿಯಂತ್ರಕ ತಿರುಗಿಸಿದಾಗ ಏನಾಗುತ್ತದೆ? ಫ್ಯಾನಿನ ಒಳಗಿನ ಮೋಟರಿಗೆ ಹರಿಯುವ ವಿದ್ಯುತ್ತಿನ ವೋಲ್ಟೇಜನ್ನು ಅದು ಕಡಿಮೆ ಮಾಡುತ್ತದೆ. ಸಾಮಾನ್ಕವಾಗಿ ಮನೆಗಳಿಗೆ ವಿದ್ಯುತ್ ಮಂಡಲಿಗಳು ಸರಬರಾಜು ಮಾಡುವ ವಿದ್ಯುತ್ತಿನ ವೋಲ್ಟೇಜ್ 230. ಫ್ಯಾನ್ ಗರಿಷ್ಠ ವೇಗದಲ್ಲಿ ತಿರುಗುವಾಗ ನಿಯಂತ್ರಕವು 230 ವೋಲ್ಲೇಜಿನ ವಿದ್ಯುತ್ತನ್ನೇ ಒದಗಿಸುತ್ತದೆ. ವೇಗ ತಗ್ಗಿಸಿದಾಗ ಪ್ರತಿಬಂಧಕ ಎಂಬ ಉಪಕರಣವು ಫ್ಯಾನಿಗೆ ಹರಿಯುವ ವಿದ್ಯುತ್ತಿನ ವೋಲ್ಟೇಜನ್ನು ಕಡಿಮೆ ಮಾಡುತ್ತದೆ. ವಿದ್ಯುತ್ತಿನ ಕೆಲವಂಶ ವೋಲ್ಟೇಜನ್ನು ಕಬಳಿಸುವ ಮೂಲಕ ಪ್ರತಿಬಂಧಕವು ಇದನ್ನು ಸಾಧಿಸುತ್ತದೆ. ಹೀಗಾದಾಗ ಪ್ರತಿಬಂಧಕ ಬಿಸಿಯಾಗಿ, ನಿಯಂತ್ರಕವೂ ಬಿಸಿಯಾಗುತ್ತದೆ. ಇದರಿಂದಾಗಿ ದೀರ್ಘಾವಧಿಯಲ್ಲಿ ನಿಯಂತ್ರಕಕ್ಕೆ ಹಾನಿಯಾಗುತ್ತದೆ. ಅದಲ್ಲದೆ ಇಲೆಕ್ಟ್ರಿಕ್ ನಿಯಂತ್ರಕಗಳು ವೋಲ್ಟೇಜನ್ನು ಕಬಳಿಸಿ ಪ್ರತಿಬಂಧಕ ಬಿಸಿಯಾಗಿಸುವ ಮೂಲಕ ವಿದ್ಯುತ್ತನ್ನು ವ್ಯರ್ಥ ಮಾಡುತ್ತವೆ. ಇದರಿಂದಾಗಿ ವಿದ್ಯುತ್ ವೆಚ್ಚ ಹೆಚ್ಚಾಗುತ್ತದೆ.
ಇಲೆಕ್ಟ್ರಾನಿಕ್ ನಿಯಂತ್ರಕಗಳು
ಗಾತ್ರದಲ್ಲಿ ಸಣ್ಣವು. ಇವು ವಿದ್ಯುತ್ತಿನ ಪ್ರವಾಹವನ್ನು ನಿಯಂತ್ರಿಸುವ ಮೂಲಕ ಫ್ಯಾನಿನ ವೇಗ ಹೆಚ್ಚಿಸುತ್ತವೆ ಅಥವಾ ತಗ್ಗಿಸುತ್ತವೆ. ಫ್ಯಾನ್ ‘1′ ಮತ್ತು ‘2’ ರ ವೇಗದಲ್ಲಿ ತಿರುಗುವಾಗ ಇವು ವಿದ್ಯುತ್ ಉಳಿಸುತ್ತವೆ.
ಸಿಇಆರ್ ಸೊಸೈಟಿ ಒಂದೇ ಕಂಪನಿಯ ಇಲೆಕ್ಟ್ರಿಕ್ ಇಲೆಕ್ಟ್ರಾನಿಕ್ ನಿಯಂತ್ರಕಗಳನ್ನು ಪರೀಕ್ಷಿಸಿತು. ವೇಗ ‘1’ರಲ್ಲಿ ಇಲೆಕ್ಟ್ರಿಕ್ ನಿಯಂತ್ರಕ 40 ವಾಟ್ ವಿದ್ಯುತ್ ಬಳಸಿದರೆ ಇಲೆಕ್ಟ್ರಾನಿಕ್ ನಿಯಂತ್ರಕ 15 ವಾಟ್ ವಿದ್ಯುತ್ ಬಳಸಿತು. ಆದರೆ ಗರಿಷ್ಠ ವೇಗದಲ್ಲಿ ಫ್ಯಾನ್ ತಿರುಗುವಾಗ ಇವೆರಡೂ ನಿಯಂತ್ರಕಗಳು ಸಮಾನ ವಿದ್ಯುತ್ತನ್ನೇ ಬಳಸಿದವು. ಆದೇನಿದ್ದರೂ ಇಲೆಕ್ಟ್ರಾನಿಕ್ ನಿಯಂತ್ರಕ 3 ಹಂತಗಳ ಫ್ಯಾನಿನ ವೇಗ ಒದಗಿಸುತ್ತದೆ ಮತ್ತು ಇಲೆಕ್ಟ್ರಿಕ್ ನಿಯಂತ್ರಕ 6 ಹಂತಗಳ ಫ್ಯಾನಿನ ವೇಗ ಒದಗಿಸುತ್ತದೆ
ಇಲೆಕ್ಟ್ರಾನಿಕ್ ನಿಯಂತ್ರಕಗಳ ಬೆಲೆ ಹೆಚ್ಚು. ಆದರೆ ಇಲೆಕ್ಟ್ರಿಕ್ ನಿಯಂತ್ರಕಗಳ ಬೆಲೆ ಕಡಿಮೆ ಆಂದರೆ ಕೇವಲ ರೂ. 40. ಆದ್ದರಿಂದ ಬೆಲೆ ಹೆಚ್ಚಾದರೂ ಪರವಾಗಿಲ್ಲ, ದಕ್ಷ ವೇಗ ನಿಯಂತ್ರಕ ಬೇಕೆಂದಾದರೆ ಇಲೆಕ್ಟ್ರಾನಿಕ್ ನಿಯಂತ್ರಕ ಖರೀದಿಸಿರಿ.
ಇಲೆಕ್ಟ್ರಾನಿಕ್ ನಿಯಂತ್ರಕಗಳಲ್ಲಿ 2 ವಿಧಗಳಿವೆ. ತಿರುಗಣೆ ಇರುವ ವೇಗ ನಿಯಂತ್ರಕದಿಂದಾಗಿ ಫ್ಯಾನಿನ ಮೋಟರ್ ಜಾಸ್ತಿ ಬಿಸಿಯಾದೀತು. ಆದ್ದರಿಂದ ಬೆಲೆ ಹೆಚ್ಚಾದರೂ ಎರಡನೆಯ ವಿಧದ ಹಂತ ಹಂತದ ವೇಗ ನಿಯಂತ್ರಕವೇ ಉತ್ತಮ.
ಆಯ್ಕೆ ಹೇಗೆ?
ಸೀಲಿಂಗ್ ಫ್ಯಾನ್ಗಳಿಗೆ ಐಎಸ್ಐ ಆಂಕಿತವಿದ್ದರೆ ಬಳಕೆದಾರರಿಗೆ ಆಯ್ಕೆ ಸುಲಭವಾಗುತ್ತಿತ್ತು. ಆದರೆ ಯಾವುದೇ ಉತ್ಪಾದಕ ಕಂಪೆನಿ ಐಎಸ್ಐ ಸ್ವಾಂಡರ್ಡಿಗೆ ಆನುಸಾರವಾಗಿ ಫ್ಯಾನ್ಗಳನ್ನು ಉತ್ತಾದಿಸುತ್ತಿಲ್ಲ. ಯಾಕೆಂದರೆ ಭಾರತದಲ್ಲಿ ಇದನ್ನು ಕಡ್ಡಾಯ ಮಾಡಿಲ್ಲ. ಹಾಗಾಗಿ ಯಾವ ಬ್ರಾಂಡಿನ ಫ್ಯಾನಿಗೂ ಐಎಸ್ಐ ಆಂಕಿತವಿಲ್ಲ.
ಆದ್ದರಿಂದ ಗ್ಯಾರಂಟಿ ಮತ್ತು ಬೆಲೆ ಆಧರಿಸಿ, ತಮ್ಮ ಕೋಣೆಯ ವಿಸ್ತೀರ್ಣಕ್ಕೆ ಸೂಕ್ತವಾದ ಫ್ಯಾನನ್ನು ಬಳಕೆದಾರರು ಖರೀದಿಸಬಹುದು. ಪರೀಕ್ಷಿಸಲಾದ 14 ಬ್ರಾಂಡಿನ ಫ್ಯಾನ್ಗಳಲ್ಲಿ ಅಲ್ ಮೊನಾರ್ಡ್, ಅಶೋಕ, ಸಿನ್ನಿ, ಓರಿಯೆಂಟ್, ಓರ್‌ಟೆಂ, ಶಾನ್, ಉಪಾ ಮತ್ತು ಬಜಾಜ್ ಫ್ಯಾನ್‌ಗಳಿಗೆ ತಲಾ 2 ವರುಷಗಳ ಗ್ಯಾರಂಟಿ ಇದ್ದರೆ ಖ್ಯೆತಾನ್ ಫ್ಯಾನಿಗೆ ಕೇವಲ ಒಂದು ವರುಷದ ಗ್ಯಾರಂಟಿ ಲಭ್ಯ. ಆದರೆ ಪೋಲಾರ್ ಫ್ಯಾನಿಗೆ 7 ವರುಷಗಳ ಗ್ಯಾರಂಟಿ.
ಫ್ಯಾನ್‌ಗಳ ಬೆಲೆಯಲ್ಲಿಯೂ ಬಹಳ ಆಂತರವಿದೆ. ರೂ. 1495 ಬೆಲೆಯ ಸಿನ್ನಿ ಮತ್ತು ಉಷಾ ಸೀಲಿಂಗ್ ಫ್ಯಾನ್‌ಗಳು ಅತಿ ದುಬಾರಿ. ರೂ. 626 ಬೆಲೆಯ ಆಶೋಕ ಅತಿ ಆಗ್ಗದ ಫ್ಯಾನ್. ನಿಮ್ಮ, ಕೋಣೆಗೆ ಯಾವ ಆಳತೆಯ ಫ್ಯಾನ್ ಸೂಕ್ತವೆಂದು ಸಿಇಆರ್ ಸೊಸೈಟಿ ಮಾಡಿರುವ ಶಿಫಾರಸ್ ಹೀಗಿದೆ : (ಕೋಣೆಯ ಆಳತೆ ಆಡಿಗಳಲ್ಲಿ) 9×11 ರಿಂದ 10×11 ಕೋಣೆಗೆ 1050 ಮಿ.ಮೀ. ಫ್ಯಾನ್, 10 x13 ರಿಂದ 12 x12 ಕೋಣೆಗೆ 1200 ಮಿ.ಮೀ. ಫ್ಯಾನ್ ಮತ್ತು 13×16 ರಿಂದ 15×15 ಕೋಣೆಗೆ 1400 ಮಿ.ಮೀ. ಫ್ಯಾನ್.
ಬೇಸಗೆ ಬಂತೆಂದು ಅವಸರದಲ್ಲಿ ಫ್ಯಾನ್ ಖರೀದಿಸುವುದು ಸರಿಯಲ್ಲ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ನಿಮಗೆ ಬೇಕಾದ ಫ್ಯಾನ್ ಯಾವುದೆಂದು ನಿರ್ಧರಿಸಿ, ಅನಂತರ ಕೆಲವು ಅಂಗಡಿಗಳಲ್ಲಿ ಆದರ ಬೆಲೆ ವಿಚಾರಿಸಿ, ಜಾಸ್ತಿ ಡಿಸ್ಕೌಂಟ್ ಪಡೆದು ಫ್ಯಾನ್ ಖರೀದಿಸಿರಿ.
ವಾರಂಟಿ -ಗ್ಯಾರಂಟಿ
ಕೆಲವು ಉತ್ಪಾದಕರು ಫ್ಯಾನಿಗೆ ವಾರಂಟಿ ಮಾತ್ರ ನೀಡುತ್ತಾರೆ. ವಾರಂಟಿಯಲ್ಲಿ ಉತ್ಪನ್ನದ ಗುಣಮಟ್ಟ, ಕೆಲಸ ಮತ್ತು ಸ್ಸಾಂಡರ್ಡನ್ನು ವಿವರಿಸಲಾಗಿರುತ್ತದೆ. ಇದರಲ್ಲಿ ಮೋಸವಾದಾಗ ಉತ್ಪಾದಕರಿಂದ ಪರಿಹಾರ ಪಡೆಯಬಹುದು. ಆದರೆ ಉತ್ತನ್ನದ ಮಾರಾಟ ಅಸಿಂಧುಗೊಳಿಸಲು ವಾರಂಟಿ ಮಾತ್ರ ಸಾಲದು. ಉತ್ಪಾದಕರ ಗ್ಯಾರಂಟ, ಉತ್ತನ್ನದ ಮಾರಾಟಕ್ಕೆ ತಳಪಾಯವಾದ ಒಪ್ಪಂದ ಎನಿಸುತ್ತದೆ. ಗ್ಯಾರಂಟಿಯ ಉಲ್ಲಂಫನೆ ಆದಾಗ ಉತ್ಪನ್ನದ ಮಾರಾಟವನ್ನೇ ಅಸಿಂಧುಗೊಳಿಸಬಹುದು. ಅದಲ್ಲದೆ ತಮಗಾದ ನಷ್ಟವನ್ನು ಸಾಬೀತು ಮಾಡಿದರೆ ಬಳಕೆದಾರರು ಪರಿಹಾರ ಕೂಡ ಪಡೆಯಬಹುದು.
ಉದಯವಾಣಿ 29-4-2004