Home / ಲೇಖನ / ಇತರೆ / ವಿಜ್ಞಾನಕ್ಕೆ ಸಂದ-ಗೌರವ

ವಿಜ್ಞಾನಕ್ಕೆ ಸಂದ-ಗೌರವ

ವಿಜ್ಞಾನ ಕ್ಷೇತ್ರದಲ್ಲಿ ಸಾಧಿಸಿ ತೋರಿಸಲು ಏನೆಲ್ಲ ವಿಪುಲ ಅವಕಾಶಗಳಿವೆ. ಅಲ್ಲಿ ಗುರ್‍ತಿಸುವಂಥಾ ಹೃದಯ ಶ್ರೀಮಂತಿಕೆಯವರಿದ್ದಾರೆ. ಜ್ಞಾನ ಬೆಳೆದಂತೆಲ್ಲ ವಿಜ್ಞಾನ ಬೆಳೆಯುತ್ತಿದೆ.

ಈ ನಿಟ್ಟಿನಲ್ಲಿ ಭವ್ಯ ಭಾರತದ ಹಿರಿಯ ವಿಜ್ಞಾನಿ ಹಾಗೂ ಡಿ‌ಆರ್‌ಡಿ‌ಒದ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮಾಜಿ ಮುಖ್ಯ ನಿಯಂತ್ರಕ ಡಾ| ಎ. ಶಿವಥಾನು ಪಿಳ್ಳೆ ಅವರಿಗೆ ಗೀತಂ ಪ್ರತಿಷ್ಠಾನದ ಪ್ರಶಸ್ತಿ ಲಭಿಸಿದೆ.

ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಮೂಲದ ಗೀತಂ ವಿಶ್ವವಿದ್ಯಾಲಯದ ೩೫ ನೆಯ ಸಂಸ್ಥಾಪನಾ ದಿನಾಚರಣೆಯು ಆಗಸ್ಟ್ ೦೮, ೨೦೧೫ರಂದು ಶನಿವಾರದ ದಿನದಂದು ಜರುಗಿದ್ದು ಅವರಿಗೆ ಕರೆಸಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿರುವರು.

“ಇದು ವಿಜ್ಞಾನಕ್ಕೆ ಸಂದ ಗೌರವವೆಂದು” ಅವರು ಹೆಮ್ಮೆಯಿಂದ ನುಡಿದಿರುವರು! ಜ್ಞಾನಿಗಳು ವಿಜ್ಞಾನಿಗಳು ಅಂದರೆ ಯಾವಾಗಲೂ ಹೀಗಿರುವರು!

ಬ್ರಹ್ಮಸ್ ಏರೋಸ್ಪೇಸ್ ಸಂಸ್ಥೆಯ ಸಿ‌ಇ‌ಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಡಾ|| ಎ. ಶಿವಥಾನು ಪಿಳ್ಳೈ ಅವರ ನಾಯಕತ್ವ ಅನನ್ಯವಾಗಿತ್ತು ಎಂದು ವಿವಿಯ ಕುಲಪತಿ ಪ್ರೊ | ಜಿ. ಸುಬ್ರಮಣ್ಯಂ. ಹೇಳಿರುವರು…

ಬ್ರಹ್ಮೋಸ್ ಕ್ಷಿಪಣಿಗಳು ಭವ್ಯ ಭಾರತೀಯ ಸೇವಾ ಪಡೆಗೆ ಸೇರ್ಪಡೆಯಾಗಿವೆ. ಡಾ|| ಎ. ಶಿವಥಾನುಪಿಳ್ಳೈ ಅವರು ಈಗ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ಗೆ ಸಂದರ್ಶಕ ಪ್ರೊಫೆಸರ್ ಆಗಿ ಉತ್ತಮ ಸೇವೆ ಸಲ್ಲಿಸುತ್ತಿರುವರು. ಇಷ್ಟೇ ಅಲ್ಲದೆ ಶ್ರೀಯುತರು ಹರಿಯಾಣದ ಕುರುಕ್ಷೇತ್ರದ ಎನ್‌ಐಟಿಯ ಹಾಲಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿರುವರು.

ಮುದ್ದು ಮಕ್ಕಳೆ… ಡಾ|| ಎ. ಶಿವಥಾನು ಪಿಳ್ಳೈ ಅವರು ನಿಮಗೆಲ್ಲ ಸ್ಫೂರ್ತಿಯ ಸೆಲೆಯಾಗಲಿ ಎಂದು ಇವರ ಬಗ್ಗೆ ಇಷ್ಟನ್ನು ದಾಖಲಿಸಿದ್ದೇನೆ. ಏನೆಲ್ಲ ಸಮಸ್ಯೆ ಬಡತನ ಕಷ್ಟ ಕಾರ್ಪಣ್ಯಗಳ ದಾಟಿಕೊಂಡು ಈವತ್ತು ಇವರ ಸಾಧನೆ ಎಲ್ಲರಿಗೆ ಮಾರ್ಗದರ್ಶನವಾಗಿದೆ.

ಈವತ್ತು ನೀವೆಲ್ಲ ಮನಸ್ಸು ಮಾಡಿ, ನಾವೂ ಏನಾದರೊಂದು ಸಾಧಿಸಿ ತೋರಿಸುತ್ತೇವೆಂದು ಶಪಥ ಮಾಡುತ್ತೀರಲ್ಲವೇ?
*****

Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...