ಸಾಲಕ್ಕೆ ಕೊನೆಯಿಲ್ಲ ಆಲಕ್ಕೆ ನೆರುಳಲ್ಲಾ
ನಾನ್ ಹುಟ್ಟಿ ಮನಿಗೇ ಹೆಸುರಾದೆ ಕೋಲೇ || ೧ ||
ತಂದಿದ್ದರೆ ತವರಕ ಹೆಚ್ಚು ತಾಯಿದ್ದರೆ ಬಳಗೆ ಹೆಚ್ಚು
ಸಾವಿರಕ್ಕೆ ಹೆಚ್ಚು ಪತಿ ಪುರಷ ಕೋಲೇ || ೨ ||
ಮಾಣಿಕದ ಹರಳು ಮಗ ಹೆಚ್ಚುಲಾದರೆ
ಮಾಣಿಕದ ಹರಳು ಮಗ ಹೆಚ್ಚು ಕೋಲೇ || ೩ ||
ಹೆಣ್ಣು ಹುಟ್ಟಲಿ ಬೇಡಾ ಪರರೀಗೆ ಕೋಡು ಬೇಡಾ
ಹೆಣ್ಣು ಹೋ ಗುವಾಗೇ ಅಳುಬೇಡಾ ಕೋಲೇ || ೪ ||
ಕೊಟ್ಟಾ ಮನೆಗೆ ಹೆಸುರಾದು ಕೋಲೇ
ಪಡೀದಽವಗೆ ಹೆಸುರಾ ತರುಬೇಡಾ
ತವರೀಗೊಂದ ಹೆಸುರಾ ತರುಬೇಡಾ ಕೋಲೇ || ೫ ||
*****
ಹೇಳಿದವರು: ಗಣಪ ಗೌಡ
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.