ಬಟ್ಟ ಬಯಲ ನೆಲದಲಿ
ಇಟ್ಟೆ ನನ್ನ ದೀಪವ
ಗಾಳಿ ಬೀಸಿ ಬೀಸಿತು
ಮೇಲೆ ಮೋಡ ಕವಿದಿತು
ಮಳೆಯು ಕೂಡ ಸುರಿಯಿತು
ಮೇರೆದಪ್ಪಿ ಹರಿಯಿತು
ಆದರೆನ್ನ ದೀಪವು
ಆರಲಿಲ್ಲ ಉಳಿಯಿತು.
ಆದರೇನು? ನೀವು ನೊಂದು
ಬಿಟ್ಟ ಬಿಸಿಯ ಉಸಿರನು
ತಾಳಿಕೊಳುವ ತ್ರಾಣವದಕೆ
ಬಾರದೆಂದು ಅನಿಸಿತು.
ಬಟ್ಟ ಬಯಲ ನೆಲದಲಿ
ಇಟ್ಟೆ ನನ್ನ ದೀಪವ.
*****

















