ಜೀವಜಂಗುಳಿಯು ಇಷ್ಟು ಹೊತ್ತಿನವರೆಗೆ ಎಲ್ಲವನ್ನೂ ಕೇಳಿಕೊಂಡು, ಸೈವೆರದಾಗಿ ಸಂಗಮಶರಣನನ್ನು, ಮಹಾಜನನಿಯನ್ನೂ ಕಣ್ತುಂಬ ಮನ ತುಂಬ ನೋಡಿ ನೋಡಿ, ” ಧನ್ಯ! ಧನ್ಯ!! ” ಎಂದು ಉದ್ಗರಿಸಿತು. ತಾನು
ಕೇಳಿದ ವಿಚಾರಗಳಲ್ಲಿ ಒಂದೊ೦ದನ್ನು ನೆನೆಯುತ್ತ ಕ್ಷಣಹೊತ್ತು ಮೆಲಕುಹಾಕಿತು. ಎಲ್ಲರೂ ಅಂತರ್ಮುಖರಾದರು. ಎಲ್ಲವೂ ನಿಸ್ತಬ್ಧವಾಯಿತು ಮಹಾ ಮೌನವೊಂದು ತಾನೇ ತಾವಾಗಿ ನಿಂತಿತು. ನಿಶ್ಶಬ್ಬವೇ ಆ ಮಹಾ ಮೌನದ ವಾಣಿಯಾಯಿತು.
“ಮಕ್ಕಳೇ, ನಿಮ್ಮ ಸಂದೇಹಗಳೆಲ್ಲ ಪರಿಹಾಕಾರವಾದ ಹಾಗಾಯಿತೇ?” ಎಂದು ಜಗಜ್ಜನನಿಯು ಮೆಲ್ಲನೆ ಮೆಲುದನಿಯಲ್ಲಿ ಕೇಳಿದಳು.
ಆ ಮಾತು ಕೇಳಿ ಜೀವಜಂಗುಳಿಯು ಮತ್ತಷ್ಟು ನಿಸ್ತಬ್ಧಗೊಂಡಿತು, ಮೌನವು ಮತ್ತಿಷ್ಟು ಫನತರವಾಗಿ ಆವರಿಸಿತು. ಅ೦ಥ ಫನವಾದ ನಿಶ್ಶಬ್ಧ ದೊಳಗಿಂದ, ಮರುನುಡಿಯು ಕೇಳಿಸಬಹುದೆಂದು ಮಹಾ ಜನನಿಯು ಜ೦ಗುಳಿಯನ್ನೆಲ್ಲ ಆ ತುದಿಯಿ೦ದ ಈ ತುದಿಯವರೆಗೆ ನೋಡಿ ಕೃಪಾದೃಷ್ಟಿಯನ್ನು ಸಂಪೂರ್ಣವಾಗಿ ಹರಹಿದಳು. ಅದನ್ನು ಕಂಡು ಜಂಗುಳಿಯು ಪುಲಕಗೊಂಡಿತು. ಅವರ ಮೈತುಂಬ ಮಿಂಚಿನ ಹೊಳೆ ತುಳುಕಾಡಿತು, ಅಲ್ಲಲ್ಲಿ ಹಿಗ್ಗಿನ ಬುಗ್ಗೆಗಳು ನೆಗೆದಿದ್ದವು.
” ತಾಯೀ, ನಮಗೆ ತಿಳಿದದ್ದು ಸಂದೇಹಗಳನ್ನು ಪರಿಹರಿಸಿಕೊಂಡೆವು. ಆದರೆ ನಮ್ಮೊಳಗಿನ ಸಂದೇಹಗಳೆಲ್ಲ ಸ೦ಪೂರ್ಣ ಮುಗಿದವೋ ಇಲ್ಲವೋ ಎಂಬ ಸಂದೇಹವೊಂದು ಮಾತ್ರ ಉಳಿದಿದೆ. ಸರ್ವಜ್ಞಳೂ ಸರ್ವ ಸಾಕ್ಷಿಯೂ
ಆದ ತಮ್ಮಲ್ಲಿ ನಾವು ಬಯತಿಟ್ಟುಕೊಳ್ಳುವದು ಏನೂ ಇಲ್ಲ. ನಮ್ಮೊಳಗೇ ಅಡಗಿದ ಸಂದೇಹ ನಮಗೇ ಕಾಣಿಸದು. ಅದನ್ನು ತಾನೇ ಕಂಡುಹಿಡಿದು ಪರಿಹರಿಸುವ ಕೃಪೆಮಾಡಬೇಕಲ್ಲದೆ ಅನ್ಯ ಮಾರ್ಗವೇ ತಿಳಿಯದು” ಎಂದು
ಒ೦ದು ದನಿಯು ನಿವೇದಿಸಿಕೊಂಡಿತು.
” ಮಹಾಜನನೀ, ನಾವು ಬೇಡುವ ತಿಳುವಳಿಕೆ ನಮಗೆ ಸಿಕ್ಕಂತಾಯಿತು. ಆದರೆ ನಮಗೆ ಬೇಕಾಗುವ ತಿಳುವಳಿಕೆ ನೀವೇ ನೀಡಬೇಕು. ಬೇಡುವ ತಿಳುವಳಿಕೆ ಹತ್ತು ಕೂಡಿದರೂ ಬೇಕಾಗುವ ಒಂದು ತಿಳುದಳಿಕೆಗೆ ಸಾಟಿಯಾಗ- ಲಾರದು” ಎಂದು ಇನ್ನೊಂದು ಕಡೆಯ ದನಿಯು ಬಿನ್ನಯಿಸಿತು.
ಜಗಜ್ಜನನಿಯು ಸಂಗನುಶರಣನನ್ನು ಮುಗುಳುಗಣ್ಣಿನಿಂದ ಕಂಡು, ತನ್ನ ಆಲ್ಹಾದವನ್ನು ಹೊರಸೂಸುತ್ತ-
” ಅವಶ್ಯವೇ ಸಂಗಮಶರಣ? ಜೀವಜಂಗುಳಿಯ ತಿಳುವಳಿಕೆಯು ಅದೆಷ್ಟು ತೀವ್ರ ತಿಳಿಯಾಯಿತು! ಅಂತೆಯೇ ಅವರು ತಮಗೆ ಬೇಕಾಗುವ ತಿಳುವಳಿಕೆಗಾಗಿ ತವಕಪಡುತ್ತಿದ್ದಾರೆ. ನಿಶ್ಚಯವಾಗಿಯೂ ಅವಶ್ಯವೇ ಸಂಗಮಶರಣ ?” ಎಂದು ಪ್ರಶ್ನಿಸಿದಳು.
ಸಂಗಮಶರಣನು-“ಅದೇನು ಕೇಳುವಿರಿ ತಾಯಿ? ಜೀವಜಂಗುಳಿಯು ಸರಿಯಾಗಿ ಕೇಳಿಕೊಂಡಿತು. ಅದು ನನಗೆ ಮೊದಲು ಬೇಕಾಗಿದಿ. ದಯೆಯಿಟ್ಟು ಅವುಗಳನ್ನು ಹೇಳಿಕೊಟ್ಟು ಪರಮಕೃಪೆಯನ್ನು ದಾನಮಾಡಿರಿ. ಅದನ್ನು ಕೇಳುವದಕ್ಕೆ ನಾವಾದರೋ ಮೈತುಂಬ ಕಿವಿಮಾಡಿ, ಕಿವಿತೆರೆದು, ಕಿವಿನಿಮಿರಿಸಿ ಕುಳಿತಿರುವೆನು. ಆ ವಿಷಯವು ನನಗೊಬ್ಬನಿಗೇ ಅಲ್ಲ: ಈ ಜೀವಜಂಗುಳಿಗೇ ಅಲ್ಲ; ಸಮಸ್ತ ಜಗತ್ತಿಗೂ, ಅಖಿಲಬ್ರಹ್ಮಾಂಡಕೋಟಿಗೂ ಅತ್ಯಾವಶ್ಯಕವಾದ ಸಂಗತಿಯಾಗಿದೆ, ತಾಯೀ” ಎಂದು ಕೈಮುಗಿದು ಶಿರಬಾಗಿ ವಿನಂತಿಸಿದನು.
ಮಹಾಜನನಿಯು ಆನಂದಾತಿಶಯದಿಂದ ಸುತ್ತಲೂ ತಮ್ಮ ಪ್ರೇಮ ದೃಷ್ಟಿಯನ್ನು ಪಸರಿಸಿ ತಮ್ಮ ಮಂಗಲಮಯವಾದ ಅಭಯದಾನನನ್ನು ಕೊಡಮಾಡಿದ್ದು ಹೇಗೆಂದರೆ-
” ಮಕ್ಕಳೇ, ಮೊಟ್ಟದೊದಲು ನಿಮಗೆ ಹೇಳುವ ಮಹತ್ವದ ಮಾತೆಂದರೆ ದಿವ್ಯಪ್ರೇಮ. ಪ್ರೇಮವೇ ಜೀವನದ ತತ್ವವಾಗಿರುವುದರಿಂದ ಪ್ರೇಮವೇ ಜೀವನದ ಸತ್ವವಾಗಿರುನದರಿ೦ದ ಪ್ರೇಮದ ರಹಸ್ಯನನ್ನು ಅರಿತುಕೊಳ್ಳಿರಿ.
ಮಾನವ ಪ್ರೀತಿಗಿ೦ತ ಈಶಪ್ರೇಮವು ಹೆಚ್ಚಿನದು. ಮಾನವಪ್ರೀತಿಯಲ್ಲಿ ಕಹಿ ಅನುಭವ ಕಾಣಿಸಿಕೊಳ್ಳಬಹುದು. ಆದರೆ ಈಶಪ್ರೇಮವು ಅಮೃತದ ತುತ್ತಾಗಿದೆ.
ಈಪ್ರೇಮವನೊಂದನೆ ಹೆಚ್ಚಿಗೆ ಅವಲಂಬಿಸು ನೀನು |
ಈಶಪ್ರೇಮವ ಪಡೆದರೆ ಮಾನವ ಪ್ರೀತಿಯ ಪಾಡೇನು ||
ಮಾನವ ಪ್ರೀತಿಯೊಳವಿತಿದೆ ನಂಜಿನ ಕಹಿಯನುಭವ ತುತ್ತು|
ತಾನದು ಈಶ ಪ್ರೇಮವು ಕೆಡಿಸದು ಆಶೆಯ ಮುಡಿ ಮುತ್ತ ||
ಎಷ್ಟಿದೆ ನಿನ್ನಲಿ ಆಭೀಪ್ಸೆಯೆಂಬುದು
ಅಷ್ಟಮ ನಂಬಿಕೆ ಪ್ರಮಾಣವೆನಿಪುದು|
ಅದಕೋಗೆಡುತಿದೆ ದಿವ್ಯ ಪ್ರೇಮ
ಅದಕೆನಿಸುತ್ತಿದೆ ಸಹಜದ ಧರ್ಮ||
ದೇವನ ಪ್ರೇಮವು ನನ್ನ ಮೇಲೆ ಎಷ್ಟಿದೆ-ಎನ್ನುವದಕ್ಕೆ ನಿನ್ನ ಆಭೀಪ್ಸೆಯನ್ನೇ ಅಳೆದು ನೋಡಿಕೊಂಡರೆ ಸಾಕು.
ಯಾವ ಕೆಲಸ ಮಾಡಿದರೂ ಅಂತರ್ಮುಖರಾಗಿ ನಿಲ್ಲಿರಿ. ಅದರಿಂದ ಹೊರಗಿನ ಜ೦ಜಾಟಗಳು ದೂರ ಉಳಿಯುವವಲ್ಲದೆ, ನಿಮ್ಮ ಪ್ರಕೃತಿ ರೂಪಾಂತರಗೊಳ್ಳುವದಕ್ಕೂ ನೆರವು ಸಿಗುತ್ತದೆ. ಪ್ರಕೃತಿಯ ರೂಪಾಂತರವೇ ಮನುಷ್ಯನ ನಿಜವಾದ ಉನ್ನತಿ; ಅದೇ ಪ್ರಗತಿ. ಅಭ್ಯುದಯವೆಂದರೂ ಅದೇ. ಅದು ಬೇಡವೆನ್ನುವವರು ಯಾರೂ ಇಲ್ಲ. ಆದರೆ ಅದಕ್ಕೆ ಬೇಕಾಗುನ ಉಪಾಯ ಮಾಡುವವರು ಮಾತ್ರ ಯಾರೂ ಇಲ್ಲ; ಅಥವಾ ಬಹಳ ಕಡಿಮೆ.
ಹೃದಯಕೇಂದ್ರದಾ ಪ್ರಜ್ಞೆ ಯೊಳಗಿದ್ದರೆ
ಬಿಡದೆ ನಿಮ್ಮ ಸಂಕಲ್ಪ ಶಕ್ತಿ ಯದು
ಗಡನೆ ದೇವ ಸಂಕಲ್ಪದೊಡನೆ ಒಡ-
ಗೂಡಿ ನಿಲ್ಲುವದು ಮುಂದೆ ಮತ್ತೆ ಈ
ನಿಮ್ಮ ಪ್ರಕೃತಿ ರೂಪಾಂತರಗೊಳ್ಳಲು
ಸುಮ್ಮನೆ ದಿವ್ಯ ಪ್ರೆಮವೆ ಪಡೆವರೆ ||
ನಮ್ಮಲದನು ಸುಸ್ಥಿರವಗೊಳಿಸುವರೆ
ಒಮ್ಮಲೆ ತಕ್ಕವರಾಗುವೆವೆನ್ನು ||
ಪ್ರಕೃತಿಯ ರೂಪಾಂತರದ ಕೆಲಸ ನಡೆದಿರುವಾಗ ಆಳವಾದ ಶಾಂತಿಯನ್ನೂ ಸ್ಥಿರತೆಯನ್ನೂ ಕಾಯ್ದುಕೊಳ್ಳಿರಿ. ಯಾಕಂದರೆ ಸುತ್ತುಮುತ್ತಲಿನ ಬಾಹ್ಯಪರಿಸ್ಥಿತಿಯನ್ನೂ ಗಮನಿಸದೆ ಇರುವದಕ್ಕೆ ಅವು ಸಮರ್ಥವಾದವುಗಳಾಗಿವೆ. ಶಾಂತಿಸ್ಥಿರತೆಗಳೊಡನೆ ನೀನು ಯಾವಾಗಲೂ ನನ್ನೆಡೆಗೆ ಹೊರಳಿ ನಿಲ್ಲು. ಕಣ್ಣು ತೆರೆದು ನನ್ನನ್ನೇ ನೋಡು. ಹೃದಯ ತೆರೆದು ನನ್ನನ್ನೇ ಅನುಭವಿಸು. ಆದರೆ ನನಗೆ ಏನೂ ಬೇಡದಿರು; ಕೇಳದಿರು. ತೆರೆದಿಡುವದಷ್ಟೇ ನಿನ್ನ ಕೆಲಸ. ಅದರಲ್ಲಿ ತುಂಬಬೇಕಾದುದನ್ನೆಲ್ಲ ತುಂಬುವುದು ನನ್ನ ಕೆಲಸ. ಇದೊಂದು ಬಲಿದಾನ; ಮಹಾಬಲಿದಾನ.
ಈ ಬಲಿದಾನಕೆ ದೊರೆಯುವ ಲಾಭಕೆ
ಸಾಟಿಯಾವುದುಂಟು ?
ಅನುಪಮವಾಗಿಹ ಅದ್ಭುತ ಫಲಗಳು
ಇದರಲಿ ನೂರೆಂಟು ||
ಏನೂ ಬೇಡದೆ ಮಾಡಿದ ಬಲಿದಾನಕ್ಕೆ ಪ್ರತಿಘಲವಾಗಿ ಏನು ಸಿಕ್ಕರೂ ಅದು ಮಹಾಕೃಪೆಯೇ ಸರಿ. ಅದು ಸುಖದ ಸತ್ವವಿರಬಹುದು; ಇಲ್ಲವೆ ದುಃಖದ ತತ್ವವಿರಬಹುದು. ಆದರೆ ಆದು ಕೃಪೆಯೆನ್ನುವದನ್ನು ಮಾತ್ರ ಮರೆಯಕೂಡದು, ಅದನ್ನು ನಂಬಬೇಕು. ಬರುವದು ಏನಿದ್ದರೂ ಕೃಪೆಯೆಂದು ನಂಬಿದರೆ ಮುಗಿಯಲಿಲ್ಲ. ಆದು ಬರುವ ಕಾಲವನ್ನು ಚಂಚಲಗೊಳ್ಳದೆ ನಿರೀಕ್ಷಿಸ ಬೇಕು.
ದಾರಿ ತಿಳಿಯದೆಂದು ಚಂಚಲಿಸಿ, ಸಿಕ್ಕಸಿಕ್ಕವರ ಬುದ್ಧಿವಾದವನೂ ಉಪನ್ಯಾಸವನ್ನೂ ಕೇಳಿ ತಲೆ ಕೆಡಿಸಿಕೊಳ್ಳಬೇಡ.
ಕೇಳದಿರುವುದೇ ಒಳ್ಳತೆನ್ನುವೆ-
ನಾತ್ಮ ವಿಷಯದ ಭಾಷಣ |
ಹೆರರಿಗದು ಸಂಬಂಧವಿಲ್ಲವು
ತನ್ನ ಮಾರ್ಗವೆ ಭೂಷಣ ||
ನಿನೆಗೆ ಸಂಬಂಧಿಸಿದ ಕೆಲಸವಲ್ಲದೆ ಇನ್ನುಳಿದ ಕೆಲಸಕ್ಕೆ ಕಣ್ಣಿಕ್ಕಬೇಡ; ಕೈಯಿಕ್ಕಬೇಡ. ಇನ್ನುಳಿದ ವಿಷಯವನ್ನು ಚಿಂತಿಸಬೇಡ; ಯೋಚಿಸಬೇಡ; ಅದೊಂದು ನಿನ್ನ ಜೀವನಕ್ಕೆ ಸಾಮಾನ್ಯವಾದ ವಿಷಯವೇ ಆಗಿಬಿಡಲಿ. ತನ್ನ
ಷ್ಟಕ್ಕೆ ತಾನಿದ್ದರೂ ಒಮ್ಮೊಮ್ಮೆ ಕೆಲಸಕ್ಕೆ ತೊಂದರೆಗಳು ಬರುತ್ತಿರುವದುಂಟು. ಆ ತೊಂದರೆಗಳಿಗೆ ಕಾರಣಗಳನ್ನು ಎಲ್ಲಿ ಹುಡುಕುವಿರಿ? ಸುತ್ತಲಿನ ಪರಿಸ್ಥಿತಿಯಲ್ಲಿ ತೊಂದರೆಯ ಕಾರಣಗಳನ್ನು ಹುಡುಕಿದರೆ ಅವು ಸಿಗಲಾರವು. ನಿನ್ನೊಳಗೇ ಅವುಗಳನ್ನು ಹುಡುಕು, ನಿಟ್ಟಿಸು, ಸರಿಯಾಗಿ ಸಿಕ್ಕುಬಿಡುವವು. ಒಳಗೆ ಪ್ರಾಮಾಣಿಕತೆ ತಪ್ಪುವದರಿಂದಲೇ ಜೀವನದಲ್ಲಿ ತೊಂದರೆಗಳು ಉದ್ಭವಿಸುವವು. ತೊಂದರಗಳನ್ನು. ನಿವಾರಿಸಿಕೊಳ್ಳುವದಕ್ಕೆ ತಪ್ಪಿದ ಪ್ರಾಮಾಣಿಕತೆಯನ್ನು ತಿದ್ದಿಕೊಳ್ಳುವದೇ ಸರಿಯಾದ ದಾರಿಯಾಗಿದೆ.
ಕಾರ್ಯದಿ ಅಪಶ್ರುತಿ ಬಂದಿಹ ಕಾರಣ-
ಹಂಕಾರವು ಆಕಾಂಕ್ಷೆಯ ಪೂರಣ
ಮೊದಲಿಗೆ ತಳೆದಿಹ ಕಾರ್ಯದ ಭಾವನ
ಗುರುತಿಸಿ ಸರಿಗೊಳಿಸುವ ಆ ಧೋರಣ
ಹೆರರಲಿ ಬೇಡೈ ನಿನ್ನನೆ ಮೊದಲಿಗೆ
ಸರಿಗೊಳಿಸುತ್ತಮ ಮಾರ್ಗವು ನಿನಗೆ ||
ಇನ್ನು ಆಪತ್ತುಗಳಿಗೀಡಾದಾಗ ತಳಮಳಿಸುತ್ತ ಕುಳಿತುಕೊಳ್ಳುವದು ತರವಲ್ಲ. ತಳಮಳಿಸುತ್ತ ಕುಳಿತಮಾತ್ರಕ್ಕೆ ಆಪತ್ತು ದೂರವಾಗುವದಂತೂ ಒತ್ತಟ್ಟಿಗುಳಿದು, ತಳಮಳದಿಂದ ಅಂತಃಕರಣಗಳು ಕಮರಿಹೋಗುವವು. ಅದು ಪ್ರಗತಿಗೆ ದಾರಿಯಾಗದೆ, ವಿಗತಿಗೆ ಸುಗಮವಾಗುವದು. ಆದುದರಿಂದ ಕೇಳಿರಿ-
ಅನುವಾಗದಿರಲು ತಳಮಳಕೆ
ತಾನೋಡಿ ಹೋಗುವುದು ಕೆಲಕೆ|
ತಳಮಳವು ಪ್ರಗತಿಗೆಳ್ಳನಿತು
ಬೇಕಿಲ್ಲವೆಣಿಸು ನೀ ಕುಳಿತು ||
ಉಲ್ಲಾಸಪೂರ್ಣ ಸ್ಥಿರಚಿತ್ತ
ಸಮತೆಯನು ತಳೆದರದು ಮೊತ್ತ !!
ಅದ್ಭುತದ ಪ್ರಗತಿಯಿದರಿಂದೆ
ಸಾಧಿಸುವದು ತಿಳಿ ನಿಶ್ವಯವೆ ||
ಆದ ತಪ್ಪಿಗೆ ಹಳಿಹಳಿಸುವ ಕಾರಣವಿಲ್ಲ. ಕೈಮೀರಿ ಆದ ತಪ್ಪು ಕೆಲಸ ವನ್ನು ಬಾಯಿಮೀರಿ ಆಡಿದ ಮಾತನ್ನೂ ನೆನೆಸುತ್ತ ಕೊರಗುವದು ತರವಲ್ಲ; ಆದುದು ಆಗಿಹೋಯಿತು, ಮುಂದೆ ಅಂಥ ತಪ್ಪು ಆಗಗೊಡುವಂತಿಲ್ಲವೆಂದು
ನಿಶ್ವಯಿಸಿದರೆ ಹಿಂದಿನ ತಪ್ಪು ಅಪರಾಧವಾಗಲಾರದು. ಅದೊಂದು ವಿಜಯದ ಗುಟ್ಟು. ಸೋಲಿನಲ್ಲಿಯೂ ವಿಜಯ ಕಾಣುವ ಚಾತುರ್ಯ.
ವಿಜಯವೆಂದರೆ ಹೆರರನ್ನು ಆಳುವದಲ್ಲ, ತನ್ನನ್ನು ತಾನು ಆಳುವದೇ ಮಹಾವಿಜಯ. ಅಂಥ ಮಹಾವಿಜಯವನ್ನು ಪಡೆದವನೇ ಬದುಕಿನ ಎಲ್ಲ ದಾರಿಗಳಲ್ಲಿಯೂ ಸುಖವನ್ನು ಕಾಣಬಲ್ಲನು; ಸಮಾಧಾನವನ್ನು ಉಣ್ಣ ಬಲ್ಲನು. ಈ ಸ್ಥಿತಿಯು ಆಧ್ಯಾತ್ಮರಾಜ್ಯದೊಳಗಿನ ಒಂದು ಸಣ್ಣ ನಿಲುಮೆಯೇ ಸರಿ. ಆಗ ಇನ್ನೊಂದು ಬಗೆಯ ಶತ್ರುಗಳ ಏರಾಟಕ್ಕೆ ನೀವು ಈಡಾಗಬಹುದು. ಆಗ ನೀವು ಎಷ್ಟೂ ಎದೆಗೆಡಬೇಡಿರಿ.
ನಿಶ್ಚಿತವಾದಧ್ಯಾತ್ಮಿಕ ಪ್ರಗತಿಯು ನಮ್ಮಲ್ಲಾಗಿರುವಂದು
ನಿಶ್ವಯವಾಗಿಯು ದೇವನ ಶತ್ರುಗಳೆಲ್ಲೋ ಅಡಗಿಕೊಂಡು ||
ಹೊಂಚಿಕುಳಿತು ಹಂಚಿಕೆ ಹಾಕುತ್ತಿರುವಾಗ ಕುನಸವಿಟ್ಟು
ಸಂಚುಗೂಡಿ ನಮ್ಮಂತರಾತ್ಮನನು ಗಾಸಿಗೂಳಿಸಲೆಷ್ಟು |
ಕಷ್ಟಪಟ್ಟು ಕೈಸೋತು ನಿಂತರೂ ಚೇಷ್ಟೆ ಮಾತ್ರ ಬಿಡದೆ
ನಷ್ಟಗೊಳಿಸಲೆಳಸುವವು ದೇಹವನು ತಂತ್ರವೆಲ್ಲ ಬರಿದೆ ||
ಸರ್ವಯತ್ನ ನಿರ್ವೀರ್ಯಗೊಳ್ಳುವವು ಗಟ್ಟಿಯಾದ ಮಾತು
ಸರ್ವಶ್ರೇಷ್ಟ ಪರಮಾತ್ಮಕೃಪೆಯು ನಮ್ಮೊಡನೆ ಕೂಡಿನಿಂತು||
ಕಾಣದಂತೆ ಕೈನೀಡಿ ಕಾಯುತಿರೆ ಯಾವ ಹಗೆಯ ದಾಳಿ?
ಪ್ರಾಣವನ್ನು ಪಣಕಿಟ್ಟು ಕಾದಿದರು ಕೊನೆಗೆ ಸೋಲುಪಾಳಿ||
ಈ ವಿಶ್ವವು ಅಸ್ತವ್ಯಸ್ತತೆಯಿಂದ ತುಂಬಿಹೋಗಿದೆ. ಇಲ್ಲಿ ಬೆಳಕಿದ್ದಂತೆ ಸತ್ಯವಿದ್ದಂತೆ ಸುಳ್ಳೂ ಅವೆ. ಜನನಮರಣಗಳೂ, ರಾಗದ್ವೇಷ ಗಳೂ ಹಾಸು-ಹೊಕ್ಕಾಗಿ ಹೆಣೆದುಕೊಂಡಿವೆ. ಅವುಗಳಲ್ಲಿರುವ ಬಿಗಿಯಾದ ಅಪ್ಪುಗೆಯನ್ನು ಬಿಡಿಸುವದೆಂದರೆ ಭೀಕರದಾದ ಕಾಳಗವಾಡಿದಂತೆಯೇ ಸರಿ. ಕಾಳಗವು ಅದೆಷ್ಟು ಭೀಕರವಾಗಿದ್ದರೂ ಸತ್ಯಸೈನಿಕನಿಗೆ ಸೋಲಿಲ್ಲ. ಸೋತರೂ ಸಾರ್ಥಕತೆಯಿದೆ. ಗೆಲವು ಸಾರ್ಥಕತೆಗಳಿಗಾಗಿ ಜೀವನವನ್ನು ಮೀಸಲಿಟ್ಟು
ಬಾಳಿರಿ.
ಜಗತ್ತಿನ ತಂದೆಯು ಸಾರಿಹೇಳಿದ ಮಾತು ನೆನಿಸಿಕೊಳ್ಳಿರಿ-ಎಲ್ಲ ಪ್ರಸಂಗಗಳಲ್ಲಿಯೂ ಭಗವಂತನು ನಮಗೆ ಅಭಯಹಸ್ತವನ್ನು ನೀಡುವನು. ನಾವು ಬೀಳಲು ಅವಕಾಶಕೊಟ್ಟ ಹಾಗೆ ತೊರಿದರೂ ಸಹ ನಮ್ಮನ್ನು ಉದ್ದರಿ
ಸುವನು. ಈ ಮಾತನ್ನು ನಿಮಗೆ ಮತ್ತೊಮ್ಮೆ ಹೇಳುವೆನು. ಸಾರಿ ಹೇಳುವೆನು, ಕೂಗಿ ಹೇಳುವೆನು-ನಂಬಿರಿ! ಗಟ್ಟಿಯಾಗಿ ನಂಬಿರಿ!!
” ನಾವು ಬೀಳಲು ಅವಕಾಶಕೊಟ್ಟ ಹಾಗೆ ತೋರಿದರೂ ಸಹ ನಮ್ಮನ್ನು ಉದ್ಧರಿಸುವನು–ಓಂ! ಓ೦ !! ಓ೦ !!! ”
ಜನಜ೦ಗಳಿಯು ತುಂಬಿದ ಉತ್ಸಾಹದಿಂದ ಆಕಾಶವೆಲ್ಲ ಪ್ರತಿಧ್ವನಿಸುವಂತೆ ಒಕ್ಕೊರಲಿನಿಂದ “ಜಯ! ಜಗದೀಶ್ವರೀ!! ಜಯ! ಜಗಜ್ಜನನೀ!” ಎಂದು ಉದ್ಘೋಷಿಸಿತು.
” ಮಹಾ ತಾಯೀ, ನಿಮ್ಮ ನುಡಿಯು ನಮ್ಮ ಕಿವಿಯಲ್ಲಿ ಉಲಿಯುವವರೆಗೆ ತಮ್ಮ ಸನ್ನಿಧಿಯಲ್ಲಿಯೇ ನಾವಿದ್ದ ಹಾಗೆಂದು ತಿಳಿಯುತ್ತೇವೆ. ಇದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ ” ಎಂದೂ. ” ಕೂಗಿದಾಗ ಓಗೊಡುತ್ತಿರಿ ತಾಯೀ ” ಎಂದೂ.
” ನಿಮ್ಮನ್ನು ಮರೆಯದ೦ತೆ ಕರುಣಿಸಿರಿ ಮಾತೇ ” ಎಂದೂ. ಬಿನ್ನಹಗಳು ಮಾತೃಚರಣಗಳಲ್ಲಿ ಬಂದು ಬಂದು ಎರಗಿದವು. ಅಭಯವಾಗಿ ಅದಾವ ಶಬ್ಬಗಳಲ್ಲಿ ಪ್ರತಿಧ್ವನಿಸುವದೋ ಕೇಳಬೇಕೆಂದು ಜನಜಂಗುಳಿಯು ಕುತೂಹಲಿಯಾಗಿ ಆಲಿಸಿತು. ನಿಸ್ತಬ್ಧವಾಗಿ ಕಿವಿನಿಮಿರಿಸಿ ಕೇಳಿತು. ಅಂತರಾತ್ಮನ ವಾಣಿಯನ್ನು ಕೇಳುವದಕ್ಕೆ ಕಿವಿಗೊಟ್ಟ ಮಹಾತ್ಮರಂತೆ ಜನಜಂಗುಳಿಯು ಕಣ್ಣುಮುಚ್ಚಿ ಕಿವಿತೆರೆದು ನಿಂತಿತು.
ನೇವುರದ ಇಂಚರದಂತೆ ಶ್ರೀಜಗಜ್ಜನನಿಯ ದಿವ್ಯವಾಣಿಯು ಗಿಲಿ ಗಿಲಿಸುತ್ತ ಶ್ರೋತ್ರವೃಂದವನ್ನು ತಣಿಸಿತು; ಹಿಗ್ಗಿನ ಕಡಲಲ್ಲಿ ತೇಲಾಡಿಸಿತು. ಆ ಮಾತು ಯಾವುದೆಂದರೆ-
“ನಾನು ಯಾವಾಗಲೂ ನಿಮ್ಮ ಹತ್ತಿರದಲ್ಲಿಯೇ ಇರುವೆನು. ನೀವು ಬೇಕಾದಾಗ, ಬೇಕೆಂದಾಗ ನನ್ನ ನೆರವು ಪಡೆಯುವದಕ್ಕೆ ಕಲಿತು ರೂಡಿಮಾಡಿ ಕೊಳ್ಳಿರಿ. ನಿಮಗೆ ಸೋಲೇ ಇಲ್ಲ. ಗೆಲವು ಖ೦ಡಿತ !”
ಜನಜ೦ಗುಳಿಯು ಆ ಅಮರವಾಣಿಯನ್ನು ಅರೆದು ಕರಗಿಸಿ ನೀರುಮಾಡಿ ಕಣ್ಣೂಮುಚ್ಚಿ ಕಿವಿಯಿಂದ ಕುಡಿದು ಒಡಲಿಗೆ ತಣಿವು ನೀಡುತ್ತ, ಮೈಮರೆಯುವಷ್ಟರೊಳಗೆ ಕೈಲಾಸದ ಬಾಗಿಲಲ್ಲಲ್ಲಿ ಶಿವನು ಕಾಣಿಸಿಕೊಂಡನು. ಅಲ್ಲದೆ–
“ದೇವಿಯವರು ಭೂಲೋಕದಲ್ಲಿ ತಮ್ಮ ಮಾಯೆಯಾಟವನ್ನು ಹೂಡುವ ದಕ್ಕೆ ಅಣಿಗೊಳೆಸಿಯೇ ಬಿಟ್ಟಿದ್ದಾರಲ್ಲ!” ಎನ್ನುತ್ತ ನಗೆಯನ್ನು ಸೂಸಿದನು.
ಗೌರಿದೇವಿಯು ಅಷ್ಟೇ ಸೂಸು ನಗೆಯೊಡನೆ-ಪ್ರಭುಗಳು ಹಿಂದೆ ಕುಳಿತು ಸಂಕಲ್ಪ ಮಾಡಿದ ಬಳಿಕ, ನಾನು ಮಾಯೆ;
ಯಾಟವನ್ನು ಹೂಡದೆ ಗತ್ಯಂತರವೇ ಇಲ್ಲವಲ್ಲ !” ಎ೦ದು ನುಡಿದಳು.
” ಜಗದೀಶ್ವರೀ, ಜೀವಜಂಗುಳಿಗೆ ನೀನಿತ್ತ ತರಬೇತಿಯನ್ನೆಲ್ಲ ನಾನು ಮರೆಯಲ್ಲಿಯೇ ನಿಂತುಕೊಂಡು ಸಂಪೂರ್ಣವಾಗಿ ಕೇಳಿರುವೆನು. ಹಿಡಿಸಲಾರದ ಹಿಗ್ಗು ನನಗಾಗಿದೆ. ಅದನ್ನು ತಡೆಯಲಾರದೆ ನಾನು ಮಧ್ಯದಲ್ಲಿಯೇ ಬಯಲಿಗೆ ಬಂದುಬಿಟ್ಟೆ. ಇಲ್ಲದಿದ್ದರೆ ನಿಮ್ಮ ಕಾರ್ಯಕ್ರಮವು ಇನ್ನೂ ಮುಂದುವರಿಯಬಹುದಾಗಿತ್ತು. ಅಲ್ಲವೇ ?”
” ಸೂತ್ರಧಾರನ ಇಚ್ಛೆಯಂತೆ ನಟಿಯ ಅಭಿನಯವೆಷ್ಟೇ ? ಸೂತ್ರಧಾರನ ಪ್ರಬಲೇಚ್ಛೆಯಿರುವದರಿಂದ ನಮ್ಮ ವಿಷ್ಕಂಭಕವು ಮುಗಿಯಿತೆಂದು ತೋರುತ್ತದೆ. ಇನ್ನೇನು ಅಪ್ಪಣೆ ವಿಧಿಸುವಿರಿ ಸೂತ್ರಧಾರರೆ? ” ಎಂದು ಕೇಳಿದಳು ಪಾರ್ವತಿ.
” ಅಪ್ಪಣೆ ಏನು? ಈ ಮಕ್ಕಳಿಗೆಲ್ಲ ಆಮೋದಗೊಳಿಸುವ ಒಂದು ಅಮರವಾದ ಗೀತೆಯನ್ನು ಕೇಳಿಸುವೆಯಾ? ”
” ಆಗಲಿ! ತಾವು ಕಲಿಸಿದ ಹಾಡು ತಮ್ಮ ಮುಂದೆ ಹೇಳದೆ ಇನ್ನಾರ ಮುಂದೆ ಅದನ್ನು ಹೇಳಲಿ? ಕೇಳಿರಿ–
ಇನ್ನಷ್ಟು ಹಾದಿ ದಾಟಿದರೆ ಬಂತು ಹೊಸಜಗದ ಗುರಿಯು ಪೂರ್ತಿ ತೀಡಿದರೆ ಒಮ್ಮೆ ಮೂಡೀತು ನೋಡು ಭಗವತಿಯ ಪೂರ್ಣ ಮೂರ್ತಿ.”
ನಗುತ್ತ ಶಿವನೆಂದನು-” ಇದು ನನ್ನ ಹಾಡು. ಈಗ ಇಲ್ಲಿ ಬೇಕಾದುದು ನಿನ್ನ ಹಾಡು!”
” ಜೋಡು ಗೀತಗಳಾಗಬೇಕಲ್ಲವೇ?” ಎಂದು ಹೇಳಿ ಪಾರ್ವತಿಯು-
ಆಳಾದರೇನು ಅರಸಾದರೇನು ಆನಂದಭೋಗದಲ್ಲಿ
ಬಾಳಾದರೇನು ಹಾಳಾದರೇನು ಶಾಶ್ವತದ ಯೋಗದಲ್ಲಿ”
ಕೊನೆಯಲ್ಲಿ ಶಿವನು ನುಡಿದ ಭರತವಾಕ್ಯವೇನೆಂದರೆ-“ಜಗದೀಶ್ವರಿಯು ನಿಮ್ಮನ್ನು ಯಾವಾಗಲೂ ನೋಡುತ್ತಿರು- ವಳೆಂದು ತಿಳಿದು ವರ್ತಿಸಿರಿ. ಯಾಕಂದರೆ ಆಕೆಯು ಯಾವಾಗಲೂ ನಿಜವಾಗಿಯೂ ನಿಮ್ಮನ್ನು ನೋಡುತ್ತಾಳೆ!!” ” ಜಯ! ನಮಃ ಪಾರ್ವತೀಪತೇ ಶಿವ ಹರ ಹರ ! ಮಹಾದೇವ !!” ಎಂಬ ಧ್ವನಿಯ ದುಂದುಭಿಯು ಜೀವಜಂಗಳಿಯಲ್ಲಿ ಮೊಳಗಿ ಗಗನಕ್ಕೇರಿತು.
****