೧
ಮಣ್ಣ ಕಣ್ಣು ಮಣ್ಣ ನೋಡಿ
ಬಣ್ಣದೊಡಲ ಬಾನ ಬೇಡಿ
ಬೆಣ್ಣೆ ಬಾಳ ಕಲ್ಲು ಮಾಡಿ
ಕಂಡು ಕಾಣದಂತೆ ಇಹುದು!
೨
ಜಗವೆ ಮಣ್ಣು ಮಣ್ಣೆ ಜಗವು
ಸೊಗಕೆ ದುಃಖವೆಂಬ ನೊಗವು
ಬಗೆಗೆ ಬಹಳ ದೂರ ದರಿವು
ನಿಜ ನಿಜವೆಂದೆನ್ನುತಿಹುದು
೩
ತಿಳಿವು ಬಾಳಿಗಿರುವ ಕಣ್ಣು
ಕಳೆದ ಕಷ್ಟ ಮನಕೆ ಹೊನ್ನು
ಬೆಳೆಗೆ ಸರಿಯಿದಾವುದಿನ್ನು?
ಅರಿಯೆ ಜಾಣತನವಿದು!
*****
ಬೆಂಗಳೂರು :೧೯೪೩

















