ನೆಲದೊಡಲಾಳದ ಭಾವಬೇರುಗಳ
ಹೊಯ್ದಾಟ ಚಡಪಡಿಕೆ ನೋವು ಹತಾಶೆ
ಕಿಡಿಬಿದ್ದರೆ ಕೊನೆ, ಭಯ ಆತಂಕ
ಕಾದು ಕಾದು ಬೆಂಡಾದ ಕಣ್ಣುಗಳಿಗೆ
ಬೆಂದ ಎದೆಗೂಡು ಹಸಿದೊಡಲುಗಳಿಗೆ
ತುಂಬಿನಿಂತ ಕಪ್ಪನೆಯ ಮೋಡಗಳ ಕಂಡು ಸಂಭ್ರಮ
ಒಳಗೊಳಗೆ ಹನಿಹನಿಗೆ ಹಪಿಹಪಿಸಿ
ಉಸುರಿಗೆ ಕೈಚಾಚಿ ಬೇಡಿ ಕಾಡುವ ಧೈನ್ಯತೆ
ಪ್ರೀತಿ ಇಲ್ಲದಿರೆ ಹುಲ್ಲು ಚಿಗುರುವುದೆಂತು?
ಬೇಕು ಮುತ್ತಿನ ಸ್ಪರ್ಶ, ಸ್ಪೂರ್ತಿಯ ಚಿಲುಮೆ
ಕೊರಡು ಕೊನರುವುದು ಹಸಿರು ತುಂಬುವುದು
ತಂಪಡರುವುದು ಒಡಲಾಳ
ರಾತ್ರಿ ಹಗಲು ನಿರಂತರ ಮಳೆ ಹನಿಯತೊಡಗಿದ್ದು
ಪಾತರಗಿತ್ತಿಗೆ ಸಂಭ್ರಮ ಒಡಲತುಂಬ ತುಂಬಿ
ಬೇರು ನೂರು ಸಾವಿರದ ಟಿಸಿಲಾಗಿ
ಚಿಗುರೊಡೆದಿತ್ತು ಅಂಗಳಂಗಳಕೆ
ಆಸೆ ಹಸಿರಾಗಿತ್ತು ಎಲೆಎಲೆಗೆ
*****
ಪುಸ್ತಕ: ಇರುವಿಕೆ