ಒಂದು ಒಂದು ಎರಡು
ಸೇಬಿನ ತೋಟಕೆ ಹೊರಡು
ಒಂದು ಎರಡು ಮೂರು
ಹಾಕಲು ಹೆಜ್ಜೆ ನೂರು
ಒಂದು ಮೂರು ನಾಲ್ಕು
ಬೀರಲು ಹತ್ತು ಕಲ್ಲು
ಒಂದು ನಾಲ್ಕು ಐದು
ಮಾಲಿ ಓಡಿ ಬಂದು
ಒಂದು ಐದು ಆರು
ಬೇಲಿಯನು ಹಾರು
ಒಂದು ಆರು ಏಳು
ಮನೆ ಸೇರೋ ಗೀಳು
ಒಂದು ಏಳು ಎಂಟು
ಕಾಲಾಯಿತು ಕುಂಟು
ಒಂದು ಎಂಟು ಒಂಭತ್ತು
ಮನೆಯವರಿಗೆ ತಿಳಿದಿತ್ತು
ಒಂದು ಒಂಭತ್ತು ಹತ್ತು
ಕಳ್ಳತನಕೆ ಒದೆ ಬಿತ್ತು
*****