ವಿಶ್ವನಾಥನ ಮನೆಯಲ್ಲಿ ಈದಿನ ದೇವರ ಸಮಾರಾಧನೆ. ನಾಳೆ ಧಾರಾಮುಹೂರ್ತ. . ರಮಾಬಾಯಿಯ ಕಡೆ ಬಂಧು ಬಳಗವೆ ಲ್ಲವೂ ಬಂದು ಸೇರಿದೆ. ವಿಶ್ವನಾಥನ ಕಡೆಯವರೂ ಕೆಲವು ಮಂದಿ ಬಂದಿದ್ದಾರೆ. ಬಹಳ ಗದ್ದಲವಾಗಿದೆ.
ಮಧ್ಯಾಹ್ನ ಭೋಜನವಾಯಿತು. ರಾತ್ರಿ ವರನನ್ನು ಏದುರು ಗೊಳ್ಳುವುದು, ವರಪೂಜಿ, ಮುಂತಾದ ಶಾಸ್ತ್ರಗಳು ನಡೆಯಬೇಕು ಎಲ್ಲರೂ ಅವರವರಿಗೆ ತಕ್ಕ ಷ್ಟು ಶೃಂಗಾರಗಳನ್ನು ಮಾಡಿಕೊಂಡರು. ಊರಹೊರಗಿನ ಸತ್ರದಲ್ಲಿ ವರನನ್ನಿಳಿಸಿದ್ದರು. ಅಲ್ಲಿಗೆ ಹೋಗಲು ಎಲ್ಲರೂ ಸಿದ್ಧರಾದರು. ರಾತ್ರಿ ೮ ಗಂಟಿಸಮಯ, ಶುಭವಾದ್ಯಗಳೊ ನೆ ಮೆರವಣಿಗೆಯು ಹೊರಟಿತು. ಅಷ್ಟು ಹೊತ್ತಿಗೆ ಸರಿಯಾಗಿ ಇಬ್ಬರು ಕರೀ ನಿಲುವಂಗಿಗಳನ್ನು ಹಾಕಿಕೊಂಡು ಕೇಂಪು ಪಗಡಿ ಯನ್ನು ಸುತ್ತಿಕೊಂಡು, ಕೈಯಲ್ಲಿ ದೊಡ್ಡ ದೊಣ್ಣೆ ಗಳನ್ನು ಹಿಡಿದು ಕೊಂಡು ಬಂದು ವಿಶ್ನನಾಥನ ಮನೆಯೆದುರಿಗೆ ನಿಂತರು. ಪೋಲೀಸಿ ನವರನ್ನು ನೋಡಿದ ಕೂಡಲೆ ಎಲ್ಲರಿಗೂ ದಿಗ್ಬ್ರಮೆಯುಂಟಾಯಿತು. ಪೋಲೀಸಿನವರು . ಆ ಊರಿನವರಾಗಿರಲಿಲ್ಲ , ಅವರ ಭಾರವಾದ “ಬೂ ಟ್ಸು,“ ಕರೀನಿಲುವಂಗಿ, ಪಗಡಿಗಳನ್ನು. ನೋಡಿದರೆ ಪಟ್ಟಣದ ಪೋಲೀಸು ಶಿಬ್ಬಂದಿಗೆ ಸೇರಿದವರಾಗಿರಬೇಕು. . ಇವರ ಆಗಮನಕ್ಕೆ ಕಾರಣವೇನಿರಬಹುದು? ಗುಜುಗುಜನೆ ಅಲ್ಲಿನವರೆಲ್ಲರೂ ಮಾತನಾಡ ತೊಡಗಿದರು. ಯಾರಿಗೂ ಪೋಲೀಸಿನವರನ್ನು ಕೇಳಲು ಧೈರ್ಯವಿಲ್ಲ, ಕೆಲವರು ಯಾವದೊ ಕೊಲೆಪಾತಳದ ಮೊಕದ್ದಮೆಯ ವಿಷಯವಿರ ಬಹುದು ಎಂದುಕೊಂಡರು. ಕೆಲವರು ಕಳುವು. ದರೋಡೆ, ಸಮಾ ಚಾರವಿರಬಹುದು ಎಂದರು. “ಅಹುದು _ ಅಹುದು, ಮೊನ್ನೆ ಪಂ ಡರವುರದ ಜಾತ್ರೆಗೆ ಹೋಗುವ ಕೆಲವರನ್ನು ಯಾರೊ ದರೋಡೆ ಮಾಡಿ ಕೊಳ್ಳೆ ಹೊಡೆದರಂತೆ“ ಎಂದು ಮತ್ತೆ ಕೆಲವರು ಹೇಳಿದರು. “ಯಾವದಿದ್ದರೂ ಗೊತಾಗುತ್ತದೆ, ಯಾತಕ್ಕೆ ಯೋಚನೆ“ ಎಂದು ಇನ್ನು ಕೆಲವರು ಅಂದು ಕೊಂಡರು.
ಪೋಲೀಸಿನವರು ಒಂದುಕ್ಷಣ ಅಲ್ಲಿ ನಿಂತಿದ್ದವರು ಎಲ್ಲಿಯೊ ಹೊರಟುಹೋದರು. ಎದುರುಗೊಳ್ಳಲು ಹೊರಬಿದ್ದ ವರಿಗೆಲ್ಲಾ ಧೈರ್ಯ ಬಂದಿತು. ಮೆರವಣಿಗೆಯು ಮುಂದಕ್ಕೆ ನಡೆಯಿತು. ಸತ್ರದಬಳಿ ಬರುವ ಹೊತ್ತಿಗೆ ಸರಿಯಾಗಿ ಆ ಇಬ್ಬರು ಪೋಲೀಸಿನವರೂ ಮಧ್ಯೆ ಒಬ್ಬ ನನ್ನು ಹಿಡಿದುಕೊಂಡು ಬರುವುದು ಗೋಚರವಾಯಿತು. ಆ ಮೂರನೆ ವ್ಯಕ್ತಿಯು ಸ್ಕಯಂ ಮದವಣಿಗನಾಗಿದ್ದನು. ಅವನ ಸೌಂದರ್ಯ ವನ್ನು ಬಣ್ಣಿಸಲು ಯಾರಿಗೆ, ತಾನೆ ಶಕ್ಯ ! ಆ ಕೃಷ್ಣವರ್ಣದ ಮೂ ರ್ತಿಯು ಒಳ್ಳೆ ಬೆಲೆಯುಳ್ಳ ಪಾಗು ಉತ್ತರೀಯ ಗಳಿಂದಲೂ, ಕಿವಿ ಯಲ್ಲಿ ವಜ್ರದ ಕಡಕ್ಕು ಬೆರಳುಗಳಲ್ಲಿ ನಾನಾ ಜಾತಿಯ ಅಮೂಲ್ಯ ಗಳಾದ ಉಂಗುರಗಳು, ಇವುಗಳಿಂದಲೂ ಶೋಭಿಸುತ್ತಿದ್ದನು, ಬಂದಿ ದ್ದ ವರೆಲ್ಲರೂ ಬೆರಗಾಗಿ ಅಲ್ಲಲ್ಲಿಯೇ ನಿಂತುಬಿಟ್ಟರು. ಮದವಣಿಗನ ಮುಖವು ಕುಂದಿ ಬೆಳ್ಳಗಾಗಿ ಹೋಗಿತ್ತು. ಇದಕ್ಕೆಲ್ಲಾ ಕಾರಣವನ್ನು ವಿಚಾರಿಸಬೇಕೆಂದು ಎಲ್ಲರೂ ಗುಜುಗುಜುಗುಟ್ಟಿ ಕೊಂಡರು. ಅವರ ಲ್ಲೊಬ್ಬನು ಧೈರ್ಯಮಾಡಿ ಕಾನ್‌ಸ್ಟೇಬಿಲನನ್ನು ಕುರಿತು “ದಫೇ ದಾರರೆ, ಇದೇನು ಸಮಾಚಾರ, ನಮಗೂ ತಿಳಿಯಬಹುದೆ ` ` ಎಂದು ಕೇಳಿದನು.
೧ನೇ ಕಾನ್‌ಸ್ಟೇಬಿಲ್ __ “ಎಲ್ಲರಿಗೂ ತಿಳಿಯದೆ ಎಲ್ಲಿಹೋಗುವುದು ? . ಈ ಮಹಾನುಭಾವರ ನಿಜವಾದ ಹೆಸ ರೇನು ಕೇಳಿರಿ– ನಿಮಗೇ ಗೊತ್ತಾಗುವುದು” “ಅವರಿಗೆ ನಿಜವಾದ ಹೆಸರೂಂದು, ಸುಳ್ಳಾದ ಹೆಸರೊಂದೆ? ಅದು ನಮಗೆ ತಿಳಿಯದು.”
೧ನೇ ಕಾನ್–“ಅಡಿಗೆ ಪರಿಚಾರಕ ಆತ್ಮಾರಾಮರು ಶ್ರೀಧರರಾಯರಾಗಿ ಬಂದಿದ್ದಾರೆ“` (ಮದುವಣಿಗನು ಬೆಚ್ಚಿದನು. ಮೈಯೆಲ್ಲಾ ನಡುಗಲಾರಂಭಿಸಿತು. )
ಕಾನ್ —ಏನು ರಾಯರೆ ? ನಾನು ಹೇಳಿದುದು ನಿಜವೆ ? ( ಜನರಕಡಿಗೆ ತಿರಿಗಿ) ಇವರು ಈಗ ೧೫- ೨೦ ವರು ಷದಕೆಳಗೆ, ಜಹಗೀರ್ದಾರ್ ಶಂಕರರಾಯರಮನೆಯಲ್ಲಿ ಭಾರಿ ಕಳುವು ಮಾಡಿಕೊಂಡು ತಪ್ಕಿಸಿಕೊಂಡುಓಡಿ ಹೋಗಿದ್ದರು. ಈಗ ಸಿಕ್ಕಿ ಕೊಂಡರು. ಧರ್ಮಸ್ಥಾನ ದ ವಾಹಾತ್ಮ್ಯವು ಎಂದಿಗೆ ಕಡಿಮೆಯಾದೀತು? ಶಂಕರರಾಯರು ಮಾತ್ರ ಆಗಲೆ ಮಾನಸಿಕಮಾಡ ದಿದ್ದರೆ ಇಷ್ಟು ದಿನಕ್ಕೆ ಇವರಿಗೆ ಜೈಲಿನಲ್ಲಿ ಬಹಳ ” ಸರ್ವಿಸ್“ ಅಗುತ್ತಿತ್ತು,
೨ನೇ ಕಾನ್– “ಅಹಹ! ಒಳ್ಳೆ ಸಮುಯದಲ್ಲಿ ಸಿಕ್ಕಿ ಬಿದ್ದನು. ನಾವಿ ನ್ನೊಂದು ದಿನತಡವಾಡಿದ್ದರೆ ಒಬ್ಬ ಮುದ್ದುಮಗಳ ತಲೆಯಮೇಲೆ ಚಪ್ಪಡಿಯೆಳದು ಬಿಡುತ್ತಿದ್ದನು.” ಎಂದು ಹೇಳುತ್ತಾ ಮದವಣಿಗನನ್ನು ಕುರಿತು “ರಾವ್ ಜಿ__ದಯವಿಟ್ಟು ತಮ್ಮ ಚಿನ್ನ ದ ಬಳೆಯನ್ನು ತೆಗೆಯಿರಿ__ಬೇರೆ ಬಳೆಯು ಸಿದ್ದ ವಾಗಿದೆ” ಎಂದನು.
ವಿಶ್ವನಾಥನಿಗೂ ರಮಾಬಾಯಿಗೂ ಉಂಟಾದನಾಚಿಗೆಯು ಹೇಳಲಸಾಧ್ಯವಾಗಿತ್ತು. ಅವರು ಯಾರೊಡನೆಯೂ ಮಾತನಾಡದೆ ಮನೆಗೆ ಹೊರಟುಹೋದರು. ಅವರಿಗೆ ತಮ್ಮ ನೆಂಟರೆಲ್ಲರನ್ನೂ ಕರೆ ಸಿದಮೇಲೆ ನಾಚಿಗೆಗೇಡಾದುದಕ್ಕೆ ಬಹಳ ವ್ಯಥೆಯುಂಟಾಗಿದ್ದರರೂ ಪರಮ ನೀಚನಿಗೆ ತಮ್ಮ ಮಗಳನ್ನು ಸಂಕಟಪಡು ವುದನ್ನು ಭಗವಂತನು ತಪ್ಪಿಸಿದುದಕ್ಕಾಗಿ ಬಹಳಮಟ್ಬಿ ಗೆ ಸಮಾಧಾನ ವುಂಟಾಗಿತ್ತು. ಸುಭದ್ರೆ ಗಾದರೊ ಮನಸ್ಸಿನಲ್ಲುಂಟಾದ ಸಂತೋ ಷಕ್ಕೆ ಪಾರವೇ ಇರಲಿಲ್ಲ .
ಇತ್ತಲಾಗಿ ಪೋಲೀಸಿನವರು ಅಲ್ಲಿ ನೆರೆದಿದ್ದ ಜನರಲ್ಲಿ ಕೆಲವರನ್ನು ನಿಲ್ಲಿಸಿಕೊಂಡು ಒಡವೆ ಮುಂತಾದುವುಗಳ ವಿಷಯದಲ್ಲಿ ಪಂಚಾಯಿತರಂದ ‘ಮಹಜರು’ ಮಾಡಿಸಿಕೊಂಡು ಆತ್ಮಾ ರಾಮ ನನ್ನು ಕರದುಕೊಂಡು ಹೊರಟುಹೋದರು. ಬಂದಿದ್ದ ಬಂಧು ಬಳಗ ವೆಲ್ಲವೂ ಮಾರಣೆದಿನ ಯಥಾ ಯಥಾ ಹೊರಟುಹೋಯಿತು. ಮದುವೆಯ ಸಂಭ್ರಮವೆಲ್ಲವೂ ಈ ರೀತಿಯಲ್ಲಿ ಪರಿಣಮಿಸಿತು.
ಇದಕ್ಕೆ ಕಾರಣವೇನು? ಸಕಾಲದಲ್ಲಿ ಸಹಾಯ ಒದಗಿದುದು ಹೇಗೆ? ಗಂಗಾಬಾಯಿಯು ಮೊದಲು ಶ್ರೀಧರರಾಯನನ್ನು ನೋಡಿ ದೊಡನೆಯೆ ಅವನನ್ನು ಹಿಂದೆ ಎಲ್ಲಿಯೊ ನೋಡಿದ್ದಂತೆ ಸ್ಫೂರ್ತಿಗೆ ಬಂದಿತ್ತು. ಇಂತಹ ಸ್ಥಳವೆಂಬುದುಮಾತ್ರ ನೆನಪಿಗೆಬರಲಿಲ್ಲ;ಹಾಗೆಯೆ ಯೋಚಿಸುತ್ತ ಯೋಚಿಸುತ್ತ ತನ್ನ ಅಕ್ಕನ ಮನೆಯಲ್ಲಿ ೧೫-೨೦ ವರುಷಗಳಹಿಂದೆ ಆತ್ಮಾರಾಮನೆಂಬೊಬ್ಬ ಪರಿಚಾರಕನು ನಾಲ್ಕೈದು ಸಾವಿರ ರೂಪಾಯಿನ ರೊಕ್ಕವನ್ನೂ ನಗಗಳನ್ನೂ ಕಳವುಮಾಡಿ ಕೊಂಡು,ಶಂಕರರಾಯನ ಸೇವಕರಲ್ಲೊ ಕೊಲೆಮಾಡಿ ಓಡಿ ಹೋಗಿದ್ದುದು ಜ್ಞಾಪಕಕ್ಕೆ ಬಂದಿತು. “ಆತ್ಮಾರಾಮನೇ ಇವನಾ ಗಿರಬಹುದೆ? ಇವನ ನಡಿಗೆ, ಮುಖದ ಹೋಲಿಕೆಯನ್ನು ನೋಡಿದರೆ ಅವನಿಗೂ ಇವನಿಗೂ ಏನೂ ಭೇದ ತೋರುವುದಿಲ್ಲ. ಆದರೆ ಇವನ ಆಡಂಬರವನ್ನು ನೋಡಿದರೆ ಧನವಂತನಾಗಿ ಕಾಣುತ್ತಾನೆ. ಅಲ್ಲದೆ ಆತ್ಮಾ ರಾಮನು ಧೈರ್ಯವಾಗಿ ಪುನಹೆ ಹತ್ತಿರ ಹೇಗೆಬಂದಾನು ? ಅಥವಾ ಬಹಳಕಾಲವುಕಳದುಹೋಗಿರುವುದರಿಂದ ಯಾರಿಗೂ ತನ್ನ ಗುರುತು ಸಿಕ್ಕರಲಾರದೆಂಬ ಧೈರ್ಯದಮೇಲೆ ಬಂದಿರಬಹುದು. ಆದರೆ ಇವನು ವಿಶ್ವನಾಥನಮನೆಯನ್ನು ಯಾತಕ್ಕೋಸ್ಕರ ವಿಚಾರಿಸುತಾನೊ ತಿಳಿಯದು, ಇವನ ಅಟ್ಟಹಾಸವನ್ನು ನೋಡಿದರೆ ಭಯವಾಗುತ್ತದೆ. ಕನ್ಯಾರ್ಥಿಯಾಗಿ ಬಂದಿರಬಹುದೆ ? ಎಂದು ಮುಂತಾಗಿ ಯೋಜಿಸಿ ಕೊಂಡಳು. ಮಾರಣೆಯ ದಿನ ಸುಭದ್ರೆಯು ತನ್ನ ವೃತ್ತಾಂತವನ್ನು ಹೇಳಲಾಗಿ ,ಗಂಗಾಬಾಯಿಯು ಹೀಗೆಂದು ಯೋಚಿಸಿದಳು. “ಇವ ನನ್ನು ಸಂಶಯದನಮೇಲೆ ಹಿಡಿಸಿಬಿಡುವುದು ಒಳ್ಳೆಯದು. ಆತ್ಮಾರಾಮನೆ ಇವನಾದರೆ ಸರಿಯೆಸರಿ, ಇಲ್ಲದಿದ್ದರೆ ನ್ಯಾಯಸ್ಥಾನ ದಲ್ಲಿ ರುಜುವಾತಿಲ್ಲವೆಂದು ಬಿಟ್ಟುಬಿಡಲಿ ಬಾಧಕವಿಲ್ಲ. ಸದ್ಯ ! ಮ ದುವೆಯೊಂದು ತಪ್ಪಿದರೆ ಸಾಕು.
ಮಾಧವನು ರಾಮಪುರದಲ್ಲಿ ಒಂದೆರಡು ದಿನವಿದ್ದು ಪುನಹೆಗೆ ಹಿಂದಿರುಗಿಹೋದನು. ಗಂಗಾಬಾಯಿಯೂ ಆವನೊಡನೆ ಹೋದಳು. ಕೂಡಲೆ ಆತ್ಮಾ ರಾಮನವೃತ್ತಾಂತವನ್ನೆಲ್ಲಾ ಶಂಕರರಾಯನಿಗೆ ತಿಳಿಸಿ ಮದುವೆಗೆ ಗೊತಾಗಿದ್ದ ಮುಂದಿನ. ದಿನವೇ ರಾಮಪುರಕ್ಕೆ ಹೋಗಿ ಆತ್ಮಾರಾಮನನ್ನು ಹಿಡಿತರುವಂತೆ ಏರ್ಪಾಟುಮಾಡಿ ಪೋಲೀಸಿ ನವರನ್ನು ಕಳುಹಿಸಿಕೊಟ್ಟರು. ಅನಂತರ ನಡೆದುದು ತಿಳಿದೇ ಇದೆ. ಪೋಲೀಸಿನವರು ಅತ್ಮಾ ರಾಮ ನನ್ನು ಮ್ಯಾಜಿಸ್ಸೆ ಟರ ಮುಂದೆ ಹಾಜರ್ಮಾಡಿದರು. ಅಲ್ಲಿ ವಿಚಾರಣೆ ನಡೆದು ಮ್ಯಾಜಿಸ್ಟ್ರೇಟರು ಸಷನ್ -ಕೋರ್ಟಿಗೆ ಮೊಕದ್ದಮೆಯನ್ನು ‘ ಕಮಿಟ್ ‘ ಮಾಡಿದರು. ಆತ್ಮಾರಾಮನು ಪುನಹೆ ಜೈಲಿನಲ್ಲಿ ದಾಖಲಾಗಿ ಅಲ್ಲಿನ ಸುಖ ಗಳನ್ನೆಲ್ಲಾ ಅನುಭವಿಸುತ್ತಾ, ಸೆಷನ್ ಕೋರ್ಟಿನಲ್ಲಿ ತನ್ನ ಗತಿಯೇ ನಾಗುವುದೋ ಎಂದು ಹಂಬಲಿಸುತಿದ್ದನು.
*****
ಮುಂದುವರೆಯುವುದು