ಆಡೀ ಮಂಗಲವೇ ನಮನಿಮಗೂ ಕೋಲೇ
ಆಡೀ ಮಂಗಲವೇ ನಮನಿಮಗೋ || ನನ ಗೆಣಿಯಾ || ೧ ||
ಈ ಊರು ಕಿತ್ತೂರು ಬೇಲೂರೂ ಬೆಂಕಿನ ಕೋಡು
ಸೇದೂ ಬಾವಿಯ ನೀರು ಮೊಗುತಾರೋ || ನನ ಗೆಣಿಯಾ || ೨ ||
ಆಡೋರೂ ನಮ್ಮಿಂದ ನೋ ಡೋ ರೂ ನಿಮ್ಮಿಂದ
ಆಡೀ ಬಿಟ್ಟುಂಗಿಲಾ ನಮನಿಮಗೂ || ನನ ಗೆಣಿಯಾ || ೩ ||
ಕರಿಯಾ ಕಂಬಳಿ ಕೋಡು ನಾಗೀನ ಪಟ್ಟಿಯ ಕೋಡೂ
ಜರಿಯಾ ಪಾವು ಕೋಡು ಬಿಳಿಯಾ ಹಚ್ಚಡ ಕೋಡೂ || ನನ ಗೆಣಿಯಾ || ೪ ||
ಕರಿಕಂಬ ಕಟ್ಟಿ ವಳಗೇ ಬರಬೇಕೂ ಕೋಲೇ
ಬೆಳುದಿಂಗಳ ಬೆಳಕಿನೊಳಗೆ ಬರುಬೇಕೋ|| ನನ ಗೆಣಿಯಾ || ೫ ||
ಉಂಗುಲುಂಗುಲ ನೋಡು ಉಂಗಾಲ ಬಪ್ಪ ನೋಡೂ
ಉಂಬಾಲ್ ಬಂದವಳ ಬಿಡಬ್ಯಾಡೋ ಕೋಲೇ || ನನ ಗೆಣಿಯಾ || ೬ ||
ಕಡಗ ಕಡಗವ ನೋಡು ಕಡನಾಡಾಂಬರ ನೋಡೂ
ಕರದೀ ಬಂದವಳ ಕಯ್ಯಾ ಬಿಡಬ್ಯಾಡೋ || ನನ ಗೆಣಿಯಾ || ೭ ||
ಸೀರೇ ಸೀರೆಯ ನೋಡು ಸೀರೆಯಾಂಬರ ನೋಡೂ
ಸೇರೀ ಬಂದವಳ ಕಯ್ಯಾ ಬಿಡಬ್ಯಾಡೋ || ನನ ಗೆಣಿಯಾ || ೮ ||
ವಲ್ಲೀ ವಲ್ಲಿಯಾ ನೋಡು ವಲ್ಲೀಯ ಬರ ನೋಡೂ
ವಲಿದೀ ಬಂದವಳ ಕಯ್ಯಾ ಬಿಡಬ್ಯಾಡೋ || ನನ ಗೆಣಿಯಾ || ೯ ||
ವಲದ ತೇರ ನೋಡು ವಲಿದ ಸತಿಯ ನೋಡೂ
ವಲದೀ ಬಂದ ಸತಿಯಾ ಬಿಡಬ್ಯಾಡೋ || ನನ ಗೆಣೆಯಾ || ೧೦ ||
*****
ಹೇಳಿದವರು: ಗಣಪ ಸುಬ್ಬಗೌಡ, ಕರೆವಕ್ಲ, ೨೬ ವರ್ಷ, ಜಡ್ಡಿಗೆದ್ದೆ ತಾ: ಶಿರಸಿ (ಉ.ಕ.)
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.