ಅವರು ಲೆಬ್ಲಾಂಕನನ್ನು ಹಗ್ಗದಿಂದ ಬಿಗಿದು ಕಟ್ಟಿ ಪೂರಯಿಸಿದ ಕೂಡಲೆ ಥೆನಾರ್ಡಿಯರನು ಒಂದು ಕುರ್ಚಿಯನ್ನೆತ್ತಿಕೊಂಡು ಬಂದು ಅವನ ಎದುರಲ್ಲಿ ಕುಳಿತು, ‘ ಮನ್ಸಿಯುರ್, ನೀನು ಕಿಟಕಿಯಿಂದ ಹೊರಕ್ಕೆ ಧುಮ್ಮಿಕ್ಕಿ ಹೋಗಲು ಪ್ರಯತ್ನಿಸಿ ದುದು ತಪ್ಪು, ನಿನ್ನ ಕೈ ಕಾಲು ಮುರಿಯುತ್ತಿತ್ತು, ಅದು ಹೋಗಲಿ, ನಿನಗೆ ಸಮ್ಮತವಾದರೆ ಈಗ ನಾವು ನಿದಾನವಾಗಿ ಮಾತ ನಾಡೋಣ. ಮೊದಲನೆಯದಾಗಿ, ನಾನು ಗಮನಿಸಿರುವ ಒಂದು ಸಂದರ್ಭವನ್ನು ಈಗ ನಿನಗೆ ತಿಳಿಸಬೇಕಾಗಿದೆ. ಕೇಳು : ನೀನು ಈವರೆಗೂ ಸ್ವಲ್ಪವೂ ಕೂಗಿ ಗದ್ದಲ ಮಾಡದೆ ಇರುವುದೇ ಮುಖ್ಯ ವಿಚಾರ; ಅದರಿಂದ ನನಗೆ ತೋರುವ ಊಹೆಯೇನೆನ್ನುವೆಯೋ ? ಯಾರಾದರೂ ಕೂಗಿಕೊಂಡರೆ ಅಲ್ಲಿಗೆ ಬರತಕ್ಕವರು ಯಾರು ? ಪೊಲೀಸಿನವರು. ಅವರ ಹಿಂದೆ ? ನ್ಯಾಯಾಧೀಶನು. ನೀನೇನೋ ಕೂಗಿಕೊಳ್ಳಲಿಲ್ಲ. ನ್ಯಾಯಾಧೀಶನೂ ಪೊಲೀಸಿನವರೂ ಬರಬೇ ಕೆಂಬ ಆತುರವು ನಮಗೆ ಹೇಗೆ ಇಲ್ಲವೋ ಅದರಂತೆ ನಿನಗೂ ಇಲ್ಲ ವೆಂಬುದನ್ನು ನಾನು ಕಂಡುಕೊಂಡೆ. ಹೇಗೆಂದರೆ, ಯಾವುದೊ ವಿಷಯವನ್ನು ನೀನು ಬಹು ಗೋಪ್ಯವಾಗಿ ಇಟ್ಟಿರುವುದರಲ್ಲಿ ತುಂಬ ಆಸಕ್ತನಾಗಿರುವಂತೆ ನನಗೆ ಬಹಳ ಕಾಲದ ಹಿಂದೆಯೇ ಸಂದೇಹ ಹುಟ್ಟಿತ್ತು. ನಾವಾದರೂ ಅದೇ ರೀತಿಯಾಗಿರುವೆವು. ಇದರಿಂದ ನಾವು ನಮ್ಮ ನಮ್ಮಲ್ಲಿ ಈ ಒಂದು ಒಡಂಬಡಿಕೆಯನ್ನು ಮಾಡಿ ಕೊಳ್ಳೋಣ,’ ಎಂದು ಹೇಳಿದನು.
ಹೀಗೆಂದು ಹೇಳಿ, ಥೆನಾರ್ಡಿಯರನು ಎದ್ದು, ಅಗ್ಗಿಷ್ಟಿಗೆಯ ಬಳಿಗೆ ಬಂದು, ಅದರಲ್ಲಿ ಧಗಧಗನೆ ಉರಿಯುತ್ತಿದ್ದ ಕೆಂಡಗಳೂ ಅವು ಗಳ ನಡುವೆ ಕೆಂಪಗೆ ಕಾದು ಪ್ರಜ್ವಲಿಸುತ್ತಿದ್ದ ಉಕ್ಕಿನ ಉಳಿಯೂ ಜೀನ್ ವಾಲ್ಜೀನನ ಕಣ್ಣಿಗೆ ಬೀಳುವಂತೆ, ನಡುವೆಯಿದ್ದ ಫರದೆಯ ನ್ನು ಎಳೆದು, ಮತ್ತೆ ಹಿಂದಕ್ಕೆ ಬಂದು ಮಾತನಾಡಲಾರಂಭಿಸಿದನು. ‘ಈಗ ನಾನು ನಿನ್ನಿಂದ ಅಪೇಕ್ಷಿಸುತ್ತಿರುವುದು ಎರಡು ಲಕ್ಷ ಫ್ರಾಂಕುಗಳು ಮಾತ್ರವೇ, ಆದರೆ ಮೊದಲು ನಿನ್ನ ಮಗ ಳನ್ನು ಇಲ್ಲಿಗೆ ಕರೆಯಿಸುವುದು ಅತ್ಯಾವಶ್ಯಕವಾಗಿದೆ. ನಾನು ಈಗ ನಿನಗೆ ಹೇಳುವುದು ಒಂದೇ ಮಾತು ; ನಾನು ಹೇಳಿದಂತೆ ದಯ ವಿಟ್ಟು ಬರೆ,’ ಎಂದನು.
, ಅದಕ್ಕೆ ಆ ಬಂದಿಯು, ‘ ನಾನು ಬರೆಯುವುದು ಹೇಗೆ ? ನನ್ನನ್ನು ಬಿಗಿದುಬಿಟ್ಟಿರುವರಲ್ಲಾ,’ ಎಂದನು. ‘ ನಿಜ, ಕ್ಷಮಿಸು.’ ಎಂದು, ಥೆನಾರ್ಡಿಯರನು ತನ್ನ ಕಡೆಯವನೊಬ್ಬನನ್ನು ನೋಡಿ, ‘ಈ ಮಾನ್ ಸಿಯುರನ ಬಲದೋಳನ್ನು ಬಿಚ್ಚು’ ಎಂದು ಆಜ್ಞೆ ಮಾಡಿದನು. ಬಿಚ್ಚಿದುದಾದ ಮೇಲೆ, ಅವನು ಲೆಬ್ಲಾಂಕನಿಗೆ ಈ ಮುಂದೆ ಕಾಣುವ ಮೇರೆಗೆ ಹೇಳಿ ಅವನಿಂದ ಪತ್ರವನ್ನು ಬರೆಯಿಸಿದನು :
‘ಪ್ರಿಯ ಪುತ್ರಿ, “ನೀನು ಕೂಡಲೆ ಹೊರಟು ಬರುವುದು. ನಿನ್ನ ಆಗಮನವು ಈಗ ನನಗೆ ಅತ್ಯಾವಶ್ಯಕವಾಗಿದೆ. ಈ ಕಾಗದವನ್ನು ತರುವ ಮನುಷ್ಯನು ನಿನ್ನನ್ನು ನನ್ನ ಬಳಿಗೆ ಕರೆತರುವಂತೆ ನನ್ನಿಂದ ಆಜ್ಞೆ ಯನ್ನು ಪಡೆದು ಬಂದಿದ್ದಾನೆ. ನಾನು ನಿನಗಾಗಿ ಕಾದಿದ್ದೇನೆ. ಅರ್‌ಬೆಯಿನ್ ಫೇಬರ್.’ ಅನಂತರ ಲೆಬ್ಲಾಂಕನು ರೂ ಸೈಂಟ್ ಡಾಮಿನಿಕ್ ಡಿ’ಎನ್ ಫರ್ ಬೀದಿಯಲ್ಲಿ, ೧೭ನೆಯ ಸಂಖ್ಯೆಯ, ಮಾನ್ ಸಿಯರ್ ಅರಾ ಬೆನ್ ಫೇಬರ್ ಎಂಬಾತನ ಮನೆಯಲ್ಲಿರುವ ಮೇಡಮಾಯಿ ಸೆಲ್ ಫೇಬರಳ ಹೆಸರಿಗೆ ವಿಳಾಸವನ್ನು ಬರೆದನು.
ಥೆನಾರ್ಡಿಯರನ್ನು ಅತ್ಯಂತ ಆತುರದಿಂದ ಕಾಗದವನ್ನು ಅವನ ಕೈಯಿಂದ ಎಳೆದುಕೊಂಡು ತನ್ನ ಹೆಂಡತಿಗೆ ಕೊಟ್ಟು “ಇದೊ ಕಾಗದ, ಇದನ್ನು ತೆಗೆದುಕೊ, ಮುಂದೆ ಏನು ಮಾಡಬೇಕೆಂಬುದು ನಿನಗೆ ಗೊತ್ತಿರುವುದಷ್ಟೆ ! ಮನೆಯ ಮೆಟ್ಟಿಲಿನ ಬಳಿಯಲ್ಲಿ ಬಂಡಿಯು ಸಿದ್ದವಾಗಿದೆ. ನೆಟ್ಟನೆ ಹೊರಟು ಹೋಗಿ, ಹಾಗೆಯೇ ತಟ್ಟನೆ ಹೊರಟು ಬಾ,’ ಎಂದು ಹೇಳಿದನು.
ಕೆಲವು ನಿಮಿಷಗಳಾದ ಮೇಲೆ ಬಂಡಿಯು ದೂರವಾಗಿ ಹೋಗುತ್ತಿರುವಾಗ ಕುದುರೆಗಳನ್ನು ಹೊಡೆಯುವ ಕೋರಡದ ಶಬ್ಬವು ಅವರಿಗೆ ಕೇಳಿಸಿತು. ಈಗ ಆ ಮನೆಯಲ್ಲಿ ಎಲ್ಲವೂ ಮಂಕಾಗಿಯ ನಿಶ್ಯಬ್ಬವಾಗಿಯೂ ಇತ್ತು. ಸುಮಾರು ಅರ್ಧ ಗಂಟೆಯ ಕಾಲ ಹೀಗೆಯೇ ಕಳೆಯಿತು, ಬಂಧಿಯಾಗಿದ್ದವನು ಅಲ್ಲಾಡಲಿಲ್ಲ. ಆದರೂ ಆಗಾಗ ಕೆಲವು ನಿಮಿಷಗಳ ಕಾಲ, ಈ ಬಂಧಿತನಾಗಿದ್ದವನ ಕಡೆಯಿಂದ ಏನೋ ಸಣ್ಣ ಶಬ್ದವು ಬರು ತಿದ್ದಂತೆ ಮೇರಿಯಸ್ಸನ ಮನಸ್ಸಿಗೆ ತೋರಿತು.
ಹಠಾತ್ತಾಗಿ, ಥೆನಾರ್ಡಿಯರನ ಹೆಂಡತಿಯು ಹಿಂದಿರುಗಿ, ಸಿಟ್ಟಿದ್ದು ಬೆಂಕಿಬೆಂಕಿಯಾಗಿ, ಕೊಠಡಿಯೊಳಕ್ಕೆ ನುಗ್ಗಿ ಬಂದು, ‘ ಇವನು ನಿನಗೆ ಸುಳ್ಳು ವಿಳಾಸವನ್ನು ತಿಳಿಸಿದ್ದಾನೆ. ೧೭ನೆಯ ನಂಬರಿನ ಮನೆಯಲ್ಲಿ “ಮಾನ್ಸಿಯರ್ ಫೇಬರ್ ” ಎಂಬಾತನು ಇಲ್ಲ. ನಾನು ಅಲ್ಲಿಯ ಬಾಗಿಲು ಕಾಯುವ ಗಂಡಾಳನ್ನೂ ಹೆಣ್ಣಾ ಳನ್ನೂ ಕೇಳಿ ಬಂದೆನು. ಯಾರಿಗೂ ಅವನ ವಿಚಾರವೇ ಗೊತ್ತಿಲ್ಲ,’ ಎಂದು ಆರ್ಭಟಿಸಿದಳು.
ಥೆನಾರ್ಡಿಯರನು ಮೇಜಿನ ಮೇಲೆ ಕುಳಿತು, ಒಂದೆರಡು ಕ್ಷಣಗಳ ಕಾಲ ಒಂದು ಮಾತನ್ನೂ ಆಡದೆ, ತನ್ನ ಬಲಗಾಲನ್ನು ತೂಗಾಡಿಸುತ್ತ, ಮಹಾ ಕಠೋರವಾದ ಆಲೋಚನೆಯ ಕ್ರೂರ ದೃಷ್ಟಿಯಿಂದ ಅಗ್ಗಿಷ್ಟಿಗೆಯನ್ನೇ ದುರದುರನೆ ನೋಡುತ್ತಿದ್ದನು.
ಕಟ್ಟಕಡೆಗೆ ಆ ಬಂದಿಯನ್ನು ನೋಡಿ, ನಿದಾನವಾಗಿ, ವಿಚಿತ್ರ ತರವಾದ ಭಯಂಕರ ಮುಖಭಾವದಿಂದ, ಸುಳ್ಳು ವಿಳಾಸ ! ಅದರಿಂದ ನಿನಗೇನು ಪ್ರಯೋಜನವೆಂದು ಭಾವಿಸಿದೆ ?’ ಎಂದು ಕೇಳಿದನು.
‘ಸ್ವಲ್ಪ ಕಾಲವು ತಳ್ಳಲಿ ಎಂಬದಾಗಿ,’ ಎಂದು ಆ ಬಂದಿಯು ಘಂಟೆ ಬಡಿದಂತೆ ನುಡಿದು, ಆ ಕ್ಷಣವೇ ತನ್ನ ಕಟ್ಟುಗಳನ್ನು ಅಲ್ಲಾಡಿಸಿ ಒದರಲು, ಅವೆಲ್ಲವೂ ಪಟಪಟನೆ ಹರಿದುಹೋದವು. ಒಂದು ಕಾಲು ಹೊರತು ಅವನ ಶರೀರದ ಯಾವ ಭಾಗವೂ ಮಂಚದ ಕಂಬಕ್ಕೆ ಬಂಧಿತವಾಗಿರಲಿಲ್ಲ.
ಅಲ್ಲಿದ್ದ ಏಳು ಮಂದಿಯ ಚೇತರಿಸಿಕೊಂಡೆದ್ದು ಇವನ ಮೇಲೆ ಬೀಳುವುದಕ್ಕೆ ಮೊದಲೇ, ಇವನು ಅಗ್ಗಿಷ್ಟಿಗೆಯ ಕಡೆಗೆ ಬಾಗಿ, ಕೈಯನ್ನು ಬೆಂಕಿಯ ಬಳಿಗೆ ಚಾಚಿ, ಮೇಲಕ್ಕೆ ಎದ್ದನು. ಈಗ ಥೆನಾರ್ಡಿಯರನೂ ಅವನ ಹೆಂಡತಿಯ, ಆ ಪಟಿಂಗರೂ ಧಕ್ಕೆಬಡಿದವರಂತೆ ಹಿಮ್ಮೆಟ್ಟಿದರು ; ಅವನು ಪ್ರಜ್ವಲಿಸುತ್ತಿದ್ದ ಆ ಉಳಿಯನ್ನು ತನ್ನ ತಲೆಯ ಮೇಲಕ್ಕೆ ಎತ್ತಿ ಹಿಡಿದಿದ್ದುದನ್ನೂ , ಅದು ಅಪಾಯ ಸೂಚಕವಾಗಿಯೂ ಭಯಂಕರವಾಗಿಯ ಪ್ರಜ್ವಲಿಸುತ್ತಿದ್ದುದನ್ನೂ ನೋಡಿ ಅವರು ಪ್ರಜ್ಞೆ ತಪ್ಪಿದವರಂತೆ ಸ್ವಬ್ಬರಾದರು.
ಇದಾದ ಮೇಲೆ, ಮುಂದೆ ನಡೆದ ವಿಚಾರಣೆಯ ಸಂದರ್ಭ ಧಲ್ಲಿ, ಕತ್ತರಿಸಿದ್ದ ಒಂದು ದೊಡ್ಡ ಸೌ ನಾಣ್ಯವು ಆ ಕೊಠಡಿ ಯಲ್ಲಿ ಬಿದ್ದಿದ್ದುದು ಸಿಕ್ಕಿತು. ಇದಕ್ಕೆ ಒಂದು ವಿಚಿತ್ರ ರೀತಿ ಯಿಂದ ಕೆಲಸಮಾಡಿತ್ತು. ಪೊಲೀಸಿನವರ ದೃಷ್ಟಿಯು ಇದರ ಮೇಲೆ ಬೀಳಲು ಅವರು ಅದನ್ನು ತೆಗೆದು ಪರೀಕ್ಷಿಸಿದರು. ಈ ದೊಡ್ಡ ನಾಣ್ಯವು ಟೊಳ್ಳಾಗಿತ್ತು. ಇದರಲ್ಲಿ ನೀಲಿ ಬಣ್ಣದ ಉಕ್ಕಿನ ಸಣ್ಣ ಗರಗಸವಿತ್ತು. ಇದರಿಂದಲೇ ಲೆಬ್ಲಾಂಕನು ತನ್ನ ಕಟ್ಟುಗಳನ್ನು ಕತ್ತರಿಸಿದುದು, ಮೇರಿಯಸ್ಸನಿಗೆ ಹಿಂದೆ ಕೇಳಿಸಿದ್ದ ಸಣ್ಣ ಶಬ್ದವೇ ಮೊದಲಾದ ಅಗೋಚರ ವಿಷಯಗಳು ಏತರಿಂದ ಉಂಟಾಗಿದ್ದುವೆಂಬುದು ಇದರಿಂದ ಸ್ಪಷ್ಟವಾದುವು. ತನ್ನ ಗುಟ್ಟು ಬಯಲಾದೀತೆಂಬ ಭಯದಿಂದ ಕೆಳಗೆ ಬಾಗಲಾರದೆ ಅವನು ಎಡಗಾಲಿನ ಕಟ್ಟುಗಳನ್ನು ಕತ್ತರಿಸಿರಲಿಲ್ಲ.
ಮೊದಲು ಆಶ್ಚರ್ಯಚಕಿತರಾಗಿದ್ದ ಪಟಂಗರು ಚೇತರಿಸಿಕೊಂ ಡೆದ್ದರು. ಆಗ ಅವರಲ್ಲಿ ಒಬ್ಬನು, ಥೆನಾರ್ಡಿಯರನನ್ನು ನೋಡಿ, ‘ಧೈರ್ಯವಾಗಿರಿ, ಅವನ ಒಂದು ಕಾಲಿನ ಕಟ್ಟು ಬಿಚ್ಚಿಲ್ಲ, ಅವನು ಓಡಿಹೋಗುವಂತಿಲ್ಲ. ಅದಕ್ಕೆ ನಾನು ಹೊಣೆ, ನಾನೇ ಹೀಗೆ ಅವನ ಮೊಣಕಾಲನ್ನು ಬಿಗಿದು ಕಟ್ಟಿದವನು,’ ಎಂದನು.
ಬಂಧಿತನು ಈಗ ಗಟ್ಟಿಯಾಗಿ ಮಾತನಾಡಲಾರಂಭಿಸಿ, ‘ ನಿಮ್ಮನ್ನು ನೋಡಿ ನನಗೆ ವ್ಯಥೆಯಾಗುವುದು. ಆದರೆ, ನನ್ನ ಪ್ರಾಣವು ಇಷ್ಟು ಹೊತ್ತು ಹೋರಾಡಿ ರಕ್ಷಿಸಿಕೊಳ್ಳುವಷ್ಟು ಬೆಲೆ ಬಾಳತಕ್ಕುದಲ್ಲ. ನೀವು ನನ್ನನ್ನು ಮಾತನಾಡುವಂತೆ ಮಾಡ ಬಲ್ಲಿರೆಂತಲೂ, ನಾನು ಬರೆಯಲಿಷ್ಟಪಡದಿರುವ ವಿಷಯವನ್ನು ನನ್ನಿಂದ ಬರೆಯಿಸಬಲ್ಲಿರೆಂತಲೂ, ನಾನು ಹೇಳಲಿಷ್ಟಪಡದಂತಹ ವಿಚಾರವನ್ನು ನನ್ನಿಂದ ಹೇಳಿಸಬಲ್ಲಿರೆಂತಲೂ ನಿಮ್ಮ ಕಲ್ಪನೆ ಯಲ್ಲವೆ ?’
ಎನ್ನುತ್ತ , ಅಂಗಿಯ ಎಡಗಡೆಯ ತೋಳನ್ನು ಮೇಲಕ್ಕೆ ಎಳೆದು, ‘ ಇದೋ ! ನೋಡಿ,’ ಎಂದು, ತೋಳನ್ನು ಚಾಚಿ, ತಾನು ಬಲಗೈಯಲ್ಲಿ ಮರದ ಹಿಡಿಯಿಂದ ಹಿಡಿದಿದ್ದ, ಪ್ರಜ್ವಲಿಸುತ್ತಿರುವ ಉಳಿಯನ್ನು ಆ ತೋಳಿನ ಮಾಂಸಖಂಡದ ಮೇಲೆ ಇಟ್ಟನು.
ಮಾಂಸವು ಉರಿದು, ಹಿಸ್ಸೆಂದ ಶಬ್ದವು ಅವರಿಗೆ ಕೇಳಿ ಬಂತು ; ಹಿಂಸಾಗೃಹಗಳಲ್ಲಿ ರೂಢಿಯಾಗಿ ಬರುವ ವಿಚಿತ್ರವಾದ ವಾಸನೆಯು ಆ ಗವಿಯಂತಿದ್ದ ಮನೆಯಲ್ಲೆಲ್ಲಾ ತುಂಬಿತು. ಮೇರಿಯಸ್ಸನು ಈ ಭಯಂಕರ ದೃಶ್ಯದಿಂದ ತಟ್ಟಾಡಿ ಪುಜ್ಞೆತಪ್ಪಿ ಬಿದ್ದನು. ಅಲ್ಲಿದ್ದ ತುಂಟರಿಗೂ ಎದೆಯು ನಡುಗಿತು. ಇಷ್ಟಾ ದರೂ ಆ ವಿಚಿತ್ರ ಪುರುಷನಾದ ವೃದ್ಧನ ಮುಖವು ಸ್ವಲ್ಪವಾದರೂ ಕಂದಿಕುಂದಲಿಲ್ಲ. ಕೆಂಪಗೆ ಕಾದ ಕಬ್ಬಿಣವು, ಪುಬಲವಾದ ಗಾಯ ದೊಳಕ್ಕೆ ಹೊಗೆಯಾಡುತ್ತ ಇಳಿಯುತ್ತಿರಲು ಅವನು ತನ್ನ ಉದ್ದ ವಾದ ಮುಖವನ್ನು ಥೆನಾರ್ಡಿಯರನ ಕಡೆಗೆ ತಿರುಗಿಸಿದನು. ಆ ಮುಖದಲ್ಲಿ ಸ್ವಲ್ಪವೂ ವೈರಭಾವವಿರಲಿಲ್ಲ. ನೋವೂ ಕಷ್ಟವೂ ಮಾತ್ರ ಅವನ ವಿಚಿತ್ರವಾದ ದರ್ಪಗಾಂಭೀರ್ಯಗಳಲ್ಲಿ ಅಡ ಗಿದ್ದುವು. ಆಗ ಅವನು, ‘ಪರಮ ನೀಚರಿರಾ, ನಾನು ನಿಮಗೆ ಹೇಗೆ ಹೆದರುವುದಿಲ್ಲವೋ ಅದರಂತೆಯೇ ನೀವೂ ನನಗೆ ಹೆದರಬೇಕಾಗಿಲ್ಲ,’ ಎಂದು ಉಳಿಯನ್ನು ಗಾಯದಿಂದ ತೆಗೆದು, ತೆರೆದಿದ್ದ ಕಿಟಕಿಯಿಂದ ಹೊರಕ್ಕೆ ಎಸೆದನು, ಅತಿ ಭಯಂಕರವಾಗಿ ಪ್ರಜ್ವಲಿ ಸುತ್ತಿದ್ದ ಆ ಕಬ್ಬಿಣವು, ಆ ರಾತ್ರಿಯ ಕತ್ತಲಲ್ಲಿ, ಬಿರನೆ ಹೋಗಿ ದೂರದಲ್ಲಿ ಬಿದ್ದು, ಮಂಜಿನಿಂದ ತಣ್ಣಗಾಗಿ ಮಾಯವಾಯಿತು. ಆ ಬಂದಿಯು ಮತ್ತೆ ಮಾತನಾಡಲಾರಂಭಿಸಿ, ‘ನೀವು ನನ್ನನ್ನೇನು ಮಾಡಬೇಕೆಂದಿರುವಿರೋ ಮಾಡಿ,” ಎಂದನು.
ಈಗ ಅವನು ನಿರಾಯುಧನಾಗಿದ್ದನು.
‘ ಹಿಡಿಯಿರಿ ಅವನನ್ನು ,’ ಎಂದು ಥೆನಾರ್ಡಿಯರನು ಕೂಗಿ ದನು. ಇಬ್ಬರು ತುಂಟರು ಅವನ ಭುಜಗಳಮೇಲೆ ಕೈ ಹಾಕಿದರು.
ಈ ಸಮಯದಲ್ಲಿಯೇ ಮೇರಿಯಸ್ಸನಿಗೆ ತನ್ನ ಕೊಠಡಿಯ ತಳಭಾಗದಲ್ಲಿ, ಸಣ್ಣ ಧ್ವನಿಯಿಂದ ಆಡುತ್ತಿದ್ದ ಸಂಭಾಷಣೆಯೊಂದು ಕೇಳಿಬಂತು. ಅದು ಕೇವಲ ಸವಿಾಸದಿಂದ ಕೇಳಿಸಿತ್ತಿದರೂ ಮಾತನಾಡುತ್ತಿದ್ದವರು ಮಾತ್ರ ಅವನ ಕಣ್ಣಿಗೆ ಕಾಣುತ್ತಿರಲಿಲ್ಲ. ಆ ಸಂಭಾಷಣೆಯು ಈ ರೀತಿಯಾಗಿತ್ತು:
‘ ಇನ್ನು ಮಾಡ ಬೇಕಾದ ಕಾರವೊಂದು ಮಾತು ಉಳಿ ದಿರುವುದು.’ ಅವನನ್ನು ಕೊಲ್ಲುವುದು ತಾನೆ?’ ‘ ಅಹುದು, ಅದೇ? ಈ ರೀತಿಯಾಗಿ ಮಂತ್ರಾಲೋಚನೆ ಮಾಡುತ್ತಿದ್ದವರು ಆ ಗಂಡಹೆಂಡಿರು.
ಥೆನಾರ್ಡಿಯರನ್ನು, ನಿದಾನವಾಗಿ ಹೆಜ್ಜೆ ಹಾಕಿಕೊಂಡು ಮೇಜಿನ ಬಳಿಗೆ ನಡೆದು ಬಂದು, ಅದರೊಳಗಿನಿಂದ ಕತ್ತಿಯನ್ನು ತೆಗೆದುಕೊಂಡನು.
ಮೋರಿಯಸ್ಕನು ತನ್ನ ತುಪಾಕಿಯ ಕುದುರೆಯನ್ನು ಒತ್ತಿ ಮೀಟುವ ಪ್ರಯತ್ನದಲ್ಲಿದ್ದನು. ಆದರೆ ಗಾಬರಿಯಿಂದ ಹುಚ್ಚ ನಂತೆ ಸುತ್ತಲೂ ನೋಡಿ ಬೆಚ್ಚಿಬಿದ್ದನು. ಅವನ ಪಾದದ ಬಳಿಯಲ್ಲಿ ಮೇಜಿನ ಮೇಲೆ, ಶುದ್ಧವಾದ ಬೆಳ್ದಿಂಗಳ ಬೆಳಕ ಪ್ರಕಾಶಿಸುತ್ತಿದ್ದುದರಿಂದ, ಒಂದು ಕಾಗದದ ಹಾಳೆಯು ಅವನ ಕಣ್ಣಿಗೆ ಬಿತ್ತು. ಆ ಹಾಳೆಯ ಮೇಲೆ ಆ ದಿನ ಪ್ರಾತಃಕಾಲ ಥೆನಾರ್ಡಿಯರನ ಹಿರಿಯ ಮಗಳು ದೊಡ್ಡ ಅಕ್ಷರ ಗಳಿಂದ ಬರೆದಿದ್ದ ಈ ಪಙ್ಕ್ತಿಯು ಕಂಡಿತು :
‘ ಪೊಲೀಸಿನವರು ಬಂದಿದ್ದಾರೆ.’
ಆಗ ಮೇರಿಯಸ್ಯನ ಮನಸ್ಸಿಗೆ ತಟ್ಟನೆ ಒಂದು ಆಲೋಚನೆ ಯು ಹೊಳೆಯಿತು. ತನ್ನ ಮನಸ್ಸನ್ನು ಅಪರಿಮಿತವಾಗಿ ಬಾಧಿಸುತ್ತಿರುವ ಈ ಭಯಂಕರ ಸಂಧಿಯ ತೊಡಕನ್ನು ಬಿಡಿಸಿ ಕೊಳ್ಳಲು ಇದನ್ನೇ ತಕ್ಕ ಸಾಧನವನ್ನಾಗಿ ಉಪಯೋಗಿಸಿಕೊಳ್ಳ ಬೇಕೆಂದು ನಿಶ್ಚಯಿಸಿದನು.
ಅನಂತರ ತನ್ನ ಬೀರುವಿನ ಮೇಲೆ ಮೊಣಕಾಲೂರಿ ಕುಳಿತು, ಕೈಚಾಚಿ, ಆ ಕಾಗದದ ಹಾಳೆಯನ್ನು ಎಟಕಿಸಿ ತೆಗೆದುಕೊಂಡು, ಆ ಅಡ್ಡ ಗೋಡೆಯಲ್ಲಿ ಒಂದು ಚೂರು ಗಾರೆಯನ್ನು ಮುರಿದು ಅದರಲ್ಲಿಟ್ಟು ಸುತ್ತಿ, ಆ ಸುರಳೆಯನ್ನು ಆ ಗವಿಯ ಮಧ್ಯಭಾಗಕ್ಕೆ ಎಸೆದನು.
*****
ಮುಂದುವರೆಯುವುದು
ವಿಕ್ಬರ್ ಹ್ಯೂಗೋ ನ “ಲೆ ಮಿಸರಾ ಬಲ್ಸ್”
ಜೆ ಲ ಫಾರ್‍ಜ್ ರವರ ಸಂಕ್ಷೇಪ ಪ್ರತಿಯ ಅನುವಾದ