ಮಾನವನ ವಂಶವಾಹಿನಿಯಲ್ಲಿರುವ ಸುಮಾರು 3 ಬಿಲಿಯನ್ D.N.A. ಗಳಲ್ಲಿ ಶೇ.25 ರಷ್ಟು ವ್ಯಾಧಿಕಾರಕವೆ೦ದು ಗುರುತಿಸಲಾಗಿದೆ.. ಇದನ್ನೇ ಆಧಾರವಾಗಿಟ್ಟುಕೊ೦ಡು ಆಯಾ ವ೦ಶವಾಹಿನಿಗಳು ಉಂಟುಮಾಡುವ ರೋಗಗಳನ್ನು ತಡೆಗಟ್ಟಲು ಸಮರ್ಥವಾದ ಔಷಧಿಗಳನ್ನು ವಿಜ್ಞಾನಿಗಳು ಕಂಡುಹಿಡಿಯಲಿದ್ದಾರೆ. ಇದರಿ೦ದ ರೋಗಿಯ ‘ಬಯೋಕೆಮಿಸ್ಟ್ರಿ’ ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ಚುಚ್ಚುಮದ್ದಿನ ಪ್ರಾಮುಖ್ಯತೆ ಕಡಿಮೆಯಾಗುತ್ತದೆ. ಅಸ್ತಮಾಗೆ ಉಪಯೋಗಿಸುವ ‘ಇನ್‌ಹೇಲರ್’ ಗಳಂತೆ ಉಸಿರಿನೊಂದಿಗೆ ಎಳೆದುಕೊಳ್ಳುವ ರೂಪದಲ್ಲಿ ಹಲವಾರು ಔಷಧಿಗಳು ಮಾರುಕಟ್ಟೆಗೆ ಬರಲಿದೆ. ನಾವು ಪ್ರತಿದಿನ ತಿನ್ನುವ ಆಹಾರದೂ೦ದಿಗೆ ದೇಹದೊಳಗೆ ಸೇರುವ ಔಷಧಿಗಳು ನಿರ್ದಿಷ್ಟ ಸಮಯದಲ್ಲಿ ಮಾತ್ರ ಕೆಲಸ ಮಾಡುವ ಮಾತ್ರೆಗಳು ಬರುತ್ತವೆ. ಗಂಭೀರ ಆಹಾರ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸುಲಭವಾಗಿ ಉಪಯೋಗಿಸಲು ಮತ್ತು ಶೀಘ್ರ ಉಪಶಮನವನ್ನು ನೀಡುವ ಔಷಧಿಗಳು ಅಂಗಡಿಗಳಿಗೆ ಬರಲಿದೆ. ಮುಖ್ಯವಾಗಿ ಟಿ.ಬಿ., ಏಡ್ಸ್‌ನಂತಹ ಭಯ೦ಕರ ವ್ಯಾಧಿಗಳಿಗೂ ಕೂಡ ದಿನಕ್ಕೊಂದು ಮಾತ್ರೆ ಸಾಕು, ಎಂಬ ಕಾಲ ಬರಲಿದೆ.
ಕೆಲವು ಔಷಧಿಗಳು ಬಕ್ಕತಲೆಯ ಮೇಲೆ ಕೂದಲು ಬೆಳೆಸಲು ಉಪಯೋಗವಾದರೆ, ಕೂದಲು ಉದುರುವುದನ್ನು ತಡೆಗಟ್ಟುವಂಥಹ ಔಷಧಿಗಳನ್ನು ಚಿಕಾಗೋ ವಿಶ್ವವಿದ್ಯಾನಿಲಯದ ಸ೦ಶೋಧನಾವೃಂದವು ವಿಧಾನವನ್ನು (ಹೊಸ) ಕಂಡುಹಿಡಿದಿದೆ. ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯಕ್ಕೆ ಸೇರಿದ ಹೆಚ್.ಲೀ. ಸ್ಟೀನಿ ಎ೦ಬ ವಿಜ್ಞಾನಿ ಕಾಸ್ಮೆಟಿಕ್‌ಡ್ರಗ್ ಅನ್ನು ಕಂಡು ಹಿಡಿದಿದ್ದಾರೆ. ಇವರು ಕೂದಲು ಬೆಳೆಸಲು ಮತ್ತು ಜ್ಞಾಪಕಶಕ್ತಿಯನ್ನು, ಬುದ್ಧಿವಂತಿಕೆಯನ್ನು ಹೆಚ್ಚಿಸಲು ಕೂಡ ಔಷಧಿಯನ್ನು ಕಂಡುಹಿಡಿಯುತ್ತಲಿದ್ದಾರೆ. ಇತ್ತೀಚೆಗೆ ವಿಜ್ಞಾನಿಗಳು ಉದ್ರೇಕ, ಮಾನಸಿಕ ಒತ್ತಡಗಳಿಗೆ ಕಾರಣವಾದ ವ೦ಶವಾಹಿನಿಯನ್ನು ಗುರುತಿಸಿದ್ದಾರೆ. ಮಧ್ಯಪಾನ, ಮಾದಕ ದ್ರವಗಳ ಚಟಕ್ಕೆ ಕಾರಣವಾಗುವ ವ೦ಶವಾಹಿನಿಯನ್ನು ಗುರುತಿಸಲಾಗಿದೆ.