ಗೆಳತಿ ಓ ಗೆಳತಿ

ಗೆಳತಿ ಓ ಗೆಳತಿ
ಕಣ್ಣಲ್ಲಿ ಬೆಳಕಾದೆ
ಎದೆಯಲ್ಲಿ ಹಸಿರಾಗಿ
ಪ್ರತಿಮಾತಿಗುಸಿರಾದೆ |ಪ|

ಇನ್ನು ಏಕೆ ದೂರ ದೂರ
ವಿರಹ ಸಾಧ್ಯವೇ
ವಿರಹ ಸುಡಲು ಮತ್ತೆ
ಬದುಕು ಸಾಧ್ಯವೇ? |ಅ.ಪ|

ಕವಿತೆ ನೀನು ಚರಿತೆ ನೀನು
ಏನಲ್ಲ ನನಗೆ ನೀನು
ನಿನ್ನ ಪ್ರೀತಿ ನನ್ನ ರೀತಿ
ಇಷ್ಟಲ್ಲದೆ ಬೇರೆ ಏನು
ನಿನ್ನ ಬಿಟ್ಟು ಏನು ಗುಟ್ಟು
ನನ್ನೊಳಗೆ ನೀನೆಂದೂ ನೆಲೆಯಾಗಲು

ಹೃದಯ ನೀನು ಮಿಡಿತ ನಾನು
ಬದುಕು ಹಾಲು ಜೇನು
ಇನ್ನು ಎಲ್ಲಿ ಜಾತಿಗೀತಿ
ಯಾರ ಹಂಗು ಏನು
ಪ್ರೀತಿಯೊಂದೆ ತತ್ವ-ಸತ್ವ
ಎಗ್ಗಿರದ ತಗ್ಗಿರದ ಜಗ ಕಾಣಲು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಲುಪುವುದಿಲ್ಲ
Next post ವಂಶಪಾರಂಪರ್ಯ

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…