ನಾನು ಸುಂದರ ಗಗನ ದೇವತೆ
ಮುಗಿಲ ತುಂಬಾ ಹಾರಿದೆ
ಜ್ಞಾನ ಯೋಗದ ರಕ್ಕೆ ಬೀಸುತ
ಸೂಕ್ಷ್ಮ ಲೋಕವ ಸೇರಿದೆ
ಹಕ್ಕಿಯಾಗಿ ರೆಕ್ಕೆ ಬೀಸಿದೆ
ಮೇಲು ಮಂದಿರ ತಲುಪಿದೆ
ಶಿಖರ ಮಂದಿರ ಮುಕುರ ಮಂದಿರ
ಸಕಲ ಸುಂದರವಾಗಿದೆ
ಜಡದ ದೇಹದ ಜಡದ ಕೊಡಗಳ
ಜಂಗು ಜಾಡನು ದಾಟಿದೆ
ಕಠಿಣ ಕರ್‍ಮದ ಗಂಟು ಮೂಟೆಯ
ಬಿಟ್ಟು ಮೇಲಕೆ ಹಾರಿದೆ
ಮಾತು ಹಗುರಾ ಮನವು ಹಗುರಾ
ಅಮೃತೋತ್ಸವದನುಭವಾ
ಮನವು ತಂಪು ಮೌನ ಕಂಪು
ಕ್ಷಣದೊಳದ್ಭುತ ಸಾಗರಾ
*****