ಆರತಿಯನೆತ್ತೀರೆ ಗಿಣಿನತ್ತು ಗರತೇರೆ

ಆರತಿಯನೆತ್ತೀರೆ ಗಿಣಿನತ್ತು ಗರತೇರೆ
ಸಿದ್ಧಗುರು ಸಿದ್ಧನಿಗೆ ಶುಭವೆನ್ನಿರೆ
ಕಣ್ಣು ಕರಪುರ ದೀಪ ಮನವು ತುಪ್ಪದ ದೀಪ
ಗಾನಗಂಗಾಧರಗೆ ಜಯವೆನ್ನಿರೆ

ಹಸನಾಗಿ ಬನ್ನೀರೆ ಹೊಸಹೂವು ತನ್ನೀರೆ
ಆರು ಚಕ್ರದ ಕಮಲ ಶುಭವೆನ್ನಿರೆ
ನೀತಿ ನಿಜಗುಣ ಗೆಜ್ಜೆ ಹೆಜ್ಜೀಯ ಹಾಕೀರೆ
ಅಂತರಂಗದ ಭಜನಿ ಜಯವೆನ್ನಿರೆ

ಚಿತ್ತ ಮುತ್ತಿನ ಕಳಸಾ ಮನವು ಮಲ್ಲಿಗಿ ಸರಸಾ
ಚಿತ್ತಜನ ಸುಟ್ಹಾಕಿ ಶಿವನೆನ್ನೀರೆ
ಜನುಮ ಜನುಮದ ಗಂಡಾ ಕೋಟಿ ಆತ್ಮರ ಗಂಡಾ
ಪಾರಮಾರ್ಥದ ಗಂಡಾ ಜಯವೆನ್ನಿರೆ

ಹರಕು ಕಂಬಳಿ ಸುಟ್ಟು ಮುರುಕು ಗೊಂಗಡಿ ಬಿಟ್ಟು
ಆರು ಸರ್ಪನ ಮೆಟ್ಟಿ ಗೆಲುವೆನ್ನೀರೆ
ಚರ್ಮ ಜೋಳಿಗಿ ಸಾಕು ಹರನ ಹೋಳಿಗಿ ಬೇಕು
ನಗುಮುಖದ ರಾಣೇರೆ ಗುರುವೆನ್ನೀರೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಪದೇಶ
Next post ದೇಹಿ ಎನ್ನುವಂತೆ ಆ ಮರವ ಬದಲಿಸಿದೊಡೇನು ಲಾಭವೋ?

ಸಣ್ಣ ಕತೆ

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…