ಬುದ್ಧ ಪಾದದ ಮೇಲೆ
ಕಣ್ಣೀರ ಹನಿಯುದುರಿದ್ದಕ್ಕೇ
ಅದು ಮಳೆಯಾಗಿಹೋಯ್ತು.
ಮಿಂದ ತೇವಕ್ಕೇ
ಪಾದವೆಲ್ಲಾ ಮಿಡುಕಿ
ಹಸಿ ಮಣ್ಣಾಗಿಹೋಯ್ತು.
ಆ ಹಸಿಮಣ್ಣ ಬುಡಕ್ಕೆ
ಕಣ್ಣುಗಳೂರಿದ್ದೇ ತಡ
ಮೊಳಕೆಯೊಡೆದುಬಿಡುವುದೇ!?
ಬುದ್ಧ ಪಾದದ ಮೇಲೆ
ಗಿಡವರಳಿ
ಟೊಂಗೆ ಟೊಂಗೆಯ ತುಂಬಾ
ಈಗ ಸಹಸ್ರ
ಹೂವಿನ ಕಣ್ಣುಗಳ ತೊನೆದಾಟ
ಅಸಂಖ್ಯ ಬುದ್ಧರ ಉಸಿರಾಟ
*****