ಪ್ರೀತಿ ಕಿಟ್ಟಿ,
ಡಸೆಲ್ ಬಂದಿದ್ದಾರೆ. ಎಲ್ಲವೂ ಸುರಳಿತವಾಗಿದೆ. ಮೇಪ್ ಅವರಿಗೆ ಹನ್ನೊಂದು ಗಂಟೆ ಹೊತ್ತಿಗೆ ಪೋಸ್ಟ ಆಫೀಸಿನ ಎದುರು ನಿಂತಿರುವಂತೆಯೂ ಅಲ್ಲಿಗೆ ವ್ಯಕ್ತಿಯೊಬ್ಬ ಭೇಟಿಯಾಗುವನೆಂದು ಹೇಳಿದ್ದಳು. ಡಸೆಲ್ ಅದೇ ನಿಗದಿತ ಸ್ಥಳದಲ್ಲಿ ಸರಿಯಾದ ಸಮಯಕ್ಕೆ ಹಾಜರಿದ್ದರು. ಡಸೆಲ್‌ಗೆ ಈ ಮೊದಲೇ ಪರಿಚಯವಿದ್ದ ಕೂಫಸ್‌ರು ಡಸೆಲ್ ಹತ್ತಿರ ಹೋಗಿ, ಹೇಳಿದ ವ್ಯಕ್ತಿ ಬರುವುದಿಲ್ಲವೆಂದು, ಆದರೆ ಡಸೆಲ್ ಮೇಪ್‌ಳ ಆಫೀಸಿನ ಕಡೆ ಹೋಗಬಹುದೆಂದು ಹೇಳಿದರು. ಕೂಫಸ್ ಟ್ರಾಮ್ ಗಾಡಿಯಲ್ಲಿ ಆಫೀಸಿಗೆ ಹೋದರು. ಡಸೆಲ್ ಅದೇ ಮಾರ್ಗದಲ್ಲಿ ಹಿಂಬಾಲಿಸಿದರು. ಸುಮಾರು ಹನ್ನೊಂದು ಇಪ್ಪತ್ತಕ್ಕೆ ಡಸೆಲ್ ಆಫೀಸಿನ ಬಾಗಿಲು ಬಡಿದರು. ಮೇಪ್ ಅವರ ಕೋಟನ್ನು ತೆಗೆಯಲು ಸಹಕರಿಸಿದರು. ಕಾರಣ ಅದರ ಮೇಲಿದ್ದ ಹಳದಿ ನಕ್ಷತ್ರದ ಚಿಹ್ನೆ ಇತರರಿಗೆ ಕಾಣುವ ಹಾಗಿರಲಿಲ್ಲ. ಆಮೇಲೆ ಆಕೆ ಅವರನ್ನು ಖಾಸಗಿ ಆಫೀಸಿನ ಕೋಣೆಗೆ ಕರೆದೊಯ್ದಳು. ಅಲ್ಲಿ ಕೂಫಸ್ ಇದ್ದಿಲು ಮಾಡುವ ಹೆಂಗಸು ಹೊರಹೋಗುವವರೆಗೂ ಡಸೆಲ್‌ರೊಂದಿಗೆ ಸಂಭಾಷಣೆಯಲ್ಲಿ ಕಾಲಕಳೆಯಬೇಕಾಯ್ತು.
ಆಮೇಲೆ ಮೇಪ್ ಡಸೆಲ್‌ರೊಂದಿಗೆ ಮೇಲ್ಮಹಡಿಗೆ ಹೋದಳು. ಪ್ರೈವೇಟ್ ಆಫೀಸಿಗೆ ಹೋಗುವ ನೆಪಮಾಡಿ ಡಸೆಲ್‌ರ ಕರೆದುಕೊಂಡು ತೂಗಾಡುವ ಕಬೋರ್ಡನ್ನು ತೆರೆದಳು, ಅದನ್ನೆಲ್ಲಾ ನೋಡಿ ಮಾತು ಹೊರಳದ ಡಸೆಲ್‌ರ ಕಣ್ಣಮುಂದೆ ಕಬೋರ್ಡನ ಮೂಲಕ ಮನೆಯೊಳಗಡಿಯಿಟ್ಟಳು.
ನಾವೆಲ್ಲ ಮೇಲಿನ ಮಹಡಿಯಲ್ಲಿ ಟೇಬಲ್ಲ ಒಂದರ ಸುತ್ತ , ಕಾಫಿ ಹಾಗೂ ಫ್ರೆಂಚಬ್ರ್ಯಾಂಡಿಯೊಂದಿಗೆ ಹೊಸಬನನ್ನು ಸ್ವಾಗತಿಸಲು ಕುಳಿತಿದ್ದೆವು. ಮೇಪ್ ಅವರಿಗೆ ಮೊದಲು ನಮ್ಮ ಸಿಟ್ಟಿಂಗ್ ರೂಮನ್ನು ತೋರಿಸಿದಳು. ಅವರ ತಕ್ಷಣ ನಮ್ಮ ಪೀಠೋಪಕರಣಗಳನ್ನು ಗುರುತಿಸಿದರು. ಮತ್ತು ನಾವೆಲ್ಲ ಅವರ ತಲೆಯ ಮೇಲಿನ ಕೋಣೆಯಲ್ಲಿರಬಹುದೆಂಬ ಸಣ್ಣ ಯೋಚನೆಯೂ ಅವರಿಗೆ ಇರಲಿಲ್ಲ. ಮೇಪ್ ಅವರಿಗೆ ಇನ್ನೂ ವಿಶೇಷ ಕಾದಿರುವುದೆಂದು ಹೇಳಿದರೂ ಆಕೆ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ನೇರವಾಗಿ ಮೇಲಿನ ಕೋಣೆಗೆ ಕರೆತಂದಳು.
ಡಸೆಲ್ ಬರುತ್ತಲೇ ಕುರ್ಚಿಯಲ್ಲಿ ಕುಸಿದು ಕುಳಿತರು. ಮಾತನಾಡಲಿಲ್ಲ. ಇದೆಲ್ಲವೂ ಮೊಟ್ಟಮೊದಲ ಬಾರಿ ಎಂಬಂತೆ ಒಂದು ಕ್ಷಣ ನಮ್ಮ ಕಡೆ ನೋಡಿದರು. ಸ್ವಲ್ಪ ಹೊತ್ತಾದ ಮೇಲೆ ಉಗ್ಗುತ್ತಾ ಅಂದರು.
ಅವರಿಗೆ ಎಲ್ಲವನ್ನೂ ವಿವರಿಸಿ ಹೇಳಲಾಯಿತು. ನಾವೇ ಸೈನಿಕರು ಮತ್ತು ಕಾರಿನ ಕುರಿತಂತೆ ಕಥೆಯನ್ನು ಹರಡಿದ್ದು ಅದಕ್ಕೆ ಕಾರಣ ಜನರನ್ನು ಅದರಲ್ಲೂ ಜರ್ಮನ್ನ್‌ರನ್ನು ದಾರಿ ತಪ್ಪಿಸಿ ಅವರು ಅಲ್ಲಲ್ಲಿ ನಮ್ಮನ್ನು ಹುಡುಕಾಡುವ ಹಾಗೆ ಮಾಡುವುದು ಎಂದು ಅವರಿಗೆ ಹೇಳಿದೆವು.
ಡಸೆಲ್ ಪುನಃ ನಮ್ಮ ಯುಕ್ತಿಗೆ ಮೂಕರಾದರು. ಮತ್ತು ಯಾವಾಗ ಅವರು ನಮ್ಮ ಅದ್ವಿತೀಯ ಪ್ರಾಯೋಗಿಕ ಸ್ಥಳ ಗುಪ್ತಗೃಹವನ್ನು ಕಾಣುತ್ತಲೇ ಅವರಿಗೆ ಏನೂ ತೋಚಲಿಲ್ಲ. ಇನ್ನಷ್ಟು ಆಶ್ಚರ್ಯಗೊಂಡರು.
ನಾವೆಲ್ಲ ಒಟ್ಟಿಗೆ ಮಧ್ಯಾಹದ ಊಟ ಮಾಡಿದೆವು. ನಂತರ ಆತ ಒಂದು ಸಣ್ಣ ನಿದ್ದೆ ಮಾಡಿದರು. ಪುನಃ ನಮ್ಮೊಂದಿಗೆ ಟೀ ಕುಡಿದು, ತಮ್ಮ ವಸ್ತುಗಳನ್ನು ಒಂದಿಷ್ಟು ಅಚ್ಚುಕಟ್ಟಾಗಿ ಜೋಡಿಸಿದರು. [ಮೇಪ್ ಅವುಗಳ ಈ ಮೊದಲೇ ತಂದಿದ್ದಳು.]ಮತ್ತು ಸ್ವಲ್ಪಮಟ್ಟಿಗೆ ಸ್ವಂತ ಮನೆಯಲ್ಲಿದ್ದಂತೆ ಅವರಿಗೆ ಅನ್ನಿಸತೊಡಗಿರಬೇಕು. ಅದರಲ್ಲೂ ಅವರಿಗೆ ಗುಪ್ತಗೃಹದ ರೂಲ್ಸೂಗಳನ್ನು ನೀಡಿದಾಗ [ ಅದು ವ್ಯಾನ್ಡ್ಯಾನ್‌ರ ಫಲಶ್ರುತಿ]
ಗುಪ್ತಗೃಹದ ಕೈಪಿಡಿ ಮತ್ತು ಪ್ರಣಾಳಿಕೆಗಳು
* ಯಹೂದಿಗಳಿಗೆ ಹಾಗೂ ಅಂತಹ ಇತರ ಜನರಿಗೆ ತಾತ್ಕಾಲಿಕ ವಸತಿ ಸೌಲಭ್ಯದ ವಿಶೇಷ ಸಂಸ್ಥೆ.
* ವರ್ಷದ ಎಲ್ಲ ದಿನವೂ ತೆರೆದಿರುತ್ತದೆ. ಆಮ್ಸರ್‌ಡ್ಯಾಮನ ಹೃದಯಭಾಗದಲ್ಲಿದ್ದು, ಗಿಡಮರಗಳಿಂದ ಕೂಡಿದ ಸುಂದರ ನಿಸರ್ಗ ರಮಣೀಯ ಪರಿಸರ ಹೊಂದಿದೆ. ೧೩ ಮತ್ತು ೧೭ ಸಂಖ್ಯೆಯ ಟ್ರಾಮ್ ಗಾಡಿಗಳಲ್ಲಿ ಬಂದು ತಲುಪಬಹುದು. ಹಾಗೂ ಬೈಸಿಕಲ್ ಮತ್ತು ಕಾರುಗಳಲ್ಲೂ ಬರಬಹುದು. ವಿಶೇಷ ಸಂದರ್ಭಗಳಲ್ಲಿ ನಡೆದು ಕೂಡಾ ಹೋಗಬಹುದು, ಹೆಚ್ಚಾಗಿ ಅಂದರೆ ಜರ್ಮನ್ನ್‌ರು ವಾಹನ ವ್ಯವಸ್ಥೆಯನ್ನು ನಿಷೇದಿಸಿದಾಗ.
* ಊಟ ಮತ್ತು ವಸತಿಗಳು ಫ್ರೀ
* ಕೊಬ್ಬು ಇಲ್ಲದ ಆಹಾರ ವ್ಯವಸ್ಥೆ ಇರುತ್ತದೆ.
* ಬಾತರೂಮುಗಳಲ್ಲಿ, ಮತ್ತು ಕೆಳಗಡೆ ಬೇರೆ ಬೇರೆ ಹೊರ ಮತ್ತು ಒಳ ಗೋಡೆಗಳಲ್ಲಿ ನೀರಿನ ವ್ಯವಸ್ಥೆ
* ಎಲ್ಲ ರೀತಿಯ ಸಾಮಾನು ಸರಂಜಾಮುಗಳಿಗೂ ಸಾಕಾಗುವಷ್ಟು ಸಂಗ್ರಹ ಕೋಣೆಗಳು
* ಲಂಡನ್, ನ್ಯೂಯಾರ್ಕ, ಟೆಲ್ ಆವಿವ್ ಮತ್ತು ಬಹಳಷ್ಟು ಇತರ ಆಕಾಶವಾಣಿ ಕೇಂದ್ರಗಳೊಂದಿಗೆ ನೇರ ಸಂಪರ್ಕವಿರುವ ಸ್ವಂತ ರೇಡಿಯೋ ಕೇಂದ್ರ. ಈ ಉಪಕರಣ ಕೇವಲ ಇಲ್ಲಿಯ ನಿವಾಸಿಗರಿಗೆ ಮಾತ್ರ, ಪ್ರತಿದಿನ ಸಂಜೆ ೬ ಗಂಟೆಯ ನಂತರ ಮಾತ್ರ ಉಪಯೋಗಿಸಬಹುದು.ಯಾವ ಸ್ಟೇಷನ್ ಕೂಡಾ ನಿಷೇಧಿಸಲಾಗಿಲ್ಲ. ವಿಶೇಷ ಸಂದರ್ಭಗಳಲ್ಲಿ ಅಂದರೆ ಶಾಸ್ತ್ರೀಯ ಸಂಗೀತ ಹಾಗೂ ಅಂತಹ ಇತರ ಕಾರ್ಯಕ್ರಮಗಳನ್ನು ಕೇಳಲು ಜರ್ಮನ್ ಸ್ಟೇಷನ್‌ಗಳನ್ನು ಕೇಳಬಹುದು.
* ವಿರಾಮದ ವೇಳೆ: sssss ರಾತ್ರಿ ೧೦ ಗಂಟೆಯಿಂದ ಮುಂಜಾನೆ ೭. ೩೦ ರವರೆಗೆ. ರವಿವಾರ ೧೦.೧೫ರ ನಂತರ. ಇಲ್ಲಿ ವಾಸಿಸುವವರು ದಿನ ಹೊತ್ತಿನಲ್ಲಿ ನಿದ್ರಿಸಬಹುದು. ನಿರ್ದೇಶಕರು ಸೂಚಿಸಿದಂತೆ ನಿಬಂಧನೆಗಳನ್ನು ಹೊರಡಿಸಲಾಗುವುದು. ಸಾರ್ವಜನಿಕ ಸುರಕ್ಷತೆಗಾಗಿ ವಿರಾಮದ ವೇಳೆಯನ್ನು ಕಟ್ಟುನಿಟ್ಟಾಗಿ ವಿಕ್ಷಿಸಲಾಗುವುದು.
* ರಜಾದಿನಗಳು: [ ಮನೆಯಿಂದ ಹೊರಗೆ] ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
* ಭಾಷಾಬಳಕೆ: ಮೆತ್ತಗೆ ಮಾತಾಡಿ, ಇದು ಖಡಕ್ ಆದೇಶ! ಎಲ್ಲ ಸುಸಂಸ್ಕೃತ ನಾಗರಿಕ ಭಾಷೆಗಳಿಗೆ ಪರವಾನಿಗೆ ಇದೆ. ಜರ್ಮನ್ನ್ ಭಾಷೆ ಬಿಟ್ಟು.
* ಪಾಠಗಳು: ಪ್ರತಿವಾರ ಒಂದು ಶಾರ್ಟಹ್ಯಾಂಡ್ ಬರವಣಿಗೆ. ಇಂಗ್ಲಿಷ, ಫ್ರೆಂಚ್, ಗಣಿತ, ಮತ್ತು ಇತಿಹಾಸ ಪಾಠಗಳು ಎಲ್ಲ ದಿನವೂ.
* ಮುದ್ದಿನ ಪ್ರಾಣಿಗಳು: ವಿಶೇಷ ಇಲಾಖೆ [ಆದರೆ ಪರವಾನಿಗೆ ಕಡ್ಡಾಯ] ಒಳ್ಳೆಯ ಟ್ರೀಟ್‌ಮೆಂಟ್ ಲಭ್ಯ. [ ಪ್ರಾಣಿಗಳು ಜಂತುಗಳ ಹೊರತಾಗಿರಬೇಕು]
* ಊಟದ ಸಮಯ: ಪ್ರತಿ ರವಿವಾರ ಮತ್ತು ಬ್ಯಾಂಕ್ ರಜಾದಿನಗಳ ಹೊರತಾಗಿ ಉಳಿದೆಲ್ಲ ದಿನಗಳು ಬೆಳಿಗ್ಗೆ ೯ ಗಂಟೆಗೆ, ಬ್ಯಾಂಕ್ ರಜಾದಿನಗಳಲ್ಲಿ ಮತ್ತು ರವಿವಾರಗಳಲ್ಲಿ ಅಂದಾಜು ೧೧.೩೦ ಗಂಟೆಗೆ
* ಮಧ್ಯಾಹ್ನದ ಊಟ: [ ಗಡದ್ದಾದ ಊಟವಲ್ಲ] ೧. ೧೫ರಿಂದ ೧.೪೫ರವರೆಗೆ
* ರಾತ್ರಿ ಊಟ: ತಣ್ಣಗಿನ ಅಥವಾ ಬಿಸಿಬಿಸಿಯಾದ: ನಿರ್ದಿಷ್ಟ ಸಮಯವಿಲ್ಲ[ನ್ಯೂಸ್ ಬ್ರಾಡಕಾಸ್ಟ ಆಧರಿಸಿ ಬದಲಾಗಬಹುದು]
* ಕರ್ತವ್ಯಗಳು: ಆಫೀಸಿನ ಕೆಲಸಗಳಿಗೆ ಸಹಾಯ ಮಾಡಲು ನಿವಾಸಿಗಳು ಯಾವ ಸಮಯದಲ್ಲೂ ಸಿದ್ಧರಿರಬೇಕು.
* ಸ್ನಾನ: ರವಿವಾರದಂದು ಮುಂಜಾನೆ ೯ ಗಂಟೆಗೆ ಮೊದಲು ಎಲ್ಲ ನಿವಾಸಿಗಳಿಗೂ ವಾಶ್ ಟಬ್‌ಗಳು ಲಭ್ಯವಿರುತ್ತದೆ. ಅವರವರ ಆಯ್ಕೆಯಂತೆ ಡಬ್ಲ್ಯೂ ಸಿ, ಕಿಚನ್, ಪ್ರೈವೇಟ್ ಆಫೀಸ್, ಮತ್ತು ಮೇನ್ ಆಫೀಸುಗಳು ಲಭ್ಯವಿರುತ್ತವೆ.
* ಮಧ್ಯ ಪಾನೀಯಗಳು: ವೈದ್ಯರ ಅನುಮತಿ ಇದ್ದರೆ ಮಾತ್ರ.
ಮುಕ್ತಾಯ
ನಿನ್ನ,
ಆನ್






