ಇತ್ತ ಮಾಧವನಿಗಾದರೊ ಮನಸ್ಸೆ ವಿರೂಪವನ್ನು ಹೊಂದಿದುದ ರಿಂದ ಅವನು ಚಿಕ್ಕ ತಾಯಿ ಕೇಳುತ್ತಿದ್ದ ಪ್ರಶ್ನೆ ಗಳಿಗೆಲ್ಲಾ ಏನೋ ಒಂದು ವಿಧವಾದ ಉತ್ತರಗಳನ್ನು. ಕೊಡಲಾರಂಭಿಸಿದನು. ಇದನ್ನು ಅವಳು ತಿಳಿದು –“ಮಗು ! ನಿನ್ನೆ ರಾತ್ರೆ ನಿನಗೆ ನಿದ್ದೆ ಸಾಲಲಿಲ್ಲವೆಂದು ತೋರುತ್ತದೆ, ಸ್ವಲ್ಪ ಹೊತ್ತು ಮಲಗು , ನಾನು ಅಡಿಗೆಮಾಡಿ ಎಬ್ಬಿಸುತ್ತೇನೆ“ ಎಂದಳು,
ಮಾಧವ—ಅಮ್ಮಾ ! ಅದೆಲ್ಲಾ ಇರಲಿ, ಒಂದು. ಮಾತು ಕೇಳಲು ನಾಜಿಳೆಯಾಗುತ್ತದೆ,ಕೇಳಲೊ ಬೇಡವೊ?
ಗಂಗಾ–ನೀನು ಕೇಳುವುದಕ್ಕೆ ಮುಂಚೆ ನಾನೇ ಹೇಳು ತ್ತೇನೆ ಕೇಳು , ಆ ಹುಡುಗಿಯು–
ಮಾಧವ__ಛೆ!ಛೆ! ಅದಲ್ಲವಮ್ಮ , ನಾನು ಬೇರೆ
ಗಂಗಾ — ಓಹೊ ! ಮಗು ! ಹೇಗಾದರೂ ಆಗಲಿ ಗುರು ವಿಗೇ ತಿರುಮಂತ್ರ ಹೇಳುತ್ತೀಯಲ್ಲ! ನಮ್ಮ ದೇವರ ಸತ್ಯ ನಾನರಿಯೆನೆ ?
ಮಾಧವನಿಗೆ ನಾಚಿಕೆಯಿಂದ ಮುಖವು ಕೆಂಪೇರಿತು. “ನಿನ್ನ ಇಷ್ಟ ನಾನೇನು ಹೇಳಲಿ” ಎಂದನು.
ಗಂಗಾ—ಆಹುಡುಗಿಯ ಹೆಸರು ಸುಭದ್ರೆ, ಬಹಳ ದೊಡ್ಡ ಮನೆತನಕ್ಕೆ ಸೇರಿದವಳು. ಅವಳ ತಂದೆಯು ಪೂರ್ವಿ ಕರ ಆಸ್ತಿಯನ್ನೆಲ್ಲಾ ಕಳೆದು. ಅನ್ನ ವಸ್ತ್ರಕ್ಕೂ ಗತಿ ಯಿಲ್ಲರಂತೆ ಅಗಿದ್ದಾನೆ, ಆದುದರಿಂದ ಅವೆಳು ಹೀಗಿ ದ್ದಾಳೆ, ಆದರೆ ವಿದ್ಯದಲ್ಲಿಯೂ, ಗುಣದಲ್ಲಿಯೂ ಈ ಹುಡುಗಿಗೆ ಸಮಾನರಾದವರನ್ನೇ ಕಾಣೆ.
ಮಾಧವ __ ನಾನು ಬಂದಾಗ್ಗೆ ಆಕೆ ಅಳುತ್ತಿದ್ದುದು ಏತಕ್ಕೆ? ಗಂಗಾ_ಅಪ್ಕಾ! ಏನು ಹೇಳಲ್ಲಿ ಆ ಹುಡುಗಿಯ ತಂದೆ ತಾಯಿಗಳು ಹಣದ ಆಸೆಗೆ ಆಕೆಯನ್ನು ಒಬ್ಬ ಮುದು ಕನಿಗೆ ಕೊಟ್ಟು ಮದುವೆಮಾಡಬೇಕೆಂದಿದ್ದಾರೆ.
ಮಾಧವ-~-ಅಯ್ಯೊ ಪಾಪ! ಏನು ಅನ್ಯಾಯ ! ಲೋಕದಲ್ಲಿ ಇಂತಹ ಕಟಿಗರೂ ಉಂಟೆ ?
ಗಂಗೆಯು . ಒಳಗೆ ಹೋದಳು. ಮಾಧವನು ಉಯ್ಯಾಲೆ ಮಣೆಯನ್ಲೆ ಏನನ್ನೊ ಯೋಚಿಸುತ್ತಾ ಕುಳಿತಿದ್ದನು. ಮಾಧವರಾಯನಿಗೆ ಈಗ ೨೦ ವರುಷ ವಯಸ್ಸು. . ಅವನ ತಂದೆಯ ಹೆಸರು ಶಂಕರರಾಯ. ಆತನು ಪುನಹೆಯಲ್ಲಿ ಭಾರಿ ಜಮೀನ್‌ದಾರನಾಗಿ ಹೆಸರುವಾಸಿಯಾಗಿದ್ದನು. ಮಾಧವನು ಹುಡುಗ ನಾಗಿದ್ದಾಗಲೆ ಅವನ ತಾಯಿ ಸತ್ತುಹೋಗಿದ್ಗಳು. ಅವನಿಗೆ ಗಂಗಾ ಬಾಯಿ ಹೊರತು. ತಾಯಿಯ ಕಡೆಯ ಬಂಧು ಗಳೇ ಇರಲಿಲ್ಲ. ಅವ ಳನ್ನು ನೋಡಿಕೊಂಡು ಬರುವುದಕ್ಕೋಸ್ಕರ ತಂದೆಯ ಅಪ್ಪಣೆ ಪಡೆದು ರಾಮ ಪುರಕ್ಕೆ ಬಂದಿದ್ದನು .
ಮಾಧವನು ಶ್ರೀಮಂತನ ಮಗನಾಗಿದ್ದರೂ ಸ್ವಲ್ಪವಾದರೂ ದಂಭವಾಗಲಿ, ಅಹಂಕಾರವಾಗಲಿ ಅವನಲ್ಲಿರಲಿಲ್ಲ. ಎಲ್ಲರಲ್ಲಿಯೂ ಕೇವಲ ವಿನಯದೊಡನೆ ಮಾತನಾಡುವನು. ಮನೆಯ ಆಳುಗಳೊಡ ನೆಯೂ ಅವನ್ನು ಕಠಿಣವಾಗಿ ಮಾತನಾಡಿದವನೇಅಲ್ಲ. ಯಾರಾ ದರೂ ತಮ್ಮ ಇಷ್ಟಗಳನ್ನು ಹೇಳಿಕೊಂಡರೆ ಅವುಗಳನ್ನು ಕೇಳಿದಮಾ ತ್ರಕ್ಕೇ ಅವನ ಕಣ್ಣಿನಲ್ಲಿ ನೀರು ಬಂದು ಬಿಡುವುದು. ಸರ್ವಪ್ರಯತ್ನ ದಿಂದಲೂ ಇತರರ ಕಷ್ಟವನ್ನು ನಿವಾರಣೆಮಾಡುವನು. ತಂದೆಯನ್ನು ಪರಮ ಗುರುವೆಂದು ಭಾವಿಸಿದ್ದನು. ಶ೧ಕರರಾಯನಿಗೆ ಇವನಲ್ಲಿದ್ದ ವಾತ್ಸಲ್ಯ ವು ಅಷ್ಟಿಷ್ಟೆಂದು ಹೇಳಬೇಕಾದುದೆ ಇಲ್ಲ. ಆತನು ಯಾವ ಕೆಲಸ ಮಾಡಬೇಕಾದರೂ ಮಗನ ಅಲೋಚನೆಯನ್ನು ಕೇಳದೆ ಮಾಡುತ್ತಿ ರಲಿಲ್ಲ.
ಇಂತಹ ಮಾಧವನಿಗೆ ಸುಭದ್ರೆಯ ವೃತ್ತಾಂತವನ್ನು ಕೇಳಿದ ಕೂಡಲೆ ಮನಸ್ಸಿನಲ್ಲಿ ಬಹು ಸಂಕಟವುಂಟಾಗಿ ಹೇಗಾದರೂ ಆಕೆಯ ಕಷ್ಟವನ್ನು ನಿವಾರಣೆಮಾಡಬೇಕೆಂಬ ಕುತೂಹಲವು ಹುಟ್ಟಿತು. ನಾನಾ ಮಾರ್ಗಗಳನ್ನು ಯೋಚಿಸುತ್ತಾ ಉಯ್ಯಾಲೆಯ ಸರಪಳಿಗಳ ನ್ನೊರಗಿಕೊಂಡು ಕುಳಿತಿದ್ದ ಹಾಗೆಯೆ ತೂಕಡಿಕೆ ಬರಲು ಮಲಗಿ ಕೊಂಡನು. ನಿದ್ರೆ ಬಂದಿತು. ಕನಸಿನಲ್ಲಿಯೂ ಸುಭದ್ರೆಯ ಮನೋಹರ ವಾದ ರೂಪವೆ ಇವನೆದುರಿಗೆ ನಿಂತು ನಲಿದಾಡುತ್ತಿತ್ತು. ಹೀಗಿರು ವಾಗ್ಗೆ ಉಯ್ಯಾಲೆ ಸರಪಣಿಯು ಕರಕಿರ ಎಂದು ಶಬ್ದ ಮಾಡಲು ಥಟ್ಟನೆ ಎಚ್ಚರವಾಯಿತು, ಮನಸ್ಸಿನ ಆನಂದವಲ್ಲಾ ಭಗ್ನವಾಯಿತು. ಅಷ್ಟು ಹೊತ್ತಿಗೆ ಚಿಕ್ಕಮ್ಮನು ಬಂದು ಊಟಕ್ಕೆ ಎಬ್ಗಿಸಿದಳು, ಮಧ್ಯಾ ಹ್ನವಾಗಿತ್ತು. ಊಟವಾದನಂತರ ಚಿಕ್ಕಮ್ಮ ನೊಡನೆ ಊರಿನ ಯೋಗ ಕ್ಷೇಮಗಳನ್ನು ಮಾತನಾಡುತ್ತ ಆ ದಿನವನ್ನು ಕಳೆದನು.
*****
ಮುಂದುವರೆಯುವುದು