Home / ಬಾಲ ಚಿಲುಮೆ / ಕಥೆ / ಮಂಥರನ ಕಥೆ

ಮಂಥರನ ಕಥೆ

ಒಂದೂರಿನಲ್ಲಿ ಮಂಥರನೆಂಬ ನೇಗೆಯವನಿದ್ದನು. ಒ೦ದು ದಿನ ಅವನ ಮಗ್ಗದ ಮರಮುಟ್ಟುಗಳೆಲ್ಲಾ ಮುರಿದು ಹೋಯಿತು. ಅದರಿಂದ ಮರವನ್ನು ತರಬೇಕೆಂದು ಒಂದು ಕೊಡಲಿ ತೆಗೆದುಕೊಂಡು ಕಾಡಿಗೆ ಹೊರಟನು. ಹಾಗೆಯೇ ತಿರುಗುತ್ತಾ ಸಮುದ್ರ ತೀರಕ್ಕೆ ಬಂದು, ಅಲ್ಲೊ೦ದು ಮರವನ್ನು ಕಂಡು ಅದನ್ನು ಕತ್ತರಿಸಬೇಕು ಎಂದುಕೊಂಡನು. ಆ ಮರದಲ್ಲಿ ಒ೦ದು ಯಕ್ಷವು ಇತ್ತು. ಅವನು ನೇಗೆಯವನ ಇಷ್ಟವನ್ನು ತಿಳಿದು ಅವನಿಗೆ ಕಾಣಿಸಿಕೊಂಡು “ಅಯ್ಯಾ, ಇದರಲ್ಲಿ ನಾನಿರುವೆನು. ಬೇರೆ ಮರವನ್ನು ನೋಡಿಕೊ. ಇಲ್ಲಿ ಸಮುದ್ರದ ಮೇಲಿನಿಂದ ಗಾಳಿಯು ಬೀಸುತ್ತ ನನಗೆ ಸುಖವಾಗಿರುವುದು. ಎಂದು ಕೇಳಿಕೊಂಡಿತು. ನೇಗೆಯವನು “ಅಯ್ಯಾ, ನಿಜ, ನಿನ್ನ ಸುಖ ನೋಡಿದರೆ ನನಗೇನು ಗತಿ? ದಿನವೂ ಮಗ್ಗ ನಡೆಯದಿದ್ದರೆ ನನ್ನ ಜೀವನ ಹೇಗೆ ಹೇಳು. ಇದೊಂದು ಮರ ಕಡಿದರೆ ನನಗೆ ಬೇಕಾದ ಪದಾರ್ಥಗಳೆಲ್ಲ ಆಗುವುವು” ಎಂದನು. ಯಕ್ಷವು “ಅಯ್ಯಾ, ಈ ಮರವನ್ನು ಬಿಡು. ನಿನಗೆ ಬೇಕಾದ ವರವನ್ನು ಕೊಡುವೆನು” ಎಂದಿತು. ನೇಗೆಯವನು “ಆಗಬಹುದು. ಆದರೆ ಹೋಗಿ ನನಗೆ ಬೇಕಾದ ವರವನ್ನು ಕೇಳಿ ಕೊಂಡು ಬಂದು ವರವನ್ನು ಕೇಳುವೆನು.” ಎಂದನು. ಯಕ್ಷವು ಒಪ್ಪಿತು.
ಅವನು ಬರುತ್ತ ದಾರಿಯಲ್ಲಿ ಅವನ ಸ್ನೇಹಿತನಾದ ನಾಪಿತನು ಸಿಕ್ಕಿದನು. “ಅವನಿಗೆ ಎಲ್ಲವನ್ನೂ ಹೇಳಿ “ಏನು ವರವನು, ಕೇಳಲಿ?” ಎನ್ನಲು, ಅವನು “ಒಂದು ರಾಜ್ಯವನ್ನು ಕೇಳಿಕೊ. ನೀನು ಅರಸು, ನಾನು ಮಂತ್ರಿ, ಆಗಿ ಸುಖವಾಗಿರೋಣ” ಎಂದನು. ನೇಗೆಯವನು “ಆಗಲಿ, ನನ್ನ ಹೆಂಡತಿಯನ್ನೂ ಕೇಳುವೆನು. ಅವಳೇನು ಹೇಳುವಳೋ ನೋಡೋಣ” ಎಂದನು. ಅವನು ಬೇಡ ಬೇಡ ಎಂದು ಎಷ್ಟು ಹೇಳಿದರೂ ಕೇಳಲಿಲ್ಲ.
ಅವನು ಬಂದು ಹೆಂಡತಿಗೆ ಹೇಳಿದನು: ನಾಪಿತನು ಹೇಳದುದನ್ನು ಕೇಳಿ, ಅವಳು “ಯಾರನ್ನು ಕೇಳಿದರೂ ಕೇಳಬಹುದು. ಅವನನ್ನು ಕೇಳುವುದೆ? ರಾಜ್ಯವೆಂದರೇನು? ಸುಮ್ಮನಾಯಿತೆ? ರಾಮನ ಗತಿ ಏನಾಯಿತು? ಪಾಂಡವರಿಗೇನಾಯಿತು? ರಾಜನಾದರೆ ಅಣ್ಣ ತಮ್ಮಂದಿರು, ಪುತ್ರ ಮಿತ್ರರು, ಕೂಡ ಅವನನ್ನು ರಾಜ್ಯಕ್ಕಾಗಿ ಕೊಲ್ಲುವುದಕ್ಕೆ ಸಿದ್ದರಾಗಿರುವರು. ಅದರಿಂದ ರಾಜ್ಯ ಬೇಡ. ಈಗ ನಿನಗೆ ಒಂದು ತಲೆ ಎರಡು ತೋಳು ಇವೆ. ಇದರಿಂದ ಒಂದು ದುಪ್ಪಟಿಯನ್ನು ನೇಯುವೆ.  ಹೋಗಿ ಇನ್ನೊಂದು ತಲೆ, ಇನ್ನೆರಡು ತೋಳು ಕೇಳಿಕೊ. ಅಗ ಎರಡು ದುಪಟಿಗಳಾಗುವುವು. ಒಂದನ್ನು ಮಾರಿದರೆ ಮನೆಯ ವೆಚ್ಚಕ್ಕಾಗುವುದು. ಇನೊಂದು ಮಾರಿದರೆ ಸುಖಕ್ಕಾಗುವುದು. ನಮಗೆ ಅಷ್ಟು ಸಾಕು” ಎಂದಳು.
ನೇಗೆಯವನಿಗೆ ಹೆಂಡತಿಯ ಮಾತು ಸರಿ ಎನ್ನಿಸಿತು. ಅದರಂತೆ ಹೋಗಿ ಯಕ್ಷವನ್ನು ಕೇಳಲು, ಅದು ಹಾಗೆಯೇ ಆಗಲಿ ಎಂದು ವರವನ್ನು ಕೊಟ್ಟತು. ನೇಗೆಯವನಿಗೆ ಎರಡನೆಯ ತಲೆ ಇನ್ನೆರಡು ತೋಳು ಹುಟ್ಟಿದುವು. ವರವು ಸಿಕ್ಕಿತೆಂದು ಸಂತೋಷದಿಂದ ಅವನೂ ಊರಿಗೆ ಬಂದನು. ಆದರೆ ಊರಿನವರು “ಇದು ಯಾವುದೋ ಭೂತ, ನಮ್ಮ ಊರಿಗೆ ಬರುತ್ತಿದೆ” ಎಂದು ಕಲ್ಲು ಹೊಡೆದು ಅವನನ್ನು ಕೊಂದರು. ಅದರಿಂದ “ತನಗುಂ ಮತಿಯಿಲ್ಲದೆ” ಎಂಬ ಗಾದೆಯನ್ನು ಹೇಳಿದೆನು. ನಿಜ ಯಾರೇ ಆಗಲಿ, ಆಶಾ ಪಿಶಾಚಿಯು ಹಿಡಿದಾಗ ಅಪಹಾಸ್ಯಕ್ಕೆ ಗುರಿಯಾಗುವರು. ಸಂದೇಹವೇನು? ಕೇಳಿಲ್ಲವೆ? :-
ಫಲಿಸದ ಕಾರ್ಯದ ಫಲವಂ ಚಿಂತಿಸಿ | 
ಕೆಲಸವ ಮಾಡುವೆನೆನ್ನಲು ನಿಜವಾಗಿ ॥ 
ಅಪಜಯ ತಪ್ಪದು ತಪ್ಪದು ನಗೆಪಾಡು | 
ಸೋಮನ ತಂದೆಯು ಸಾಕ್ಷಿಯು ತಾನಿದಕೆ ॥ ೨೮ ॥ 
ಎಂದನು. ಸುವರ್ಣಸಿದ್ಧಿಯು “ಅದು ಹೇಗೆ?” ಎನ್ನಲು, ಚಕ್ರಧರನು ಹೇಳಿದನು,
*****
ಸೋಮನ ತಂದೆಯ ಕಥೆ ಓದಿ
Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...