ನೆಲವ ಪಸರಿಸಿ ಒಳಿತು ಹಬ್ಬಿದೆ ತಾಯತಬ್ಬಿದ ಮಗುವೊಲು
ಬಲವು ನೆಲವನ್ನಾಳಹೊರಟಿದೆ ತುಳಿದು ಒಳಿತಿನ ತಲೆಯನು
ಮೂಕ ತಾಯಿಗೆ ಮೂಕ ಮಗಳು ಸತಿಯ ಮೌನವ ಮೀರಿದೆ
ಲೋಕದೊಳಗಿನ ಪತಿಗಳಂದದಿ ಬಲವು ಸತ್ತ್ವವ ಹೀರಿದೆ
ಕರುಳಕೊರಗನು ಕರುಳೆ ಬಲ್ಲುದು ಎಂಬ ವ್ಯಾಖ್ಯೆಯು ಮೌನಕೆ
ಇರುಳಿಗೇತಕೆ ಹಗಲಚಿಂತೆಯು ಮೀರೆ ಬಲ ದಬ್ಬಾಳಿಕೆ
*****

















