೧
ಅಜ್ಜ ಕಣ್ಣು ಮುಚ್ಚಿ ಬಿಟ್ಟ!
ಕೈಯ ಹಿಡಿದು ಕೇಳಿಬಿಟ್ಟ!
೨
“ಇವಳಬಿಟ್ಟು ಇವಳುಯಾರು?
ಇವನಬಿಟ್ಟು ಇವನುಯಾರು?”
೩
ಇವಳುಗಂಗೆ, ಇವಳುಗೌರಿ!
ಬ್ರಹ್ಮ, ವಿಷ್ಣು, ರುದ್ರರಿವರು!
೪
“ಹೋಗೆ ಗಂಗಿ, ಹೋಗೆ ಗೌರಿ!
ಹೋಗೊ ಬ್ರಹ್ಮ, ವಿಷ್ಣು, ರುದ್ರ!”
೫
“ಬಿಟ್ಟಿ, ಬಿಟ್ಟೆ, ಬೆಳಗು ಆಯ್ತು!
ತಟ್ಟಿ ಮನೆಯು ಹಾಳು ಆಯ್ತು!”
೬
“ಹಾಳುಗೋಡೆ ದೆವ್ವ ಬಂತು!”
ಅಯ್ಯೊ ಅವರ ಹುಡುಕಲೆಂತು?
೭
ಗಂಗೆಯಿಲ್ಲ, ಗೌರಿಯಿಲ್ಲ!
ಬ್ರಹ್ಮ, ವಿಷ್ಣು, ರುದ್ರರಿಲ್ಲ!
೮
ವನದೊಳಿಲ್ಲ, ಮನೆಯೊಳಿಲ್ಲ!
ಸ್ವರ್ಗ ನರಕದೊಳಗು ಇಲ್ಲ!
೯
ಹೆಣ್ಣಿನಾಟವಾಡಬಂದೆ!
ಮನೆಯ ಕೆಲಸ ಮರೆತು ನಿಂದೆ!
೧೦
ದೇವರನ್ನು ಹುಡುಕ ಹೋದೆ!
ಗಂಡು ಹುಡುಗ `ಹೆಣ್ಣು’ ಆದೆ!
*****