ಬೆಟ್ಟದ ಮೇಲೆ ಬೆನ್ನವಿಟ್ಟು ಬೇಲಿಮೇಲಿನ ಸೋರೆಬುರುಡೆ
ಯಾವ ಮರ ಮಾಡಾನಪ್ಪಾ ಲೋಲಕಿನ್ನುರಿಯಾ || ೧ ||
ಚೆಲುವಯ್ಯ ಚೆಲುವೋ ತಾನ ತಾನಿ ತನ್ನನ್ನಾ
ನಿನ್ನ ಮಾಯಾರಿ ಪೇಳಲೋ ಕೋಲನ್ನ ಕೋಲೇ || ೨ ||
ಆಚಿಗೆ ಆಲದ ಮರ ಈಚೀಗೆ ಗೋಳೀಮರ
ಸುತ್ತಾಕಿ ಬಾರೋ ಬಳಿಗಾರಾ || ೩ ||
ಮಲ್ಲಿಗೆ ಹೂವಿನಲ್ ಹೆಣಿದಿದ್ದ ಮಂಚ
ಅದು ನಮ ಗುರುಗಳು ವರಗುವ ಮಂಚ || ೪ ||
ದೇವ ಸೃಂಗಾರ ಮಾಡಿದಾ ಬಸವಣ್ಣ
ಗುಡಿಯಾ ಸೃಂಗಾರ ಮಾಡಿದಾ || ೫ ||
ಕ್ಯಾದೀಗೆ ಹೂವಿನಲ್ ಹೆಣದೀದ ಮಂಚ
ಅದು ನಮ ಸರಸ್ವತಿ ವರಗೂವ ಮಂಚ || ೬ ||
ದೇವ ಸೃಂಗಾರ ಮಾಡಿದಾ ಬಸವಣ್ಣ
ಗುಡಿಯಾ ಸೃಂಗಾರ ಮಾಡಿದಾ || ೭ ||
*****
ಹೇಳಿದವರು: ಲಕ್ಷ್ಮಣ ರಾಮ ನಾಯ್ಕ, ಮಾಬ್ಲೇಶ್ವರ ಕರಿಯಾ ನಾಯ್ಕ, ಮೆಣಸಿ
೦೨/೧೧/೭೦
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.