ಯೋಧ

ಬನ್ನಿ ಬನ್ನಿ ಯೋಧರೇ |
ದೇಶ ಸೇವೆ ಮಾಡುವ ||
ದೇಶಕಾಗಿ ದುಡಿಯುವ |
ದೇಶಕಾಗಿ ಮಡಿಯುವ ||ಬ||

ಜನ್ಮ ಭೂಮಿ ನಮ್ಮ ಭೂಮಿ |
ಧರ್‍ಮದಾತೆ ನಮ್ಮ ಮಾತೆ ||
ಧರ್‍ಮದಿಂದ ನಡೆದು ನಾವು |
ದಕ್ಷತೆಯನ್ನು ತೋರುವ ||ಬ||

ಸಿಡಿಲು ಗುಡುಗು ಏನೇ ಬರಲಿ |
ಕೋಮು ಗಲಭೆಗಳೇನೆ ಆಗಲಿ ||
ಸಂಚುಕಾರರ ಮರ್ಮವೆ ಇರಲಿ |
ದಿಟ್ಟತನದಿ ಎದುರಿಸುವ ||ಬ||

ಇಟ್ಟ ಹೆಜ್ಜೆ ಹಿಂದೆ ಇಡದೆ |
ತೊಟ್ಟ ದೀಕ್ಷೆಯ ತೊರೆಯದೆ ||
ದೇಹ ಪ್ರಾಣ ಇರುವವರೆಗು |
ತಾಯ ಸೇವೆ ಮಾಡುವ ||ಬ||

ಒಂದೇ ತಾಯಿ ಒಂದೇ ನಾಡು |
ಏನೇ ಬರಲಿ ಒಗ್ಗಟಿರಲಿ ಎಂಬ ಮಂತ್ರ ||
ಜೀವ ಕೋಟಿ ತಿಳಿದು ಸಾಗಲಿ |
ಇದು ಸಾಧ್ಯವಾದಾಗಲೆ ಸಂತಸ ಸಂತಸ ||ಬ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇಹ ಆತ್ಮಗಳ ಗೂಢತೆ
Next post ಅರಳಿದ ಸಂಜೆ

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…