ಈಗಿರುವ ಪ್ಲಾಸ್ಟಿಕ್ ವಾಯುಮಾಲಿನ್ಯ, ಜಲಮಾಲಿನ್ಯ, ಮಾಡುತ್ತ ಮನುಕುಲಕ್ಕೆ ಮಾರಕವಾಗಬಲ್ಲದೆಂದು ಎಲ್ಲರಿಗೂ ಗೊತ್ತಿರುವ ವಿಷಯ. ಎಷ್ಟು ವರ್ಷಗಳಾದರೂ ಮಣ್ಣಿನಲ್ಲಿ ಕರಗದ ಈ ಪ್ಲಾಸ್ಟಿಕ್ ಅಸಂಖ್ಯಾತ ಮೂಕ ಪ್ರಾಣಿಗಳ ಬಲಿ ತೆಗೆದುಕೊಂಡಿದ್ದರೆ, ಭೂಮಿಯನ್ನು ಶುಷ್ಕಗೊಳಿಸುವಲ್ಲಿ ಅತಂಕಗೊಳಿಸಿ ಸಸ್ಯಗಳ ಬೆಳವಣಿಗೆ- ಯಾದಂತೆ ಮಾಡುತ್ತಿರುವುದೊಂದು ದುರಂತ. ಈ ಕಾರಣವಾಗಿ ಪರಿಸರಕ್ಕೆ ಮಾರಕವಾಗದೇ ಇರುವ ಮತ್ತು ಈಗಿನ ಪ್ಲಾಸ್ಟಿಕ್‌ನಂತೆ ಪಾರದರ್ಶಕವಾಗಿರುವ ಹೊಸ ಆವಿಷ್ಕಾರದ ಶೋಧನೆಯನ್ನು ವಿಜ್ಞಾನಿಗಳು ಮಾಡುತ್ತಲೇ
ಬರುತ್ತಿದ್ದಾರೆ.
ಕ್ರಿ.ಶ. 1879ರಲ್ಲಿಯೇ ಮಣ್ಣಿನಲ್ಲಿ ಕರಗಿ ಹೋಗುವ ಸಕ್ಕರೆಯ ಕಣಗಳಿಂದ ತಯಾರಿಸಿದ ಪ್ಲಾಸ್ಟಿಕ್ ಅನ್ನು ಅಮೇರಿಕದ ಮುದ್ರಕರೊಬ್ಬರು ಮೊಟ್ಟ ಮೊದಲ ಬಾರಿಗೆ ತಯಾರಿಸಿದ್ದರು. ಇದು ಬೆಳವಣಿಗೆ ಹೊಂದುವುದರಲ್ಲಿಯೇ 1909ರಲ್ಲಿ ಪೆಟ್ರೋಲಿಯಂ ಆಧಾರಿತ ಕೃತಕ ಪ್ಲಾಸ್ಟಿಕ್ ಬಂದ ನಂತರ ಮೊದಲಿನ ಪ್ಲಾಸ್ಟಿಕ್ ಮೂಲೆ ಗುಂಪಾಗಿ ಹೋಯಿತು.
ನಂತರ ಇದೇ ಒಂದು ಪರಿಸರಕ್ಕೆ ಮಾರಕವಾಗಿ ಕಾಡತೊಡಗಿತು.
ಸರಳವಾದ ಕ್ರಾಂತಿಕಾರಿ ತಂತ್ರ ಬಳಸಿ ಪ್ಲಾಸ್ಟಿಕ್ ತಯಾರಿಸಿದಲ್ಲಿ ಈ ಭೂಖಂಡ ಬಚಾವಾಗುವುದೆಂದು ಅರಿತ ವಿಜ್ಞಾನಿಗಳು “ಅಲ್ಕಾನಿಗೇನಿಸ್” ಒಂದು ಜಾತಿಯ ಬ್ಯಾಕ್ಟೀರಿಯಾದ ದೇಹದಲ್ಲಿ ಪ್ಲಾಸ್ಟಿಕ್‌ನಂತಹ ವಸ್ತುಸಂಗ್ರಹ- ವಾಗುತ್ತದೆಂದು ತಿಳಿಯಿತು. ಈ ಏಕಕೋಶ ಜೀವಿಗಳಲ್ಲಿ ತಮ್ಮ ತೂಕದ ಶೇಕಡ 99 ಭಾಗ ಪ್ಲಾಸ್ಟಿಕ್ ಜಿಗುಟು ದ್ರವ ಇದೆ ಎಂದು ವರ್ಜಿನಿಯಾದ ವಿಜ್ಞಾನಿಗಳು ಕಂಡುಹಿಡಿದರು. ಈ ಬ್ಯಾಕ್ಟೀರಿಯಾಗಳ ವಂಶವಾಹಿನಿಯನ್ನು ಅಭಿವೃದ್ಧಿ ಪಡಿಸಿ ಅಗತ್ಯವಿರುವಷ್ಟು ಪ್ಲಾಸ್ಟಿಕ್ ತಯಾರಿಸಬಹುದು. ಈ ತಂತ್ರವನ್ನು ಅಮೇರಿಕಾದಂತಹ ದೇಶವು ಹಿಂದುಳಿದ ರಾಷ್ಟ್ರಗಳಿಗ ಬಿಟ್ಟು ತೊಡದೇ ತಮ್ಮ ಹಳೆ ತಂತ್ರಜ್ಞಾನವನ್ನೇ ಸಾಗುಹಾಕುತ್ತದಾದ್ದರಿಂದ ಈಗಿನ ಪ್ಲಾಸ್ಟಿಕ್ ಸುಗ್ಗಿ ಹೆಚ್ಚಿ ಪರಿಸರ ನಾಶವಾಗುತ್ತಿರುವುದು. ಮುಂದೊಂದು ದಿನ ಈ ಹೊಸ ಫಲಶೃತಿಯನ್ನು ಅನುಭವಿಸುವ
ಕಾಲವೂ ಬರಬಹುದು.
ಇನ್ನೊಂದು ಸಂತೋಷದ ಸುದ್ದಿ ಎಂದರೆ ಜೋಳದ ತೆನೆಯಿಂದ ಹಾಗೂ ಕಾಳುಗಳಿಂದ ಮಣ್ಣಿನಲ್ಲಿ ಒಂದಾಗುವ ಪ್ಲಾಸ್ಟಿಕ್ ಅನ್ನು ತಯಾರಿಸಿಬುದೆಂದು ಇನ್ನೊಂದೆಡೆ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅಮೇರಿಕಾದ ರಾಷ್ಟ್ರೀಯ ಪ್ರಯೋಗ ಶಾಲೆಯಲ್ಲಿ ಅಲೂಗಡ್ಡೆ ಸಿಪ್ಪೆಯಿಂದ ಪ್ಲಾಸ್ಟಿಕ್‌ನ್ನು ಈಗಾಗಲೇ ತಯಾರಿಸುತ್ತಿದ್ಧಾರೆ. ಉತ್ತರ ಭೂಭಾಗದಲ್ಲಿ ವಾಸಿಸುವ ಜನರು ರಾಶಿ ರಾಶಿ ಆಲೂಗಡ್ಡೆಯನ್ನು ತಿನ್ನುತ್ತಾರೆ ಮತ್ತು ಬಹುತೇಕ ಕಡೆ ಆಲೂಗಡ್ಡೆ- ಯನ್ನು ಯತೇಚ್ಚವಾಗಿ ಬೆಳೆಯಲಾಗುತ್ತದೆ. ಈ ಸಿಪ್ಪೆಯನ್ನೆಲ್ಲ ಪ್ಲಾಸ್ಟಿಕ್ ತಯಾರಿಸಲು ಬಳಸಿದರೆ ಇಂದಿನ ಪರಿಸರ
ಮಾಲಿನ್ಯದ ಸಮಸ್ಯೆಗ ಉತ್ತರ ಸಿಗಬಹುದು. ಇದು ಜೈವಿಕ ಪ್ಲಾಸ್ಟಿಕ್ ತಯಾರಿಸುವ ತಂತ್ರವಾಗಿದೆ.
*****