Home / ಕವನ / ಕವಿತೆ / ಜಯ ನವಭಾರತಕೆ

ಜಯ ನವಭಾರತಕೆ

(೨೬-೧-೧೯೫೦)
ಕಿರೀಟಪತಿಗಳ ರಾಜ್ಯವಿದಲ್ಲ
ನಮ್ಮೀ ಭಾರತದೇಶ
ಈ ಮೊದಲಿನ್ನೀ ರಾಜ್ಯದಿ ನಡೆವುದು
ನಾಡ ಮಕ್ಕಾಳಾದೇಶ-
ಎಂದುಗ್ಗಡಿಸುವ ಬಿರುದಿನ ಬಾವುಟ
ವೇರಿತು ದಿಭಿಯ ತುದಿಗೆ
ಬಿಸಿರಕುತದ ಹುಸಿಯಲ್ಲದ ಕನಸಿನ
ಧೀರರ ಬಗೆಬಾನ್‌ಬದಿಗೆ.
ಚಳಿಮುರಿಯದೆ ಹಿಮಹಿಂಗದೆ ಜನ ಮುಂ-
ಜಾನೆಯೊಳೆಚ್ಚರೆ ಬೆದರೆ
ಸುಖಪುರುಷರು ನೆಮ್ಮದಿಗೆಡೆ ಹೊರಟಿತು
ದಿಬ್ಬಣ ಹಳಮನವದಿರೆ.
ಹೊಸತೀ ನೆಲ ಹೊಸತೀ ಜನ ಹೊಸತೇ-
ಜದ ಬಾಳೀ ಭಾರತಕೆ
ಎನೆ ಹೊಸ ಜಗ್ಗಿನ ಹೆಜ್ಜೆಯ ಲಾಗಿನ
ನಡೆ ನಮ್ಮೀ ಯುವಜನಕೆ.
ಉದುರುವ ಹಣ್ಣೆಲೆ ಹೊಸ ಚೆಂದಳಿರಿಗೆ
ಗೊಬ್ಬರವೆಂತುಟೊ ಅಂತು
ಹಳೆಯ ರೂಢಿ ಹುಡಿಗೂಡಲು ಹೊಸತರ
ಹುರುಪೆಮಗಾಯಿತಿದಿಂತು.
ಮುದುಡಿದ ವಿಜ್ಞಾನದ ಹೆಡೆ ಬಿಚ್ಚುತ
ನಮ್ಮೊಳ ಪ್ರಜ್ಞೆಯನಂತ
ತನ್ನೆದೆ ತಲ್ಪದೊಳಿಹ ಮಂಗಳವನು
ಕಾಪಿಡೆ ತೊಟ್ಟಿದೆ ಪಂತ.
ತನ್ನರಿವಿನಂತೆ ತನ್ನಿರವಾಗಲು
ಹವಣಿಸುತೆದ್ದಿದೆ ನಾಡು
ಪರರಿಗಲ್ಲದೆಮ್ಮುಜ್ಜುಗಕಾಯಿತು
ಸರ್ವ ಸಮೃದ್ಧಿಯ ಜಾಡು.
ಜಗಳಗಂಟರಲ್ಲಬಲರಲ್ಲನಾ-
ವೆಮಗಿನಿತಿಲ್ಲವು ಕರುಬು
ಅಂಜೆವಂಜಿಸೆವು-ಎನೆ ಗೆಲುವಾಯ್ತೀ
ಬಾವುಟವಾಡುವ ಜರುಬು.
ಕಿವಿಗಿನಿದೀ ಜಯ ಜಯಫೋಷಣೆ, ಕಣ್‌-
ಗಿನಿದೀ ಹಮ್ಮಿನ ಪರಿಸೆ
ಮೆರವಣಿಗೆಯಿಗೋ ದೈವವು ಧೀರರಿ-
ಗೆರೆವಾ ಶುಭಗಳ ವರಿಸೆ.
ಜಯ ಶುಭಮಂಗಳ ನವ ಭಾರತಕೆ
ಸಲ್ಲಲಿ ಸಂತರ ಹರಕೆ
ಶುಭಾ ಶುಭವ ತನ್ನಿಚ್ಛೆಗೆ ನಡೆಸುವ
ಸರ್ವೋದ್ಧಾರಕ ಶಿವಕೆ.
ಅವಾಚ್ಯವಾಗಲಿ ದೇಹಿನಾಸ್ತಿಯೆಂ-
ಬುಕ್ತಿಗಳೆಮ್ಮೀ ಜನಕೆ
ಮಿತಹಿಂಸೆಯೊಳಮಿತಪ್ರೇಮದೊಳೀ-
ಆಳಿಕೆ ಲೋಕವ ಹಿತಕೆ.
ಸಿರಿ ಹೆಚ್ಚಲಿ ಸೊಗಹೆಚ್ಚಲಿ ಋದ್ಧಿಯೊ-
ಳಿಂದ್ರಿಯ ನಿಗ್ರಹಕೊಲಿದು
ದುಃಖದ ಕರುಕಿಡದಾನಂದವ ಪಡೆ-
ದೀ ನೆಲ ಬಾಳಲಿ ನಲಿದು.
*****
Tagged:

Leave a Reply

Your email address will not be published. Required fields are marked *

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...