ಕೋಲನಾಡ ಮನನಿ ಕೊಲನಾಡ ||ಪ||
ಹರ್ಯಾಗೇಳುತಲೆದ್ದನ ಬಡಿಗ್ಯಾ
ಹಾಲುಬಾನಗಳುಂಡಾನ ಬಡಿಗ್ಯಾ ||ಕೋ|| ೧
ಹಾಲುಬಾನಗಳುಂಡಾನ ಬಡಿಗ್ಯಾ
ಏಳುಸುತ್ತ ಗುಡ್ಡ ತಿರುಗ್ಯಾನ ಬಡಿಗ್ಯಾ ||ಕೋ|| ೨
ಏಳುಸುತ್ತ ಗುಡ್ಡ ತಿರುಗ್ಯಾನ ಬಡಿಗ್ಯಾ
ಉಳಿ ಬಾಚಿ ಹೊತ್ತಂದನ ಬಡಿಗ್ಯಾ ||ಕೋ|| ೩
ಉಳಿ ಬಾಚಿ ಹೊತ್ತಂದನ ಬಡಿಗ್ಯಾ
ಅತ್ತಿ ಮರವೊಂದ್ಹುಡಿಕ್ಯಾನ ಬಡಿಗ್ಯಾ ||ಕೋ|| ೪
ಅತ್ತಿಮರವೊಂದ್ಹುಡಿಕ್ಯಾನ ಬಡಿಗ್ಯಾ
ಬಡ್ಡಿ ಕೊರೆದು ಬಸವಣ್ಣನ ಮಾಡಿದ ||ಕೋ|| ೫
ಬಡ್ಡಿ ಕೊರೆದು ಬಸವಣ್ಣನ ಮಾಡಿದ
ನಡವ ಕೊಯ್ದು ನಾಗಮ್ಮನ ಮಾಡಿದ ||ಕೋ|| ೬
ನಡವ ಕೊಯ್ದು ನಾಗಮ್ಮನ ಮಾಡಿದ
ಹೂವ ಕೊಯ್ದು ಹುಲಿಗೆಮ್ಮನ ಮಾಡಿದ ||ಕೊ|| ೭
ಹೂವ ಕೊಯ್ದು ಹುಲಿಗೆಮ್ಮನ ಮಾಡಿದ
ಕಾಯ ಕೊಯ್ದು ಕಾಳಮ್ಮನ ಮಾಡಿದ ||ಕೋ|| ೮
ಕಾಯ ಕೊಯ್ದು ಕಾಳಮ್ಮನ ಮಾಡಿದ
ಎಲಿಯ ಕೊಯ್ದು ಎಲ್ಲಮ್ಮನ ಮಾಡಿದ ||ಕೋ|| ೯
ಎಲಿಯ ಕೊಯ್ದು ಎಲ್ಲಮ್ಮನ ಮಾಡಿದ
ಬೇರು ಕೊಯ್ದು ಬಿರಿಮಲ್ಲನ ಮಾಡಿದ ||ಕೋ|| ೧೦
ಬೇರು ಕೊಯ್ದು ಬಿರಿಮಲ್ಲನ ಮಾಡಿದ
ಕೊಂಬಿ ಕೊಯ್ದು ಮೂರು ಜಂತ್ರವ ಮಾಡಿದ ||ಕೋ|| ೧೧
ಕೊಂಬಿ ಕೊಯ್ದು ಮೂರು ಜಂತ್ರವ ಮಾಡಿದ
ಟೊಂಗಿ ಕೊಟ್ಟ ಮಾತಂಗಿಯ ಮಾಡಿದ || ಕೋ || ೧೨
ಟೊಂಗಿ ಕೊಯ್ದು ಮಾತಂಗಿಯ ಮಾಡಿದ
ತುದಿಯ ಕೊಯ್ದು ಮಾದೇವನ ಮಾಡಿದ || ಕೋ || ೧೩
ತುದಿಯ ಕೊಯ್ದು ಮಾದೇವನ ಮಾಡಿದ
ಬಲಕ ಜಡಿಯ ಗಂಗಮ್ಮನ ಮಾಡಿದ || ಕೋ || ೧೪
*****








