Home / ಕವನ / ಕವಿತೆ / ಜೋಗಿನ್ ಜಲಪಾತ

ಜೋಗಿನ್ ಜಲಪಾತ

ಅದೊದೊದೋ ! ರಾಜಾ ! ರೋರೀರ್‌ !
ರಾಕೀಟ್ ! ಆಮೇಲ್ ಲೇಡಿ !
ಜೋಗಿನ್ ಜಲಪಾತ ಅಂತಂತಾರೆ
ಇವುಗೋಳ್ ನಾಕಕ್ ಕೂಡಿ ! ೧

ನಸ್ಟಕ್ಕ್ ಸಿಕ್ಕಿ ನರಳೊನ್ಗೇನೆ
ಮೇಲಿಂದ್ ಮೇಲೆ ಕಸ್ಟ
ಒದ್ಕೊಂಡ್ ಬಂದಿ ಬಡದ್ ಇಕ್ಕೋದ್ನ್
ಮಾಡ್ತೈತ್ ರಾಜ ಸ್ಪಸ್ಟ ! ೨

ದುಡ್ ಉಳ್ಳೋರು ದುಡ್ ಇಲ್ದೊರ್‍ನ
ಗದರಿಸ್ ಓಡ್ಸೋ ಅಂಗೆ
ರೋರಿರ್ ಸದ್ದು ನೆಪ್ ತರ್‍ತೈತೆ
ಕೇಳ್ತ ನಿಂತ್ರೆ ನಂಗೆ ! ೩

ಬಡವನ್ನ್ ಮುಕ್ಕೊ ಸಾವಿರ್ ಸಂಕ್ಟ
ಜಾಗಾ ಸಾಲ್ದೆ ಒಳಗೆ
ಉಕ್ಕ್ ಬರೋವಂಗ್ ಎದ್ದ್ ಬರ್‍ತೈತೆ
ರಾಕೀಟ್ ಉಳ್ಳಿ ಕೆಳಗೆ ! ೪

ಜಾರ್‍ತ ಲೇಡಿ ತೇಲ್ತ ಬಂದ್ರೆ
ಮೈ ಝುಂ ಝುಂ ಅಂತೈತೆ !
ಬಡವನ್ನ್ ತಿನ್ನೋ ಸಿರಿಮಂತಮ್ಮ
ಬಳಕ್ತೆ ಬಂದಂಗ್ ಐತೆ ! ೫

ಬಡವನ್ ಬಾಯ್ಗೆ ಬೀಗಾನ್ ಇಕ್ಕಿ
ಬಣ್ಣ ಮೇಲ್ ಬಳಿದಂಗೆ
ಜಲಪಾತ್ ಮೇಲ್ ಏನ್ ಕಾಮನ್‌ಬಿಲ್ಲು !
ಆಹ ! ಬಿಲ್ಲಿನ್ ರಂಗೆ ! ೬

ಬಡವನ್ ಬದುಕು ಎದ್ ಬಂದಂಗೆ
ಜೋಗ್ ಕಾಣ್ತಿದ್ರೆ ಕಣ್ಗೆ-
ಸುತ್ತಿನ್ ಕಾಡೂ ಕಾಮನ್ ಬಿಲ್ಲೂ
ನೆಗತಿರ್‍ತಾವೆ ತಣ್ಗೆ! ೭

ಮಿಕ್ಕೋರ್ ಕಸ್ಟ ಕಟ್ಕೊಂಡ್ ಏನು ?
ಔರೋರ್ ಸುಕ ಔರ್‍ಗೆ !
ಪಾನ್ಕ ಕುಡಿಯೋರ್ ಕುಡದ್ ಅನಬೋಸ್ಲಿ!
ವೊರೋರ್ ಒರತಾರ್ ಚೌರ್‍ಗೆ ! ೮
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...