‘ಒಂದೇ ತಿಂಗಳಿನಲ್ಲಿ ನಿಮ್ಮ ಎತ್ತರ ಹೆಚ್ಚಲಿಕ್ಕಾಗಿ ಕ್ಕಾಪ್ಸೂಲ್ ಸೇವಿಸಿರಿ’, ‘ಒಂದೇ ವಾರದಲ್ಲಿ ನಿಮ್ಮ ಬೊಚ್ಚು ಇಳಿಯಲಿಕ್ಕಾಗಿ ಮಾತ್ರೆ ನುಂಗಿ’. ‘ಕೆಲವೇ ದಿನಗಳಲ್ಲಿ ಕ್ಯಾನ್ನರ್ ವಾಸಿಯಾಗಲು ನೂತನ ಚಿಕಿತ್ಸೆ ಪಡೆಯಿರಿ’ . ಇಂತಹ ಜಾಹೀರಾತುಗಳನ್ನು ನಾವೆಲ್ಲರೂ ಕಂಡಿದ್ದೇವೆ.
ಆ ಜಾಹೀರಾತು ನೀಡುವವರು ಅಸಹಾಯಕರ ತೀವ್ರ ಆಶೆಗಳನ್ನು ದುರುಪಯೋಗಪಡಿಸಿಕೂಂಡು, ಅವರಿಂದ ಮೋಸದ ವಿಧಾನಗಳಿಂದ ಹಣ ಸುಲಿಗೆ ಮಾಡುತ್ತಾರೆ. ಯಾವುದೋ ದೈಹಿಕ ಅಥವಾ ಮಾನಸಿಕ ತೊಂದರೆಯಿಂದ ಬಳಲುವವರು ಮತ್ತು ಗುಣಪಡಿಸಲಾಗದ ರೋಗಗಳಿಂದಾಗಿ ಸಾವಿನ ಅಂಚಿನಲ್ಲಿರುವವರು ಆರೋಗ್ಯ ಮರುಕಳಿಸುವ ತಮ್ಮ ಸಹಜ ಆಶೆಯಿಂದಾಗಿ ಯಾವುದೇ ಆಶ್ವಾಸನೆ ನಂಬುವ ಸ್ಥಿತಿಯಲ್ಲಿರುತ್ತಾರೆ. ಅಂಥವರ ಈ ಅಸಹಾಯಕತೆಯೇ ಮೋಸದ ಔಷಧಿ ಆಥವಾ ಚಿಕಿತ್ಸೆ ನೀಡುವವರ ಧಂಧೆಯ ಬಂಡವಾಳ. ಯಾರು ಸತ್ತರೆ ಅವರಿಗೇನಂತೆ?
ಎತ್ತರ ಹೆಚ್ಚಿಸಲು ಮಾತ್ರೆ!
ಹೂಗುಚ್ಚದೊಂದಿಗೆ ನಿಂತಿರುವ ಸೌಂದರ್ಯ ರಾಣಿಯೊಬ್ಟಳು ‘ಲಾಂಗ್ ಲುಕ್ಸ್’ ಕ್ಯಾಪ್ಸೂಲುಗಳ ಪೊಟ್ಟಣವೊಂದನ್ನು ಎತ್ತಿ ಹಿಡಿದು ತೋರಿಸುವ ಜಾಹೀರಾತು ಹರ್ಕುಲಿಸ್ ಹೆಲ್ತ್ ಕೇರ್ ಪ್ರಾಡಕ್ಟ್‌ನದು. ಆ ಕಂಪೆನಿ ಇದನ್ನು ‘ವ್ಯಕ್ತಿಯ ಎತ್ತರ ಹೆಚ್ಚಿಸುವ ಕಾಪ್ಸೂಲ್ – ಇದೊಂದು ಆಯುರ್ವೇದ ಔಷಧಿ’ ಎಂದು ಪ್ರಚಾರ ಮಾಡುತ್ತಿದೆ. ಆ ಕಂಪೆನಿಯ ಹೇಳಿಕೆಯಂತೆ ಲಾಂಗ್ ಲುಕ್ಸ್ 10ರಿಂದ 22 ವರುಷ ಪ್ರಾಯದ ಯುವತಿಯರಿಗೆ ಮತ್ತು 10ರಿಂದ 25 ವರುಷ ಪ್ರಾಯದ ಯುವಕರಿಗೆ ಅತ್ಯುತ್ತಮ ಫಲಿತಾಂಶ ನೀಡುತ್ತದೆ. ಆದರೆ ವ್ಕಕ್ತಿಯ ಎತ್ತರವನ್ನು 16 ವರುಷ ವಯಸ್ಸಿನ ಬಳಿಕ ಹೆಚ್ಚಿಸಲು ಅಸಾಧ್ಯ ಎಂಬುದು ವೈದ್ಯಕೀಯ ಸತ್ಯ. ಯಾಕೆಂದರೆ ಆ ವಯಸ್ಸಿಗೆ ಮನುಷ್ಯನ ದ್ಯೆಹಿಕ ಬೆಳವಣಿಗೆ ನಿಲ್ಲುತ್ತದೆ. ಹಾಗಿರುವಾಗ ಶರೀರದ ಎತ್ತರ ಹೆಚ್ಚಿಸಲು ಲಾಂಗ್ ಲುಕ್ಸ್ ಕ್ಕಾಪ್ಸೂಲಿಗೆ ಹೇಗೆ ಸಾಧ್ಯ? ಎಂಬ ಪ್ರಶ್ನೆಗೆ ಹರ್ಕುಲಿಸ್ ಹೆಲ್ತ್ ಕೇರ್ ಬಳಿ ಉತ್ತರವಿಲ್ಲ. ವ್ಕಕ್ತಿಯ ಶಾರೀರಿಕ ಸ್ಥಿತಿಯನ್ನು ಅವಲಂಬಿಸಿ, ವ್ಯಕ್ತಿಯಿಂದ ವ್ಯಕ್ತಿಗೆ ಫಲಿತಾಂಶ ಬದಲಾಗಬಹುದು ಎಂಬುದು ಆ ಕಂಪೆನಿಯ ಜಾರಿಕೆಯ ಉತ್ತರ.
ಆಹ್ಮದಾಬಾದಿನ ಸಿಇಆರ್ ಸೊಸೈಟ, ಆ ಕಂಪೆನಿಗೆ ಪತ್ರ ಬರೆದು ‘ನಿಮ್ಮ ಹೇಳಿಕೆಗೆ ಪುರಾವೆ ಏನಿದೆ?’ ಎಂದು ಪ್ರಶ್ನಿಸಿತು. ಲಾಂಗ್ ಲುಕ್ಸ್ ಹೊಸ ಉತ್ಪನ್ನವೆಂದೂ ಅದನ್ನು ಖರೀದಿಸಿದವರ ಸಂಖ್ಯೆ ಖಚಿತವಾಗಿ ತಿಳಿದಿದೆಯೆಂದೂ ಕಂಪೆನಿ ಉತ್ತರಿಸಿತು. ತನ್ನ ಉತ್ತರ ಪತ್ರಕ್ಕೆ ಒಂದು ಆಫೀದಾವಿತ್ತನ್ನು ಹರ್ಕುಲಿಸ್ ಹೆಲ್ತ್ ಕೇರ್ ಲಗತ್ತಿಸಿತ್ತು. ಅದು 14 ವರ್ಷದ ಹುಡುಗಿಯೊಬ್ಬಳ ಹೇಳಿಕೆ. ವೈದ್ಯರ ಸಲಹೆ ಪ್ರಕಾರ ಲಾಂಗ್ ಲುಕ್ಸ್ ಬಳಸಿದ ಅವಳ ಎತ್ತರ ಒಂದು ತಿಂಗಳಿನಲ್ಲಿ 2 ಇಂಚು ಹೆಚ್ಚಾಯಿತೆಂದು ಅದರಲ್ಲಿ ಹೇಳಲಾಗಿತ್ತು.
ಆದರೆ 14 ವರ್ಷದ ಹುಡುಗಿಯ ಅಫೀದಾವಿತ್ತಿಗೆ ಕಾನೂನಿನ ಮಾನ್ನತೆ ಇಲ್ಲ! ಯಾಕೆಂದರೆ ಅವಳು ಅಪ್ರಾಪ್ತ ವಯಸ್ಕಳು. ಜೊತೆಗೆ ಅದು ವೈಜ್ಞಾನಿಕ ಪುರಾವೆಯೂ ಅಲ್ಲ. 14 ವರ್ಷ ವ್ಯಕ್ತಿಯ ಸಹಜ ಬೆಳವಣಿಗೆಯ ವಯಸ್ಸು. ಹಾಗಾಗಿ ಶರೀರದ ಎತ್ತರದ ಹೆಚ್ಟಳವು ಅವಳ ಸಹಜ ಬೆಳವಣಿಗೆಯೇ ಆಗಿರಬಹುದು. ಆ ಕಂಪೆನಿಯ ಜಾಹೀರಾತನ್ನು ನೀವು ನಂಬಿದರೆ ಯಾರಿಗೆ ಲಾಭ? ಯೋಚಿಸಿರಿ.
ಸುನೊವಾ ಸ್ಪಿರುಲಿನಾ ಯಾಕೆ? ‘ಸ್ಪಿರುಲಿನಾ ಈ ಭೂಮಿಯ ಸೂಪರ್ ಆಹಾರ ಎಂದು ವಿಶ್ವ ಆಹಾರ ಸುಂಸ್ಥೆ (WHO) ಘೋಷಿಸಿದೆ’. ಎಂಬುದು ಸುನೋವಾ ಬಯೋಕೇರ್ ಸೆಂಟರಿನ ಜಾಹೀರಾತು. ಹೃದಯಬೇನೆ, ಖಿನ್ನತೆ ನಿವಾರಣೆಗೆ, ಸುರಕ್ಷಿತ ಗರ್ಭಧಾರಣೆಗೆ, ಆರೋಗ್ಯ ರಕ್ಷಣೆಗೆ ಎಲ್ಲದಕ್ಕೂ, ಸ್ಪಿರುಲಿನಾ ಸೇವನೆಯೇ ಪರಿಹಾರ
ಎನ್ನುತ್ತದೆ ಜಾಹೀರಾತು. ಸ್ಪಿರುಲಿನಾದ ಕ್ಕಾಪ್ಸ್ಯೂಲ್ ನಿಮ್ಮನ್ನು ಚಿರಂತನ ಆರೋಗ್ಕ ಹಾಗೂ ಯೌವನದಲ್ಲಿ ಇರಿಸುತ್ತದೆ ಎಂದು ಪ್ರಚಾರ ಮಾಡುತ್ತದೆ ಆ ಜಾಹೀರಾತು. ಇದು ಶೇ. 100 ಪ್ರಾಕೃತಿಕ ಉತ್ತನ್ನ ಮತ್ತು ಇದರಿಂದ ಅಡ್ಡ ಪರಿಣಾಮಗಳಿಲ್ಲ ಎಂಬ ಹೆಗ್ಗಳಿಕಯೂ ಜಾಹೀರಾತಿನಲ್ಲಿದೆ.
ಅಹ್ಮದಾಬಾದಿನ ಸಿಇಆರ್ ಸೊಸೈಟಿಯು ಸುನೋವಾ ಬಯೊಕೇರ್ ಸೆಂಟರಿಗೆ ಸ್ಪಿರುಲಿನಾ ಬಗ್ಗೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪುಸ್ತಕದಲ್ಲಿರುವ ಸತ್ಯಾಂಶಗಳನ್ನು ಬರೆದು ತಿಳಿಸಿತು. “ಈ ಪಾಚಿಯ ಕೊಯ್ಲು ದುಬಾರಿ. ಇದನ್ನು ಜೀರ್ಣಿಸಲು ಮನುಷ್ಯರಿಗೆ ಕಷ್ಟ. ಇದರಿಂದಾಗಿ ವಾಂತಿ ಮತ್ತು ತಲೆಸುತ್ತುವಿಕೆ ಇಂತಹ ಗ್ಯಾಸ್ಟ್ರೋ ಇಂಟೆಸ್ಟೈನಲ್ ಸಮಸ್ಯೆಗಳು ಉಂಟಾಗುತ್ತವೆ”. ಈ ಬಗ್ಗೆ ಕಂಪೆನಿಯ ಪ್ರತಿಕ್ರಿಯೆಯನ್ನು ಆಹ್ವಾನಿಸಿತು. ಹಲವಾರು ನೆನಪಿನೋಲೆಗಳನ್ನು ಬರೆದರೂ ಕಂಪನಿ ಉತ್ತರಿಸಲಿಲ್ಲ. ಅಂತಿಮವಾಗಿ ‘ಸ್ಪಿರುಲಿನಾ ಸೇವಿಸಿದ ಕೆಲವು ಜನರಲ್ಲಿ ಗ್ಯಾಸ್ಟ್ರಿಕ್ ತೊಂದರೆಗಳು ಉಂಟಾಗುತ್ತವೆ’ ಎಂದು ಸುನೋವಾ ಬಯೋಕೇರ್ ಸೆಂಟರ್ ಒಪ್ಪಿಕೊಂಡಿತು.
ಆದರೆ ಸ್ಪಿರುಲಿನಾ ಬಗ್ಗೆ WHO ಘೋಷಣೆ ಬಗ್ಗೆ ಸುನೋವಾ ಕಂಪೆನಿ ಉತ್ತರಿಸಲೇ ಇಲ್ಲ! ಯಾಕೆಂದರೆ WHO ಅಂತಹ ಘೋಷಣೆ ಮಾಡಿರಲೇ ಇಲ್ಲ. ಸ್ಪಿರುಲಿನಾದಲ್ಲಿರುವ ‘ಬಿ’ ವಿಟಮಿನ್ಗಳು ಮತ್ತು ಅವಶ್ಯ ಅಮಿನೂ ಆಮ್ಲಗಳು ಉದ್ವೇಗಗೊಂಡ ನರಗಳನ್ನು ತಣಿಸುತ್ತವೆ ಎಂಬುದು ಸ್ಪಿರುಲಿನಾ ಬಗ್ಗೆ ಇನ್ನೊಂದು ಹೇಳಿಕೆ. ಇದನ್ನು ವೈದ್ಕಕೀಯ ತಜ್ಞರು ತಿರಸ್ಕರಿಸಿದ್ದಾರೆ. ಸತ್ಯಸಂಗತಿ ಏನೆಂದರೆ ಸ್ಪಿರುಲಿನಾದಲ್ಲಿ ಇವೆ ಎನ್ನಲಾದ ಪೋಷಕಾಂಶಗಳೆಲ್ಲವೂ ಹಾಲಿನಲ್ಲಿವೆ. ಅಲ್ಲದೆ ಹಾಲು ಅಗ್ಗ ಮತ್ತು ಸುಲಭವಾಗಿ ಜೀರ್ಣವಾಗುತ್ತವೆ. ಹಾಗಿರುವಾಗ ಸ್ಪಿರುಲಿನಾದ 60 ಕ್ಕಾಪ್ಸೂಲುಗಳಿಗೆ (ದಿನಕ್ಕೆ 2ರಂತೆ ಒಬ್ಬರಿಗೆ ಒಂದು ತಿಂಗಳಿಗೆ) 95 ರೂಪಾಯಿ ವೆಚ್ಚಮಾಡುವ ಅಗತ್ಯವೇನಿದೆ?
ಆಕ್ಯುಪ್ರಷರ್ ಚಪ್ಪಲಿ ಬೇಡ
ಕೋಲ್ಕತದ ಆಕ್ಯುಪ್ರೆಷರ್ ಥೆರಪಿ ಹೆಲ್ತ್ ಸೇಂಟರ್, ತನ್ನ ಆಕ್ಯುಪ್ರೆಷರ್ ಚಪ್ಪಲಿ’ಗಳ ಅದ್ಭುತ ಶಕ್ತಿಗಳ ಬಗ್ಗೆ ಆಕರ್ಷಕ ಜಾಹೀರಾತು ನೀಡಿತು. `ಜಗತ್ತಿನಾದ್ಯಂತ ಮಿಲಿಯಗಟ್ಟಲೆ ಜನರು ಈ ಚಪ್ಪಲಿ ಚಿಕಿತ್ಸೆಯಿಂದ ಪೂರ್ಣ ಸಮಾಧಾನ ಪಡೆದಿದ್ದಾರೆ; ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ, ಈ ಚಪ್ಪಲಿ ಮೆಟ್ಟಿಕೊಂಡು ಕೇವಲ 6 ನಿಮಿಷಗಳು ನಡೆದರೆ ಸಾಕು, ಶರೀರದ ಎಲ್ಲ ನೋವುಗಳೂ ಕ್ರಮೇಣ ಮಾಯವಾಗುತ್ತವೆ’ ಎಂದು ಜಾಹೀರಾತಿನಲ್ಲಿ ಆಶ್ವಾಸನೆ ನೀಡಲಾಗಿತ್ತು. ಆ ಚಪ್ಪಲಿಗೆ ‘ವರ್ಲ್ಡ್ ಹೆಲ್ತ್ ಆರ್ಗನೈಸೇಶನ್’ (WHO) ಅನುಮೋದನೆ ಇದೆ ಎಂದೂ ಜಾಹೀರಾತಿನಲ್ಲಿ ಸಾರಲಾಗಿತ್ತು.
ಮಂಗಳೂರಿನ ಬಳಕೆದಾರರ ಶಿಕ್ಷಣ ಟ್ರಸ್ಟ್ (WHO) ಸಂಸ್ಥೆಗೆ ಪತ್ರ ಬರೆದು ಕೇಳಿದಾಗ ಜಾಹೀರಾತಿನ ಸುಳ್ಳು ಹೊರಬಿತ್ತು. (WHO) ಆ ಚಪ್ಪಲಿಗೆ ಅನುಮೋದನೆ ನೀಡಿರಲೇ ಇಲ್ಲ. ಅನಂತರ ಎಂಆರ್‌ಟಿಪಿ ಕಮಿಷನಿಗೆ ದೂರು ಸಲ್ಲಿಸಲಾಯಿತು. ಈ ಬಗ್ಗೆ ತನಿಖೆ ನಡೆಸಿದಾಗ ಆಕ್ಯುಪ್ರೆಷರ್ ಸೆಂಟರಿನ ಹೇಳಿಕೆಗಳು ಆಧಾರರಹಿತವೆಂದು ಖಚಿತವಾಯಿತು. ಅತಿ ರಕ್ತದೊತ್ತಡ ಮತ್ತು ಹೃದಯಬೇನೆ ಇರುವವರು ಆಕ್ಯುಪ್ರೆಷರ್ ಚಪ್ಪಲಿ ಧರಿಸಬಾರದೆಂದು ಜಾಹೀರಾತಿನಲ್ಲಿ ಸೂಚಿಸಿರಲೇ ಇಲ್ಲ. ಬದಲಾಗಿ, ‘ಆಕ್ಯುಪ್ರೆಷರ್ ಚಪ್ಪಲಿಗಳು ಸುರಕ್ಷಿತ’ ಎಂದು ಘೋಷಿಸಲಾಗಿತ್ತು! ಎಂಆರ್‌ಟಿಪಿ ಕಮಿಷನ್ ಆ ಚಪ್ಪಲಿಯ ಜಾಹೀರಾತು ಮತ್ತು ಮಾಹಿತಿ ಪತ್ರ ಪ್ರಕಟಿಸುವುದನ್ನು ನಿಷೇಧಿಸಿತು. ಕರ್ನಾಟಕ ಮತ್ತು ಮಹಾರಾಷ್ಟ ಸರಕಾರಗಳ ಆರೋಗ್ಕ ಇಲಾಖೆಗಳು ತಮ್ಮ ರಾಜ್ಕದ ಪತ್ರಿಕೆಗಳು ಮತ್ತು
ನಿಯತಕಾಲಿಕೆಗಳು ಆ ಚಪ್ಪಲಿಯ ಚಾಹೀರಾತನ್ನು ಪ್ರಕಟಿಸಬಾರದೆಂದು ನಿಷೇಧ ವಿಧಿಸಿದವು.
ದಂಡ ತೆತ್ತ ಶೆರ್ರಿ ಲೂಯಿಸ್
ಚಿಕಿತ್ಸೆಯ ಜಾಹೀರಾತುಗಳಲ್ಲಿ ಎಂಥ ಸುಳ್ಳುಗಳನ್ನು ಹೇಳಬಹುದೆಂಬುದಕ್ಕೆ ಕುಪ್ರಸಿದ್ದ ಉದಾಹರಣೆ . ‘ಶೆರ್ರಿ
ಲೊಯಿಸ್ ಮೈತೂಕ ಇಳಿಸುವ ಚಿಕಿತ್ಸೆ’. ತಮ್ಮ ಚಿಕಿತ್ಸೆ ಪಡೆಯುವವರೆಲ್ಲ ಯಾವುದೇ ಔಷಧಿ, ವ್ಯಾಯಾಮ, ಉಪವಾಸ ಮತ್ತು ಸಾಧನಗಳಿಲ್ಲದೆ ಕೇವಲ 23 ದಿನಗಳಲ್ಲಿ 10 ಕಿಲೋ ಮ್ಮೆತೂಕ ಕಳೆದುಕೊಳ್ಳುತ್ತಾರೆ ಎಂದು ಶೆರ್ರಿ ಲೂಯಿಸ್ ಪ್ರಸಿದ್ದ ಪತ್ರಿಕೆಗಳಲ್ಲಿ ಅಬ್ಬರದ ಜಾಹೀರಾತು ಪ್ರಕಟಿಸಿತು. “ಇದು ಅಪ್ಪಟ ಸುಳ್ಳು ಜಾಹೀರಾತು” ಎಂದು ಅಹ್ಮದಾಬಾದಿನ ಸೀಇಆರ್ ಸೊಸೈಟಿ ಸಾಧಿಸಿತು. ಶೆರ್ರಿ ಲೂಯಿಸ್ ನ ‘ವಿಶೇಷ ತಿನಿಸಿ’ನಲ್ಲಿ ಹಸಿವು ತಗ್ಗಿಸುವ ಔಷಧಿ ಅಂಫೆಟಾಮಿನ್ ಇದೆಯೆಂದು ತಿಳಿದು ಬಂತು; ಇದರಿಂದ ಗಂಭೀರ ಅಡ್ಡ ಪರಿಣಾಮಗಳುಂಟಾಗುತ್ತವೆ ಎಂಬುದು ವೈಜ್ಞಾನಿಕ ಸತ್ಯ. ಈ ಚಿಕಿತ್ಸೆಯನ್ನು ಜಾಹೀರಾತಿನಲ್ಲಿ ಶಿಫಾರಸು ಮಾಡಿದ್ದ ವೈದ್ಯರು ಶೆರ್ರಿ ಲೂಯಿಸ್ನ ಒಬ್ಬ ಉದ್ಯೋಗಿ ಎಂಬ ಸತ್ಯವೂ ಹೊರಬಿತ್ತು.
ಶೆರ್ರಿ ಲೂಯಿಸ್ ಪ್ರಕರಣವನ್ನು ಎಂಆರ್ ಟಿಪಿ ಕಮಿಷನಿಗೆ ಸಿಇಆರ್ ಸೊಸೈಟಿ ಒಯ್ದಾಗ ಡೈರೆಕ್ಟರ್ ಆಫ್ ಇನ್‌ವೆಸ್ಟಿಗೇಷನ್ಸ್ ತನಿಖೆ ನಡೆಸಿದರು. ಈ ಚಿಕಿತ್ಸೆಯನ್ನು ಮೂಲತಃ ಯುಎಸ್ಎ ದೇಶದ ಸನ್‌ರ್ಯಾಪ್ ಕಂಪೆನಿ ಸಾದರಪಡಿಸಿತ್ತು; ಅನೇಕ ರೋಗಿಗಳು ಚಿಕಿತ್ಸೆಯಿಂದ ಬಾಧೆ ಪಟ್ಟಿದ್ದರಿಂದಾಗಿ ಯುಎಸ್ಎಯ ಪಬ್ಲಿಕ್ ಹೆಲ್ತ್, ಡಿಪಾರ್ಟ್‌ಮೆಂಟ್ ಸನ್‌ರ್ಯಾಪ್ ನ್ನು ನಿಷೇಧಿಸಿದೆ ಎಂದು ತನಿಖೆಯಿಂದ ತಿಳಿದುಬಂತು. ಹಾಗಾಗಿ ಶೆರ್ರಿ ಲೂಯಿಸ್‌ನ ಸುಳ್ಳು ಜಾಹೀರಾತನ್ನು ಎಂಆರ್ಟಿಪಿ ಕಮಿಷನ್ ನಿಷೇಧಿಸಿತು. ಅಷ್ಟೇ ಅಲ್ಲ ಜಾಹೀರಾತು ಪ್ರಕಟವಾದ ಎಲ್ಲ ಪತ್ರಿಕೆಗಳಲ್ಲೂ ‘ತಪ್ಪೊಪ್ಪಿಗೆ ಜಾಹೀರಾತು’ಗಳನ್ನು 3 ಬಾರಿ ಪ್ರಕಟಿಸಬೇಕೆಂದು ಕಮಿಷನ್ ವಿಧಿಸಿತು. ಶೆರ್ರಿ ಲೂಯಿಸ್ ಚಿಕಿತ್ಸೆಯಿಂದ ದ್ಯೆಹಿಕ ಹಾಗೂ ಮಾನಸಿಕ ಹಿಂಸೆ ಅನುಭವಿಸಿದ ಬಳಕೆದಾರರೂಬ್ಬರಿಗೆ ರೂ. 5 ಲಕ್ಷ
ಪರಿಹಾರವನ್ನೂ ಕಮಿಷನ್ ಆದೇಶಿಸಿತು. ಸಿಇಆರ್ ಸೊಸೈಟಿಗೆ ರೂ. 37,234 ವೆಚ್ಟ ಪಾವತಿಸಬೇಕೆಂದೂ ಆಜ್ಞಾಪಿಸಿತು. ಅಂತಿಮವಾಗಿ ಶೆರ್ರಿ ಲೂಯಿಸ್ ತನ್ನ ಆಫೀಸ್ ಮುಚ್ಚಿ ಅಪ್ರಾಮಾಣಿಕ ವ್ಕವಹಾರವನ್ನೇ ನಿಲ್ಲಿಸಿತು!
‘ಫಿಗರಿನ್’ ಕ್ಯಾಪ್ಸೂಲ್ ಗಳು
ಜಾಹೀರಾತುಗಳಿಂದ ಮೋಸ ಮಾಡುವವರು ಶೆರ್ರಿ ಲೂಯಿಸ್ ಪ್ರಕರಣದಿಂದ ಪಾಠ ಕಲಿತಿಲ್ಲ ಎಂಬುದಕ್ಕೆ
ಇನ್ನೊಂದು ಉದಾಹರಣೆ . ‘ಫಿಗರಿನ್’ ಕ್ಯಾಪ್ಸೂಲ್ ಗಳ ಜಾಹೀರಾತು. ಲಲನೆಯೊಬ್ಬಳ ಚಿತ್ರದೊಂದಿಗೆ ಅದು ಪತ್ರಿಕೆಗಳಲ್ಲಿ ಪ್ರಕಟವಾಯಿತು. ಮೂರು ತಿಂಗಳುಗಳ ಅವಧಿ ದಿನಕ್ಕೆರಡು ಕ್ಯಾಪ್ಸೂಲ್ ನುಂಗಿದರೆ ‘ಇನ್ನಷ್ಟು ಹಗುರ, ಸಪೂರ ಶರೀರದವರಾಗಿ ತಾರುಣ್ಯ, ಆತ್ಮವಿತ್ಯಾಸ ಪಡೆಯುತ್ತೀರಿ’ ಎಂಬ ಆಶ್ವಾಸನೆ ನೀಡಿತು. ಪೋಷಕಾಂಶರಹಿತ ಆಹಾರ ತಿಂದರೂ, ಸೋಮಾರಿತನದಿಂದ ವ್ಯಾಯಮ ಮಾಡದಿದ್ದರೂ, ನೀವು ಕ್ಕಾಪ್ಸೂಲ್ ನುಂಗಿದರೆ ಸಪೂರ ಬಳಕುವ ಶರೀರ ಪಡೆಯುತ್ತೀರಿ ಎಂದೂ ಜಾಹೀರಾತು ಸೂಚಿಸಿತು.
‘ಫೀಗರಿನ್’ ಉತ್ತಾದಕರಾದ ಮುಂಬಯಿ ಅಜಂತಾ ಫಾರ್ಮಾ ಲಿಮಿಟೆಡ್ ಗೆ ಸಿಇಆರ್ ಸೊಸೈಟಿ ಪತ್ರ ಬರೆದು ‘ಡ್ರಗ್ಸ್ ಅಂಡ್ ಮ್ಯಾಜಿಕ್ ರೆಮೆಡಿಸ್ (ಆಕ್ಷೇಪಾರ್ಹ ಜಾಹೀರಾತು) ಕಾನೂನು 1950, ಸ್ಥೂಲಕಾಯ ಸರಿಪಡಿಸುವ ಅಶ್ವಾಸನೆ ನೀಡುವ ಯಾವುದೇ ಔಷಧಿಯ ಚಾಹೀರಾತನ್ನು ನಿಷೇಧಿಸುತ್ತದೆ’ ಎಂದು ಆಕ್ಷೇಪ ತಿಳಿಸಿತು. ಸಿಇಆರ್ ಸಿ ಸೊಸೈಟಿಯು ಬ್ರಿಟಿಷ್ ಕೋಡ್ ಆಫ್ ಎಡ್ವಟೈಸಿಂಗ್ ಕಂಪೆನಿಯ ಗಮನ ಸೆಳೆದು, ಈ ಚಿಕಿತ್ಸೆಯು ಪರಿಣಾಮಕಾರಿ, ವಿಷರಹಿತ ಹಾಗೂ ಸುರಕ್ಷಿತ ಎಂಬ ಘೋಷಣೆಗಳನ್ನು ಸಾಬೀತುಪಡಿಸಲು ವಿನಂತಿಸಿತು. ಆ ಕೋಡ್ ಪ್ರಕಾರ, ಅಧಿಕ ಪರಿಣಾಮ ಅಥವಾ ವಿನೂತನ ಚಿಕಿತ್ಸಾ ವಿಧಾನದ ಯಾವುದೇ ಘೋಷಣೆಯು ಮನುಷ್ಯರ ಮೇಲೆ
ನಡೆಸಿದ ಪ್ರಯೋಗಗಳನ್ನು ಆಧರಿಸಿರಬೇಕು.
ಈ ಪ್ರಶ್ನೆಗಳಿಗೆ ಅಜಂತಾ ಫಾರ್ಮಾ ನಿರ್ಧಿಷ್ಟ ಉತ್ತರಗಳನ್ನು ಕೊಡಲಿಲ್ಲ. ಕ್ಕಾಪ್ಸೂಲ್ ಗಳನ್ನು ನುಂಗಿದರೂ ಮೈತೂಕ ಇಳಿಯದ ಬಳಕೆದಾರರಿಗೆ ಯಾವ ಪರಿಹಾರ ನೀಡಲಾಗುತ್ತದೆ ಎಂಬ ನೇರ ಪ್ರಶ್ನೆಯನ್ನೂ ಕಂಪೆನಿಯನ್ನು ಉತ್ತರಿಸಲೇ ಇಲ್ಲ. ಅಂತಿಮವಾಗಿ ಅಜಂತಾ ಫಾರ್ಮಾ ತಪ್ಪು ಜಾಹೀರಾತನ್ನು ತಿದ್ದಲು ಒಪ್ಪಿಕೊಂಡಿತು.
ನೀವೇನು ಮಾಡಬಹುದು?
ಮೋಸದ ಚಿಕಿತ್ಸಾ ಜಾಹೀರಾತು ಪ್ರಕಟಿಸುತ್ತಿರುವ ತಯಾರಕರು, ಮಾರಾಟಗಾರರು, ಕಂಪೆನಿಗಳು, ಚಿಕಿತ್ಸಾಲಯಗಳು ಮತ್ತು ನಕಲಿ ವೈದ್ಕರ ಬಗ್ಗೆ ನಿಮ್ಮೂರಿನ ಬಳಕೆದಾರರ ವೇದಿಕಗೆ ಮತ್ತು ಕನ್ಸೂಮರ್ ಎಜುಕೇಶನ್ ಅಂಡ್ ರೀಸರ್ಚ್ ಸೊಸೈಟಿ, ಸುರಕ್ಷಾ ಸಂಕೂಲ್, ತಾಲ್‌ತೆಜ್, ಅಹ್ಮದಾಬಾದ್ 380 054 ಇವರಿಗೆ ಬರೆದು ತಿಳಿಸಿರಿ.
ಚಿಕಿತ್ಸಾ ಜಾಹೀರಾತುಗಳ ಗುಟ್ಟು ರಟ್ಟಾಗಲು…
ಮೋಸದ ಔಷಧಿ ಅಥವಾ ಚಿಕಿತ್ಸೆಯ ಜಾಹೀರಾತಿನ ಗುಟ್ಟು ನೀವೇ ರಟ್ಟು ಮಾಡಬಹುದು. ಅದಕ್ಕೆ ವಿಶೇಷ ಪರಿಣತಿ ಬೇಕಾಗಿಲ್ಲ. ಆ ಜಾಹೀರಾತುಗಳಲ್ಲಿ ಹೊಸ ವೈಜ್ಞಾನಿಕ ಅವಿಷ್ಕಾರ, ಅದ್ಭುತ ಚಿಕಿತ್ಸೆ, ಶೀಘ್ರ ಮತ್ತು ಪರಿಣಾಮಕಾರಿ ಚಿಕಿತ್ಸೆ ಎಂಬಂತಹ ಘೋಷಣೆ ಗಳಿವೆಯೇ ಎಂದು ಪರಿಶೀಲಿಸಿರಿ. ಇಂತಹ ಪೊಳ್ಳು ಘೋಷಣೆಗಳೇ ಅವುಗಳ ಮೋಸಕ್ಕೆ ಸಾಕ್ಷಿ.
ಆ ಜಾಹೀರಾತುಗಳಲ್ಲಿ ಚಿಕಿತ್ಸೆ ಪಡೆದವರ ಫೋಟೋ ಮತ್ತು ಹೇಳಿಕೆಗಳಿದ್ದರೆ ಅವು ಮೋಸಕ್ಕೆ ಇನ್ನೊಂದು ಸಾಕ್ಷಿಯಾಗಬಹುದು. ಅಂತಹ ಹೇಳಿಕೆಗಳಿಗೆ ವೈಜ್ಞಾನಿಕ ಪುರಾವೆ ಇದೆಯೇ ಎಂದು ಗಮನಿಸಿರಿ. ಇಲ್ಲವಾದರೆ ಆ ಹೇಳಿಕೆಗಳೂ ಅಮಾಯಕರನ್ನು ದಾರಿ ತಪ್ಪಿಸುವ ವಂಚನಾ ವಿಧಾನಗಳು. ಔಷಧಿಯು ಏಕಮಾತ್ರ ಸ್ಥಳದಲ್ಲಿ ಸಿಗುತ್ತದೆ ಮತ್ತು ಹಣವನ್ನು ಮುಂಗಡ ಪಾವತಿಸಿದರೆ ಮಾತ್ರ ಸಿಗುತ್ತದೆ ಎಂಬ ಸೂಚನೆ ಜಾಹೀರಾತಿನಲ್ಲಿ ಇದ್ದರಂತೂ, ಅದು ಜನರಿಂದ ಹಣ ಸುಲಿಯುವ ತಂತ್ರ ಎಂಬುದಕ್ಕೆ ಬೇರಾವ ಪುರಾವೆಯೂ ಅಗತ್ಕವಿಲ್ಲ.
‘ರೋಗ ವಾಸಿಯಾಗದಿದ್ದರೆ ಹಣ ವಾಪಸು’ ಎಂಬ ಗ್ಯಾರಂಟಿ ನೀಡುವ ಜಾಹೀರಾತುಗಳನ್ನು ನಂಬಲೇಬಾರದು. ಯಾಕೆಂದರೆ ನಿಮಗೆ ಮೋಸ ತಿಳಿಯುವಾಗ ಗ್ಯಾರಂಟಿ ಕೊಟ್ಟವರೇ ಊರು ಬಿಟ್ಟು ಪರಾರಿ ಆಗಿರಬಹುದು. ಮಾತ್ರವಲ್ಲ, ಹಣ ವಾಪಾಸು ಬಂದರೂ ಮೋಸದ ಚಿಕಿತ್ಸೆಗೆ ಬಲಿಯಾದ ಜೀವ ವಾಪಾಸು ಬರುತ್ತದೆಯೇ?
********************************************
ಗುಣಪಡಿಸಲಾಗದ ರೋಗಗಳು
ಕ್ಕಾನ್ಸರ್, ಏಡ್ಸ್ ಮತ್ತು ಧನುರ್ವಾತ – ಇವು ಗುಣಪಡಿಸಲಾಗದ ಮೂರು ಮುಖ್ಯ ರೋಗಗಳು.
ಅನಗತ್ಯವಾಗಿ ಶರೀರದಲ್ಲಿ ಮಾಂಸ ಬೆಳೆಯುವ ವಿವಿಧ ರೋಗಗಳನ್ನು ಕ್ಕಾನ್ಸರ್ ಎಂದು ಕರೆಯಲಾಗುತ್ತದೆ. ಬೇರೆ ಬೇರೆ ಕ್ಕಾನ್ಸರ್ ಗಳಿಗೆ ಪರಿಣತ ವೈದ್ಕರೇ ನಿರ್ಧರಿಸಬೇಕಾದ ಪ್ರತ್ಯೇಕ ಚಿಕಿತ್ಸೆಗಳ ಅಗತ್ಯವಿದೆ. ಆದ್ದರಿಂದ ಬೇರೆ ಬೇರೆ ಕ್ಕಾನ್ಸರ್ ಗಳನ್ನು ಒಂದೇ ಚಿಕಿತ್ಸೆಯಿಂದ ಗುಣಪಡಿಸಲು ಸಾಧ್ಯವಿಲ್ಲ. ಇದನ್ನು ತಿಳಿಯದ ರೋಗಿಗಳು ಕ್ಯಾನ್ಸರ್ ವಾಸಿ ಮಾಡುವ ಜಾಹೀರಾತಿನ ಮೋಸಕ್ಕೆ ಬಲಿಯಾಗಿ ಹಣ ಕಳೆದುಕೊಳ್ಳುತ್ತಾರೆ.
ಏಡ್ಸ್ ರೋಗವನ್ನು ಸಂಪೂರ್ಣ ಗುಣಪಡಿಸುವ ಚಿಕಿತ್ಸೆ ಇಲ್ಲ. ಕೆಲವು ಚಿಕಿತ್ಸೆಗಳಿಂದ ಏಡ್ಸ್ ರೋಗಿಗಳ ಸಾವನ್ನು ಕೆಲವು ದಿನ ಮುಂದೂಡಬಹುದು ಅಷ್ಟೇ. ಆದರೂ ಏಡ್ಸ್ ವಾಸಿ ಮಾಡುವ ಔಷಧಿ / ಚಿಕಿತ್ಸೆಯ ಜಾಹೀರಾತು ಕಂಡಾಗ ರೋಗಿ ಬದುಕುವ ಬಯಕೆಯಿಂದ ಅದಕ್ಕಾಗಿ ಹಣ ಚೆಲ್ಲಲು ತಯಾರಾಗುತ್ತಾನೆ.
ಧನುರ್ವಾತ ವಯಸ್ಸಾದವರನ್ನು ಬಾಧಿಸುವ ಸಾಮಾನ್ಯ ರೋಗ. ಇದಕ್ಕೆ ವೈದ್ಕರಿಂದಲೇ ಚಿಕಿತ್ಸೆ ಪಡೆಯಬೇಕು. ಜಾಹೀರಾತಿನ ಚಿಕಿತ್ಸೆ ನಂಬಿದರೆ ಹಣ ಕೈ ಬಿಡುತ್ತದೆ, ಮಾತ್ರವಲ್ಲ ರೋಗಭಾಧೆ ಜೋರಾದೀತು.
ಗುಣಪಡಿಸಲಾಗದ ಇಂತಹ ರೋಗಗಳಿಗೆ ಅವೈಜ್ಞಾನಿಕ ಚಿಕಿತ್ಸೆ ಪಡೆದರೆ ರೋಗಿಗಳಿಗೆ
ಮೆಡಿಕ್ಲೈಂ ಪಾಲಿಸಿಗಳಿಂದ ಪರಿಹಾರವೂ ಸಿಗಲಿಕ್ಕಿಲ್ಲ.
********************************************
ಉದಯವಾಣಿ9-1-2003