ಪೆಟ್ರೋಲ್- ಡಿಸೇಲ್ ಇತ್ಯಾದಿ ಬಳಕೆಯ ಬದಲು ಪರ್‍ಯಾಯ ಇಂಧನದ ಬಳಕೆಯ ಬಗ್ಗೆ ಸುದೀರ್‍ಘ ಚಿಂತನೆ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಲೇ ಇದೆ.
ಹಣ ಉಳಿಸುವ ಆಲೋಚನೆ ಒಂದೆಡೆಯಾದರೆ, ಪೆಟ್ರೋಲ್ ಡಿಸೇಲ್ ಕೊರತೆಯನ್ನು ನೀಗಿಸುವ ಯೋಚನೆಯು ನಿರಂತರವಾಗಿ ಸಾಗುತ್ತಲೇ ಇದೆ.
ಆದರೆ… ಇಷ್ಟು ವರ್ಷಗಳಾದರೂ ಹರ್ಷದ ಸುದ್ದಿ ಮಾತ್ರ ಇಲ್ಲವೇ ಇಲ್ಲ ಎನಬೇಡಿ!
ಬ್ರೆಜಿಲ್‌ನ ಸಾವೋಪೌಲೊದ ರಿಕಾರ್‍ಡೋ ಜಿವಡೋ ನೀರಿನಿಂದ ಬೈಕ್ ಓಡಿಸುತ್ತಿದ್ದಾನೆ! ಬರೋಬ್ಬರಿ ಒಂದು ಲೀಟರ್ ನೀರಿಗೆ ಈತನಲ್ಲಿರುವ ಬೈಕ್ ೩೦೦ ಮೈಲಿ ಓಡುವುದು. ಇವರು ಇಂಧನದ ಬದಲು ನೀರನ್ನು ತುಂಬಿಸಿ ಬೈಕ್ ಓಡಿಸುವ ವೀಡಿಯೋವನ್ನು ಕೂಡಾ ಈಗಾಗಲೇ ಬಿಡುಗಡೆಗೊಳಿಸಿರುವರು.
ಇವರ ಬಳಿ ಇರುವ ಬೈಕಿನ ಹೆಸರು- ಟಿ ಪವರ್ ಎಚ್‌ಓ ಎಂದು. ಇದೊಂದು ಸುಂದರ ವಾಟರ್ ಬೈಕ್, ಅಂದರೆ ನೀರ ಮೇಲೆ ಚಲಿಸುವುದಲ್ಲ. ರಸ್ತೆ ಮೇಲೆ ಸಲಿಸಾಗಿ ಓಡುವುದು.
ಸಾವೋಪೌಲೊದ ರಿಕಾರ್‍ಡೊ ಅವರ ಸಂಶೋಧನೆಯ ಪ್ರಕಾರ ಬೈಕ್‌ನಲ್ಲಿ ಕಾರ್ ಬ್ಯಾಟರಿಯೊಂದನ್ನು ಅಳವಡಿಸಿರುವರು. ಇದರಿಂದಾಗಿ ಇದು ವಿದ್ಯುತ್ ಉತ್ಪಾದಿಸಿ ನೀರಿನ ಕಣಗಳಿಂದ ಜಲಜನಕ ಪ್ರತ್ಯೇಕಿಸುತ್ತದೆ. ಹೀಗಾಗಿ ದಹನ ಕ್ರಿಯೆಯುಂಟಾಗಿ, ಅದರಿಂದ ಬಿಡುಗಡೆಯಾಗುವ ಶಕ್ತಿಯಿಂದ ಬೈಕ್ ಓಡುವುದು!
ಅಬ್ಬಾ! ಇಂಧನ ಉಳಿತಾಯ ಹಾಗೂ ವಾಯುಮಾಲಿನ್ಯ ಇತ್ಯಾದಿ ತಪ್ಪಿಸಿ ಪರ್‍ಯಾಯ ಇಂಧನದ ವ್ಯವಸ್ಥೆಯಾಗುವ ಎಲ್ಲ ಮೂಲಗಳನ್ನು ಈಗಾಗಲೇ ಸಂಶೋಧಿಸಲಾಗಿದೆ.
ಆದ್ದರಿಂದ ಇವೆಲ್ಲ ಪರ್‍ಯಾಯ ಇಂಧನಗಳಾಗಿ ಎಲ್ಲ ಕಡೆ ಬಳಕೆಯಾದರೆ ಬಹಳಷ್ಟು ಸಮಸ್ಯೆಗಳು ಇಲ್ಲವಾಗಿ ಹೊಸಹೊಸ ಆವಿಷ್ಕಾರಗಳಿಗೆ ಎಡೆ ಮಾಡಿಕೊಡುತ್ತವೆಂದು ಭಾವಿಸಲಾಗಿದೆ.
ಅಂತೂ ಇಂತೂ ನಾವು ನೀವು ಕಾಯೋಣವಲ್ಲವೇ??
*****