ನೀವೆಲ್ಲ ಜುಲೈ ೨೦೧೫ರಲ್ಲಿ ನಟ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯಿಸಿರುವ ‘ಭಜರಂಗಿ ಭಾಯಿಜಾನ್’ ಚಲನಚಿತ್ರವನ್ನು ನೋಡಿ ಐದಾರು ಸಾರು ಕಣ್ಣೀರು ಸುರಿಸಿರಬಹುದು!
ಭವ್ಯ ಭಾರತದಲ್ಲಿ ಕಳೆದು ಹೋಗುವ ಪಾಕ್‌ನ ಹರ್‍ಷಾಲಿ ಮುನ್ನಿ ಮೂಕ ಬಾಲಕಿಯನ್ನು ನಾಯಕ ಪಾಸ್‌ಪೋರ್ಟ್ ಗೊಡವೆ ಇಲ್ಲದೇ ಸಾಹಸದ ಮೂಲಕವಾಗಿ ಪಾಕಿಸ್ತಾನಕ್ಕೆ ಬಿಟ್ಟು ಬರುವ ಸಾಹಸಮಯದ ಕಥೆ ವ್ಯಥೆ ತೆರೆಯ ಮೇಲೆ ನೋಡಿ ಮನಃ ಕರಗಿ ಹಲ್ಲಿ ಲೋಚಗುಟ್ಟಿದಂತೆ ಎಲ್ಲರೂ ಲೊಚಗುಟ್ಟುವವರೇ….
ಆದರೆ ಪಾಕಿಸ್ಥಾನದಲ್ಲಿ ಸಿಲುಕಿರುವ ಮೂಕ ಬಾಲಕಿಗೆ ತನ್ನ ತವರು ಭಾರತಕ್ಕೆ ಬರಲು ಸಾಧ್ಯವಾಗಿಲ್ಲ. ಈಕೆ ಪಾಕ್‌ನ ಸೇವಾ-ಸಂಸ್ಥೆಯೊಂದರಲ್ಲಿದ್ದಾಳೆ! ಇದು ಕರಾಚಿಯ ‘ಈದಿ ಚಾರಿಟಿ’ಯ ಮುಖ್ಯಸ್ಥ ‘ಬಿಲ್ಕೀ ಈದಿ’ ಈಕೆಗೆ ಪ್ರೀತಿಯಿಂದ ‘ಗೀತಾ’ ಎಂದು ಕರೆಯುತ್ತಿರುವರು.
ಕಳೆದ ೧೫ ವರ್ಷಗಳಿಂದ ಪಾಕಿಸ್ತಾನದಲ್ಲೇ ಇರುವ ೨೨ ಹರೆಯದ ಗೀತಾಳಿಗೆ ಮಾತು ಬಾರದ ಕಾರಣ ತನ್ನ ಹೆಸರನ್ನಾಗಲಿ ವಿಳಾಸವನ್ನಾಗಲಿ ಇತರೆ ಯಾವುದೇ ಮಾಹಿತಿ ನೀಡಿರುವುದಿಲ್ಲ!
ಆದರೆ ೨೦೧೨ರಲ್ಲಿ ಈಕೆಯನ್ನು ಭವ್ಯ ಭಾರತಕ್ಕೆ ತಲುಪಿಸುವ ಸಲುವಾಗಿ ಬಿಲ್ಕಿ ಈದಿ ಭವ್ಯಭಾರತಕ್ಕೆ ಬಂದು ಈಕೆಯ ಫೋಟೊ ಸಿಕ್ಕಿದ ಸ್ಥಳ ಇತ್ಯಾದಿ ವಿವರಗಳನ್ನು ಪೊಲೀಸ್ಸಿನವರಿಗೆ ತಲುಪಿಸಿ ಬಂದಿದ್ದರು. ಆದರೂ ಈ ಕೆಲಸ ಇನ್ನೂ ಆಗಿಲ್ಲ.
ಈಗ್ಗೆ ೧೫ ವರ್ಷಗಳ ಹಿಂದೆ ರೈಲಿನಲ್ಲಿ ಲಾಹೋರ್‌ಗೆ ಬಂದಿದ್ದ ಈಕೆಯನ್ನು ಪೊಲೀಸ್ಸಿನವರು ವಶಕ್ಕೆ ಪಡೆದಿದ್ದರು. ಮೂಕಿಯಾಗಿದ್ದರಿಂದ ಬಾಲ ಮಂದಿರಕ್ಕೆ ಸೇರಿಸಿದ್ದರು. ಅಲ್ಲಿ ಈಕೆ ಬಹಳ ಸಾರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಈದಿ ಚಾರಿಟಿಗೆ ಸೇರಿಸಿದ್ದರು. ಅಲ್ಲಿ ಹೊಂದಿಕೊಳ್ಳದ ಕಾರಣ ಬಿಲ್ಕೀ ಈದಿಯವರು ತಮ್ಮ ಮನೆಯಲ್ಲಿ ಈ ಹುಡುಗಿನ ಸಾಕುತ್ತಿರುವರು!
“ಈಕೆ ಹಿಂದಿಲಿ ಏನೇನೋ ಬರೆದು ತೋರಿಸುವಳು ಇಲ್ಲಿನವರಿಗೆ ಅರ್‍ಥವಾಗುತ್ತಿಲ್ಲ. ಕೈಸನ್ನೆ ಬಾಯಿ ಸನ್ನೆಯಲ್ಲಿ ಭಾರತಕ್ಕೆ ಹೋಗಬೇಕೆಂದು ಕಣ್ಣೀರಿಡುತ್ತಾಳೆ! ಇವಳ ವೇಷಭೂಷಣ ಸಂಪ್ರದಾಯವನ್ನು ಗಮನಿಸಿದರೆ ಪಂಜಾಬಿನ ಹಳ್ಳಿ ಹುಡುಗಿಯಿರಬೇಕೆಂದು ಅನಿಸುವುದು ಹಿಂದೂ ದೇವರುಗಳ ಜತೆಯಲ್ಲಿ ಅಲ್ಲಾನನ್ನೂ ಪ್ರಾರ್‍ಥಿಸುವಳು. ಭಾರತಕ್ಕೆ ಮರಳಬೇಕೆಂಬ ಬಲವಾದ ಕೋರಿಕೆ ಎಂದಿಗೆ ಈಡೇರುವುದೋ…” ಎಂದು ಬಿಲ್ಕೀ ಈದಿಯವರು ತಮ್ಮ ಅಳಲನ್ನು ಇತ್ತೀಚೆಗೆ ಸುದ್ದಿ ಮಾಧ್ಯಮದವರ ಮುಂದೆ ತೋಡಿಕೊಂಡಿದ್ದಾರೆ!
ಹಳ್ಳಿ-ತಾಲ್ಲೂಕು-ಜಿಲ್ಲೆ-ರಾಜ್ಯ-ದೇಶ-ವಿದೇಶದ ಗಡಿಭದ್ರತೆಯ ಮುಂದೆ ಸಂಪರ್‍ಕ ಜಾಲತಾಣ ಕೆಲಸ ಮಾಡುವುದು ಎಷ್ಟೊಂದು ಕಷ್ಟವೆಂದು ನಿಜ ಜೀವನದ ಸಿನಿಮಾದಿಂದ ವ್ಯಕ್ತವಾಗುವುದು.
ಬಹುಶಃ ಪುಟ್ಟ ಬಾಲೆಯನ್ನು ಕಳೆದುಕೊಂಡವರು ಇನ್ನು ನಮ್ಮ ಮಗಳು ಸಿಗಲಾರಳು! ಎಂದು ಕೈಚೆಲ್ಲಿ ಮರೆತಿರಬಹುದೆಂದು ಮೇಲುನೋಟಕ್ಕೆ ಕಂಡುಬರುವುದು. ಈ ಘಟನೆ ಸುಖಾಂತ ಕಾಣಬಹುದೆಂದು ಎದುರು ನೋಡುವ…
*****