ಸಂಸಾರ

” ಜೀವನೋದ್ದೇಶನ್ನು ಅರಿತು ನಿಶ್ಚಯಿಸಿ ಅದನ್ನು. ಸಾಧಿಸುವುದೇ ಹುಟ್ಟಿ ಬಂದುದರ ಕಾರಣವಾದರೆ,  ಸ೦ಸಾರದೊಡನೆ ಜೀವನೋದ್ದೇಶನ್ನು ಹೊಂದಿಸಿಕೊಳ್ಳುವ ಬಗೆ ಹೇಗೆ-ಎ೦ಬ ತೊಡಕು ಎದ್ದು ನಿಲ್ಲುವದು. ಆದ್ದ-
ರಿಂದ ಸಂಸಾರ ಈ ವಿಷಯದಲ್ಲಿ ತಮ್ಮ ಬಾಯಿಂದ ಕೆಲವು ವಿಚಾರಗಳನ್ನು ಕೇಳಬೇಕೆಂದು ಅಪೇಕ್ಷಿಸುವೆವು” ಎನ್ನುವ ಒ೦ದು ದನಿಯು ಜನಜ೦ಗುಳಿ ಯಿಂದ ಸುಳಿದು ಬ೦ದಿತು.

ಸಂಗಮಶರಣನು ಜಗನ್ಮಾತೆಯ ಸಿರಿಯಡಿಗಳನ್ನು ಕಣ್ಣು ಅರಳಿಸಿ ನೋಡಿ, ಮುಗುಳು ನಗೆ ಸೂಸುತ್ತ ಜನಜ೦ಗುಳಿಗೆ ಪಡಿನುಡಿ ಕೇಳುವುದಕ್ಕೆ ಆರ೦ಭಿಸುತ್ತಾನೆ, ಹೇಗೆಂದರೆ-

” ಜೀನಜ೦ಗುಳಿಯೆಲ್ಲ- ಸಂಸಾರಸಾಗರದಲ್ಲಿ ಈಸಿಈಸಿ ದಣಿದರೂ ಹಾದಿ ಕಾಣದಾಗಿದೆ. ನೀರಿನಲ್ಲಿ ಸುಳುಹುದಾರಿಯೇ ಅಶಕ್ಯವಾದಾಗ ಹೆದ್ದಾರಿ ಯನ್ನು ಕಾಣುವುದಾದರೂ ಸಾಧ್ಯವೆಲ್ಲಿ?

ಸಂಸಾರವೆಂದರೆ ಗಾಳಿಯಲ್ಲಿಟ್ಟ ಸೊಡರೆಂದರು ಕೆಲವರು.

ಸಂಸಾರದಲ್ಲಿ ಬದುಕು ಮಾಡುವುದೆಂದರೆ ಹಾವಿನ ಬಾಯಿಯೊಳಗಿನ ಕಪ್ಪೆ ಬದುಕುವುದಕ್ಕೆ ಯತ್ನಿಸುವ ಹೋರಾಟವೆಂದು ಬೇರೆ ಕೆಲವರ೦ದರು.

ಶೂಲದ ಮೇಲಿನ ಭೋಗದಂತೆ ಸಂಸಾರ. ಆದು ಹಾವ-ಹಾವಾಡಿಗನ ಸ್ನೇಹದ ಹಾಗೆ. ತನ್ನಾತ್ಮವೇ ತನಗೆ ಹಗೆಯಾಗುವದೆಂದು ಹಲವರು ಹಲುಬಿದರು.
ಸಂಸಾರಸಾಗರದ ತೆರೆಕೊಬ್ಬಿ ಮುಖದ ಮೇಲೆ ಅಲೆವುತ್ತಲಿದ್ದುದೇ?
ಸಂಸಾರಸಾಗರ ಉರದುದ್ದುವೇ ಹೇಳಾ?
ಸಂಸಾರಸಾಗರ ಕೊರಳುದ್ದವೇ ಹೇಳಾ?
ಸ೦ಸಾರಸಾಗರ ಶಿರದುದ್ದವಾದ ಬಳಿಕ ಏನ ಹೇಳುವೆನಯ್ಯ ?
ಅಯ್ಯಾ ಅಯ್ಯಾ, ಎನ್ನ ಹುಯ್ಯಲ ಕೇಳಯ್ಯ.
ಕೂಡಲಸ೦ಗಮದೇವಯ್ಯ; ನಾನೇವೆನಯ್ಯ,
ಎಂದು ಗೋಳಿಟ್ಟುದೂ ಉಂಟು.

ಸಾಸಿನೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖನೋಡಾ-ಎಂದು ಅಲ್ಪ ಸುಖದ ಸಲುವಾಗಿ, ಅದೆಷ್ಟು ಹರವಾದ ದುಃಖಪರಂಪರೆಯನ್ನು ಹೊರಬೇಕಾಗುವುದಲ್ಲ-ಎಂದು ಹುಯಿಲಿಟ್ಟಿದ್ದಾರೆ.

ಸಂಸಾರ ವಿಷಯದಲ್ಲಿ ಗಾಸಿಗೊಂಡವನಿಗೆ ಪರಮಾರ್ಥಕ್ಕಾಗಲಿ, ಜೀವನೋದ್ದೇಶವನ್ನು ಅರಿಯುವುದಕ್ಕಾಗಲಿ ವೇಳೆಯೇ ಸಿಗುವದಿಲ್ಲ. ಜೀವನೋದ್ದೇಶವನ್ನು ಅರಿತರೂ ಅದನ್ನು ಸಾಧಿಸುವ ಸುಸಂಧಿಯೇ ದೊರಕದೆ ಕಳ
ವಳಿಸುವವರೂ ಉಂಟು. ಹೊಟ್ಟೆ, ಬಟ್ಟೆ, ಮನೆ, ಮಡದಿ, ಮಕ್ಕಳು ಅನ್ನುತ್ತ ಅದರಲ್ಲಿಯೇ ಸಂಪೂರ್ಣ ಮುಳುಗಿ ಹೋದವನಿಗೆ ಇನ್ನೇನೂ ಕಾಣಿಸಲಾರದು.
ಉದಯಾಸ್ತಮಾನವೆನ್ನ ಬೆಂದ ಬಸುರಿಂಗೆ ಕುದಿಯಲಲ್ಲದೆ
ನಿಮ್ಮ ನೆನೆಯಲು ತೆರಹಿಲ್ಲವಯ್ಯ.
ಎಂತೋ ಲಿಂಗತಂದೆ, ಎಂತಯ್ಯ! ಎನ್ನ ಪೂರ್ವಲಿಖಿತ.
ಬೆರಣಿಯನಾಯಲಲ್ಲದೆ ಅಟ್ಟುಣ್ಣ ತೆರಹಿಲ್ಲೆನಗೆ.
ನೀ ಕರುಣಿಸು ಕೂಡಲಸ೦ಗಮದೇವಾ.
ಸಂಸಾರಸಾಗರದಲ್ಲಿ ಮುಳುಗಿ ತಳಕಂಡರೂ ಒಮ್ಮೊಮ್ಮೆ ತೇಲಿ ಮೇಲೆ ಬಂದು, ಬದುಕಿಸೆಂದು, ಮುಳುಗುವವನು ಬೆಂಡಿಗೆ ತೆಕ್ಕಿಮುಕ್ಕಿ ಬಿದ್ದಂತೆ ಏನನ್ನಾದರೂ ಹಿಡಿಯಹೋಗುನನು; ಯಾರನ್ನಾದರೂ ಕೂಗುವನು.

ಆದರೆ ಸಂಸಾರದ ಹರವಾದ ಬಲೆಯಿಂದ ಯಾರು ಕಡೆಗುಳಿಯಬಲ್ಲರು?
ಜಗದಗಲದ ಮಾಯಾಜಾಲವ ಹಿಡಿದು,
ಕಾಲನೆಂಬ ಜಾಲಗಾರ ಮಾಯಾ ಜಾಲದ
ಬೀಸಿದ ನೋಡಯ್ಯ.
ಆ ಜಾಲಕ್ಕೆ ಹೊರಗಾದವರೊಬ್ಬರನೂ ಕಾಣೆ.
ಬಲ್ಲಬಲ್ಲಿದರೆಂಬುವರೆಲ್ಲರ ಬಲೆಯ ಕಲ್ಲಿಯೊಳಗೆ ತುಂಬಿದ.
ಕಾಲಕಾಲನ ಬಲೆಯೊಳಗೆ ಸಿಕ್ಕುಬೇಳುವೆಗೊಳ್ಳುತ್ತಿದೆ ಜಗವೆಲ್ಲ.
ನಿಜಗುರು ಸ್ವತಂತ್ರ ಸಿದ್ದಲಿಂಗೇಶ್ವರನು ತನ್ನವರಿಗೆ
ಮೈಲಾರೈಕೆಯಾಗಿಹನು

ಜಾಲಗಾರನೇ ಕರುಣಿಸಬೇಕು. ಜಾಲಗಾರನೇ ಕೃಪೆದೋರಬೇಕು. ಆತನೇ ಉಳಿಸುವುದಕ್ಕೆ ಮನಸ್ಸು ಮಾಡಬೇಕು. ಆತನೇ ಬಲೆಯಿಂದ ಕಡೆಗಾಗುವ ಯುಕ್ತಿಯನ್ನು ಪ್ರೇರಿಸಬೇಕು. ಯಾಕಂದರೆ ಬಲೆಹಾಕಿದವನಿಗೇ ಗೊತ್ತು, ಬಲೆಯಿ೦ದ ಕಡೆಗಾಗುವ ಯುಕ್ತಿ. ಆತನಿಗೆ ಕೇಳಿಕೊಳ್ಳುವುದೊಂದೇ ಸರಿಯಾದ ದಾರಿ.

ಅಯ್ಯಾ, ನೀ ಮಾಡಲಾದ ಜಗತ್ತು,
ಅಯ್ಯಾ, ನೀ ಮಾಡಲಾದ ಸಂಸಾರ,
ಅಯ್ಯಾ, ನೀ ಮಾಡಲಾದ ಮದುವೆ,
ಅಯ್ಯಾ, ನೀ ಮಾಡಲಾದ ದುಃಖ,
ಅಯ್ಯಾ, ನೀ ಬಿಡಿಸಿದರೆ ಬಿಟ್ಟಿತ್ತು ತಾಮಸವಯ್ಯ !
ನಾನೀ ಮಾಯೆಯ ಗೆದ್ದೆನೆಂಬ ಹಮ್ಮಿದೇಕೆ ಕೂಡಲಸಂಗಮದೇವಾ.

ಬರಿಗೈಯಿ೦ದ ಭೂಮಿಗಿಳಿದ ಬ೦ಟ; ಏನೇನೂ ಸಂಗಡ ತಾರದಿದ್ದ ಒ೦ಟಿಗ; ಇಲ್ಲಿಗೆ ಬ೦ದುದೇ ತಡ, ಹೆರವರ ಮನೆಯಲ್ಲಿ ಗೂಡುಕಟ್ಟಿದ ಗುಬ್ಬಿಯ೦ತೆ ಮನೆ ತನ್ನದೆಂದು ಬಿಡದೆ, ಹೊನ್ನು ತನ್ನದು, ಮಣ್ಣು ತನ್ನದು ಎನುತ್ತ
ದಿನಕ್ಕೊಂದು ಕಣ್ಣಿಯನ್ನು ಕೊರಳಿಗೆ ತೊಡಕಿಸಿಕೊಂಡು ನಿರುಪಾಯನ೦ತೆ ನಿಂತುಕೊಂಡು ಸಾಕಾಗದೆ,  ಕ್ಷ್ಣಣಕ್ಕೊಂದು ಯುಕ್ತಿ ಹೂಡಿ ಸಂಸಾರವನ್ನು ಸಮರಭೂಮಿಯನ್ನಾಗಿ ಮಾಡಿಕೊಳ್ಳುವನು. ಜೀವನವನ್ನು ಕಲಹಕೇ೦ದ್ರ
ವನ್ನಾಗಿ ಮಾಡಿಕೊಳ್ಳುವನು. ಬಾಳುವಬಟ್ಟೆಯನ್ನು ಬಾಳಧಾರೆಯ ದಾರಿಯನ್ನಾಗಿ ನೋಡಿಕೊಳ್ಳುವನು. ನಿಜವಾಗಿ ನೋಡಿದರೆ ಜೀವಿಯ ಆಸ್ತಿಯೇನಿದೆ? ನಾಸ್ತಿಯೇ ಅವನ ಆಸ್ತಿ. ಹೇಗೆ೦ದರೆ-
ದೇಹನೋಡುವಡೆ ಪಾಂಚಭೌತಿಕ.
ತಾ ನೋಡುವಡೆ ಜೀವಾಣುಗಳು.
ಧನ ನೋಡುವಡೆ ಕುಬೇರನದು.
ಮನನೋಡುವಡೆ ವಾಯುವ ಕೂಡಿದ್ದು,
ವಿಚಾರಿಸಿ ನೋಡಿದರೆ ಬ್ರಹ್ಮನದು.
ನಾ ಮಾಡುವೆನೆಂದಡೆ ಅದು ಆದಿಶಕ್ತಿ ಚೈತನ್ಯ.
ನಾ ತಿಳಿದಿಹೆನೆಂದಡೆ ಅದು ಜ್ಞಾನದ ಬಲ.
ಆ ಜ್ಞಾನವು ನಾ ಎ೦ದೆಡೆ ಇದಿರಿಟ್ಟು ತೋರುತ್ತಿದೆ.
ತೋರುವ ಆನ೦ದಮೂರ್ತಿ ನಾ ಎ೦ದೆಡೆ ಅದು
ಸಾಕ್ಷಿಯಾಗಿ ನಿಂತಿತ್ತು.
ಸಾಕ್ಷಿಯೆಂಬುದದು ತಿಳಿದು ತಿಳಿಯದೆ೦ಬುದಕ್ಕೆ
ಬಯಲಾದ ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನ ತಂದೆ.

ಸಿರಿಯೆ೦ಬುದು ಸಂತೆಯ ಮ೦ದಿಯಂತಿದ್ಧರೂ ಜೀವನು ಅದೆಲ್ಲ. ಕಾಣುವುದೆಲ್ಲ ತನ್ನದೇ ಒಡವೆಯೆಂದು ಬಿಗಿದಪ್ಪಿ ನಿಂತುಕೊಂಡರೆ, ತನ್ನ ಕೈಯಲ್ಲಿ ತಾನೇ ಕಟ್ಟುವಡೆದು ಬೀಳುವನು. ಕಟ್ಟದರಿದ್ರನನ್ನು ಯಾರು ಕಟ್ಟಿಹಾಕಿಯಾರು? ಯಾತಕ್ಕೆ ಕಟ್ಟಿಹಾಕಿಯಾರು? ಹಗಲುಗಳ್ಳನ ಕೈಗೆ ಇನ್ನಾವ ಒಡವೆ ಸಿಕ್ಕೀತು? ಸಿಕ್ಕು ಅವನದಾದೀತು?

ಭೂಮಿ ನಿನ್ನದಲ್ಲ, ಹೇಮ ನಿನ್ನದಲ್ಲ.
ಕಾಮಿನಿ ನಿನ್ನವಳಲ್ಲ, ಅದು ಜಗಕಿಕ್ಕಿದ ವಿಧಿ.
ನಿನ್ನೊಡವೆಯೆಂಬುದು ಜ್ಞಾನರತ್ನ,
ಅಂತಪ್ಪ ದಿವ್ಯರತ್ನವ ಕೆಡಗುಡದೆ
ಆ ರತ್ನನ ನೀನಲಂಕರಿಸಿದೆಯಾದಡೆ
ನಮ್ಮ ಗುಹೇಶ್ವರ ಲಿಂಗದಲ್ಲಿ ನಿನ್ನಿಂದ ಬಿಟ್ಟು
ಸಿರಿವಂತರಿಲ್ಲ ಕಾಣಾ ಎಲೆ ಮನವೇ.

ಎಂಬುದು ಕವಡುಗಂಟಕ ಮನಕ್ಕೆ ಒಳಿತಾಗಿ ತಿಳಿದ ದಿನವೇ ಸಂಸಾರ ಸಾರೋದಯ. ಅಂದೇ ನಿಜವಾದ ಸಂಸಾರ ಆರ೦ಭವಾಗುವದು. ಒ೦ದೊ೦ದು ಜೀವಿಯ ನಿಜವಾದ ಸಂಸಾರವನ್ನು ಆರ೦ಭಿಸುವ ನೆಲೆ ತಲುಪುವಷ್ಟರಲ್ಲಿ ಅಸಂಖ್ಯ ಜನ್ಮಗಳನ್ಪು ಕಳೆಯುತ್ತಾನೆ. ಆದ್ದರಿಂದ ಅನೇಕ ವರ್ಷಗಳನ್ನು ಕಳೆಯುವುದು ಆಶ್ಚಯವೇ?

ಅಂಥ ಜ್ಞಾನರತ್ನವು ಸಫಲವಾಗಿ ವಿಪುಲವಾಗಿ ಕರಗತವಾಗಬೇಕಾಗಿದೆ. ಆದು ಅಲ್ಲಿ-ಇಲ್ಲಿ ಕೇಳಿದರೆ ಸಿಗಲಾರದು. ಪುಸ್ತಕ–ಪುರಾಣಗಳ ಅದರ ನೆಲೆ ಹತ್ತಿಲ್ಲ. ಅದೊಂದು ಕಲ್ಪವೃಕ್ಷದ ಕೃಷಿ.

ಭಕ್ತಿಯೆಂಬುದು ಬೇರು, ವಿರಕ್ತಿಯೆಂಬುದು ಮರ.
ಫಲವೆಂಬುದು ಜ್ಞಾನ, ಪಕ್ವಕ್ಕೆ ಬಂದಿತ್ತೆಂಬುದು ಅವಧಿಜ್ಞಾನ.
ತೊಟ್ಟುಬಿದ್ದಲ್ಲಿ ಪರಮಜ್ಞಾನ, ಸವಿದಲ್ಲಿ ಆಂತರ್ಯಜ್ಞಾನ.
ಸುಖತನ್ಮಮಯನಾದಲ್ಲಿ ದಿವ್ಯಜ್ಞಾನ.
ದಿವ್ಯತೇಜಸ್ಸು ಹಿಂಗಿದಲ್ಲಿ ಪರಿಪೂರ್ಣ.
ಅದು ಮಹದೊಡಲೆಂಬುದಕ್ಕೆ ಎಡೆ ಇಲ್ಲ
ಚೆನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನ-
ಲಿ೦ಗವು ಅಪ್ರಮಾಣವಾದ ಕಾರಣ,

ಜ್ಞಾನವೇ ಸಂಸಾರಿಗನ ಸಂಗಡಿ. ಅದೇ ಸ೦ಸಾರಸಾಗರದ ಈಸುಗು೦ಬಳ. ಅದು ನೀರಲ್ಲಿ ತೇಲಿಸುವಷ್ಟೇ ಅಲ್ಲ; ತೋಯಿಸದೆ ಮೀಯಿಸಬಲ್ಲದು. ಅವನಿಗೆ ನೊರೆ-ತೊರೆಗಳ ಭಯವಿಲ್ಲ. ಮೊಸಳೆ-ತಿಮಿಂಗಲಗಳ ಕಾಟವಿಲ್ಲ.”

ಜಗಜ್ಜನನಿಯು ತುಸು ತಡೆಯುವಂತೆ ಕೈಸನ್ನೆಮಾಡಿ ತನ್ನ ಮಿ೦ಚಿನ ಶಲಾಕೆಯ೦ಥ ಮಾತಿನ ಮಾಲೆಯನ್ನು ನೀಡಿದುದೇನಂದರೆ-

ಕುಂಡಲಿಗನ ಕೀಟದಂತೆ ಮೈಮಣ್ಣಾಗದಂತೆ
ಇರ್ದೆಯಲ್ಲ ಬಸವಣ್ಣ !
ಜಲದೊಳಗಣ ತಾವರೆಯ೦ತೆ ಹೊದ್ದಿ ಹೊದ್ದದ೦ತೆ
ಇರ್ದೆಯಲ್ಲ ಬಸವಣ್ಣ !
ಜ೮ದಿ೦ದಾದ ಮೌಕ್ತಿಕದಂತೆ ಜಲವು ತಾನಾಗದಂತೆ
ಇರ್ದೆಯಲ್ಲ ಬಸವಣ್ಣ !
ಗುಹೇಶ್ವರಲಿಂಗದಾಣತಿವಿಡಿದು, ತನುಗುಣಮತ್ತರಾಗಿರ್ಪ
ಐಶ್ವರ್ಯಾಂಧಕರ ಮತವನೇನ ಮಾಡಬ೦ದೆಯಯ್ಯ
ಸಂಗನಬಸವೇಶ್ವರ ”
ಎನ್ನುವುದಕ್ಕೆ ಜನಜಂಗುಳಿಯು ಆತ್ಯ೦ತ ಹಿಗ್ಗಿನಿಂದ-“ಜಯಜಯ! ಜಯ ನಮಃ ಪಾರ್ವತೀಪತೇ ಶಿವಹರಹರ ಮಹಾದೇವ !! ” ಎಂದು ಉಚ್ಚ ಕಂಠದಲ್ಲಿ ಉಗ್ಗಡಿಸಿ, ಬಾಳಬಟ್ಟೆಯ ಪರಮಾಗಮವನ್ನು ಇನ್ನಷ್ಟು ಕೇಳುವದಕ್ಕೆ ತವಕಗೊಂಡು ಕುಳಿತಿತು.

ಸಂಗಮಶರಣನು ಆ ಬಳಿಕ ಕೈಮುಗಿದು ತಲೆವಾಗಿ ತನ್ನ ವಾಙ್ಮಯ ತಪಸ್ಸನ್ನು ಮತ್ತೆ ಮುಂದುವರಿಸಿದ್ದು ಹೇಗೆಂದರೆ-

ಪರಶಿವನ ಚಿತ್‌ಶಕ್ತಿ ತಾನೆ ಎರಡು ತೆರನಾಯಿತ್ತು.
ಲಿಂಗಸ್ಥಲವನಾಶ್ರಯಿಸಿ ಶಕ್ತಿಯೆನಿಸಿತ್ತು.
ಅಂಗಸ್ಥಲವನಾಶ್ರಯಿಸಿ ಭಕ್ತಿಯೆನಿಸಿತ್ತು.
ಶಕ್ತಿಯೇ ಪ್ರವೃತ್ತಿಯೆನಿಸಿತ್ತು, ಭಕ್ತಿಯೇ ನಿವೃತ್ತಿಯೆನಿಸಿತ್ತು.
ಶಕ್ತಿ ಭಕ್ತಿ ಎ೦ದು ಎರಡು ಪ್ರಕಾರವಾಯಿತು.

ತಾಯಿತಂದೆಯಿಲ್ಲದ ಕಂದನಾಗಿದ್ದರೂ ಸರ್ವೇಶ್ವರನು ಜಗತ್ತಿಗೆ ತಾನೇ ತಾಯಿಯಾದನು; ತಂದೆಯಾದನು.  ತನ್ನ ತಾನೇ ಹುಟ್ಟಿ ಬೆಳೆದರೂ ಲೋಕದ ಬೆಳೆಗೆ ಕೃಷಿಕನಾದನು. ಭೂಮಿಯೂ ತಾನಾದನು, ಬೀಜವೂ ತಾನಾದನು,
ಬೆಳೆಯೂ ತಾನಾದನು, ಬೆಳೆಸೂ ತಾನಾದನು, ಹೆಣ್ಣೂ ತಾನೇ, ಗ೦ಡೂತಾನೇ ಆದನು.

ಮೊಲೆಮುಡೆ ಬ೦ದರೆ ಹೆಣ್ಣೆಂಬರು,
ಗಡ್ಡಮೀಸೆ ಬಂದರೆ ಗಂಡೆಂಬರು,
ನಡುವೆ ಸುಳಿವಾತ್ಮನು ಗಂಡೂ ಅಲ್ಲ, ಹೆಣ್ಣೂ ಅಲ್ಲ
ಕಾಣಾ ರಾಮನಾಥಾ

ತೊಟ್ಟ ರೂಪು ಗಂಡು ಇರಬಹುದು; ಇಲ್ಲವೆ ಹೆಣ್ಣು ಇರಬಹುದು. ಅಕ್ಕ ಮಹಾದೇವಿ ಹೆ೦ಗುಸಾಗಿ ಹುಟ್ಟಿದರೂ ಭಾವಿಸಲು ಗಂಡುರೂಪು. ಅಣ್ಣ ಬಸವಣ್ಣನು ಗಂಡುಸಾಗಿ ಹುಟ್ಟಿದ್ದರೂ ತನ್ನ ನಲ್ಲನೊಡನೆ ಅತೀವ ನಮ್ರತೆ
ಯಿ೦ದ ಸ೦ಸಾರ ಹೂಡಿದ ಸತಿಯಂತೆ ವರ್ತಿಸಿದನು. ಅವನು ಸ೦ಗಮನಾಥ ನೊಡನೆ ವರನಂತೆ, ಜಂಗಮ ಜ೦ಗುಳಿಯೊಡನೆ ವಧುವಿನಂತೆ ಬಾಳಿದನು. ಆಕ್ಕನು ಸತ್ತುಕೆಡುವ ಗ೦ಡರನೊಯ್ದ ಒಲೆಗಿಕ್ಕಿ, ಸಾವಿಲ್ಲದ ಕೇಡಿಲ್ಲದ
ಚೆಲುವನಾದ ಚೆನ್ನಮಲ್ಲುಕಾರ್ಜುನನನ್ನು ಆಮರಪತಿಯನ್ನಾಗಿ ವರಿಸಿದಳು; ಚಿರಮಂಗಲವತಿಯಾದಳು.

ಭೂಮಿಯ ಮೇಲೆ ಹುಟ್ಟಿಬಂದ ಹೆಣ್ಣು-ಗ೦ಡುಗಳೆಲ್ಲ ಚಿರಮಂಗಲೆಯ ರಾಗುವುದೇ ನಿಜವಾದ ಸಂಸಾರ.
“ಬಸವಣ್ಣ ಮೆಚ್ಚಲು ಒಗೆತನವ ಮಾಡುವೆ
ಚೆನ್ನ ಮಲ್ಲಿಕಾರ್ಜುನನ ಕೈಪಿಡಿದು.
ನಿಮ್ಮ ಮಂಡೆಗೆ ಹೂವ ತಾಹೆನಲ್ಲದೆ
ಹುಲ್ಲ ತಾರೆನು.”

ಎ೦ದು ಹೂಣಿಕೆತೊಟ್ಟು ಪಾರಮಾರ್ಥಿಕ ಸ೦ಸಾರ ನಡೆಸುವುದಕ್ಕೆ ಸಿದ್ಧವಾಗುವುದೇ ಜೀವಸತಿಯ ಪರಮಧರ್ಮ.

ಪಾರಮಾರ್ಥಿಕ ಸಂಸಾರಕ್ಕೆ ಲೌಕಿಕ ಶೃ೦ಗಾರವೂ ಜೋಡಿಯಾಗ ಬೇಕು; ಹಿನ್ನೆಲೆಯಾಗಬೇಕು. ಆದರೆ ಅದೇ ಪ್ರಮುಖವಾಗಿ ನಿಲ್ಲಬಾರದು, ಅರಿಸಿನವನೆ ಮಿಂದು, ಹೊಂದೊಡಿಗೆಯನೆ ತೊಟ್ಟು, ನಲ್ಲನ ಒಲುಮೆಗಳಿಸದ ಸತಿಯ ಬಾಳ್ವೆಯೆಂಥದು? ಅವಳ ಬದುಕು ಅದೆಂಥದು?

ಅರಿಸಿನವು ದೊರಕದೆ ಬಿಡಲಿ, ಹೊಂದೊಡಿಗೆ ಸಿಗಲಿ ಹೋಗಲಿ, ಆದರೆ ಒಡೆಯನ ಒಲುಮೆ ಮೊದಲುಬೇಕು. ಶಿವನ ಸತಿಯಾದ ಶರಣನು ಶಿವನ ಒಲುಮೆಗೆ ಪಾತ್ರನಾಗುನ೦ತೆ ಲೌಕಿಕದಲ್ಲಿ ಪತಿಯಾದವನಿಗೆ ಸತಿಯು ಅ೦ತರಂಗದ ಧ್ಯೇಯವಾಣಿಯನ್ನು ಪ್ರತಿಧ್ವನಿಸುವಂತಿರಬೇಕು; ಪ್ರತಿನಿಧಿಸುವಂತಿರಬೇಕು.

ಸತಿಪತಿಗಳೊಂದಾದ ಭಕ್ತಿಹಿತವಾಗಿಪ್ಪುದು ಶಿವಂಗೆ.
ಸತಿಪತಿಗಳಾಗದವರ ಭಕ್ತಿ ಅಮೃತದೊಳು-
ವಿಷವ ಬೆರೆಸಿದಂತೆ ಕಾಣಾ ರಾಮನಾಥಾ.

ಎರಡು ಬತ್ತಿಗಳು ಒಂದೇ ಜ್ಯೋತಿಯನ್ನು ಬೆಳಗುವ೦ತೆ, ಎರಡು ಕೈಗಳು ಒಬ್ಬನೇ ಈಶ್ವರನಿಗೆ ಮುಗಿಯುವಂತೆ, ಗ೦ಡು-ಹೆಣ್ಣಿನ ರೂಪದಲ್ಲಿ ಒ೦ದೆಡೆಗೂಡಿದ ಆತ್ಮಗಳ ಸಂರಕ್ಷಣೆಗೂ ಅವುಗಳ ಪ್ರಗತಿಗೂ ಆದರಿಂದ ಪರಮ ಸಹಾಯವು೦ಟಾಗುತ್ತದೆ, ಪರಮಶೋಭೆಯುಂಟಾಗುತ್ತದೆ.

ಜಗವೆಲ್ಲಾ ಅರಿಯಲು ಎನಗೊಬ್ಬ ಗಂಡನು೦ಟು.
ಆನು ಮುತ್ತೈದೆ, ಆನು ನಿಟ್ಟೈದೆ.
ಕೂಡಲಸ೦ಗಯ್ಯನ೦ತಪ್ಪ ಎನಗೊಬ್ಬ ಗಂಡನುಂಟು.

ಲೌಕಿಕದ ಸತಿಯೇ ಇರಲಿ, ಪಾರಮಾರ್ಥದ ಸತಿಯೇ ಇರಲಿ, ಅವಳಿಗೆ ನಲ್ಲನೇ ಪ್ರಾಣದ ಪ್ರಾಣ, ಜೀವದ ಜೀವ ಆಗಿರಬೇಕಲ್ಲದೆ ಹೊರಗಿನ ಮಿ೦ಡನಾಗಿರಬಾರದು; ಒಳಗಿನ ಗಂಡನಾಗಿರಬೇಕು. ಮಿ೦ಡನು ನಾಲ್ಕೊಪ್ಪತ್ತಿನ
ಜೊತೆಗಾರ; ಗ೦ಡನು ಶಾತ್ವತ ಸಂಗಡಿಗ.
ನಲ್ಲನ ರೂಪೆನ್ನ ನೇತ್ರವ ತುಂಬಿತ್ತು.
ನಲ್ಲನ ನುಡಿ ಎನ್ನ ಶ್ರೋತ್ರವ ತು೦ಬಿತ್ತು..
ನಲ್ಲನ ಸುಗ೦ಧವೆನ್ನ ಘ್ರಾಣವ ತು೦ಬಿತ್ತು.
ನಲ್ಲನ ಚುಂಬನವೆನ್ನ ಜಿವ್ಹೆಯ ತುಂಬಿತ್ತು.
ನಲ್ಲನಾಲಿ೦ಗನವೆನ್ನ ಸರ್ವಾಂಗವ ತು೦ಬಿತ್ತು.
ನಲ್ಲನು ಆಂತರಂಗ ಬಹಿರಂಗದಲ್ಲಿ ಕೂಡಿ
ಸುಖಿಯಾದೆ ಉರಿಲಿಂಗದೇವಾ.
ದಾಂಪತ್ಯ ಜೀವನದ ಇಂಥ ಅಮರ ಐಕ್ಯವು ಸಾಧಿಸಿದ ಬಳಿಕ ಗ೦ಡ-ಹೆಂಡಿರಾಗಲಿ, ಜೀವಶಿವರಾಗಲಿ ಮೃತಪುತ್ರನೊಬ್ಬನನ್ನು ಪಡೆಯುವುದು ಪರಮ ಗುರಿ.
ಕಾಯಸತಿ ಜೀವಪತಿಯರು
ಕೂಡಲಸ೦ಗನಂಥ ಮಗನ ಪಡೆಯಬೇಕಾಗಿದೆ.

“ಪರಮಾತ್ಮನು ನಮ್ಮ ಆಶೆಗೆ ಜನಿಸಿದ ಕೂಸು”
-ಶ್ರೀ ಅರವಿಂದರು
ಸ೦ಸಾರವ ವಿಷಯ ಇಷ್ಟಕ್ಕೆ ಮುಗಿಯಲಾರದು. ಅದನ್ನು ಆ ಆ ವಿಷಯ ಗಳಲ್ಲಿ ಅಂಗೋಪಾಂಗದಂತೆ ಹೇಳುತ್ತ ಹೋಗುವುದು ಸುಲಭವಾದೀತು.

****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನ್ನ ಬರುವು
Next post ನಗೆಡಂಗುರ-೧೪೪

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…