Home / ಕವನ / ತತ್ವಪದ / ಭಗವದ್ಭಕ್ತಿ

ಭಗವದ್ಭಕ್ತಿ

ಭಗವದ್ಭಕ್ತಿಯ ಪಡೆಯಲುಬೇಕು
ಬಾಳನು ಸಫಲ ಮಾಡಲುಬೇಕು
ಇಹ ಸುಖ ವಿಷಯ ರಾಗ ಬಿಡಬೇಕು
ಆಧ್ಯಾತ್ಮ ಆನಂದ ಹೊಂದಲೆಬೇಕು

ಕಾಯಕ ಮಾಡುವಾಗ ಚಿತ್ತ ದೇವರಲ್ಲಿರಲಿ
ಹಲ್ಲು ನೋವಿನಂತೆ ನಿನ್ನ ಧ್ಯಾನವಿರಲಿ
ಕಷ್ಟವಿರಲಿ ಸುಖವಿರಲಿ ಸಮಭಾವ ಇರಲಿ
ಇಷ್ಟ ದೇವರಿಗೆ ಸದಾ ಸ್ಮರಣೆ ಇರಲಿ

ಹೋಮಾ ಪಕ್ಷಿ ಗಗನದಲ್ಲಿರುವಾಗಲೆ
ಸಂತತಿ ಮೊಟ್ಟೆ ತಾನು ಇಡುವಾಗಲೆ
ಭೂಮಿಗೆ ಜಾರುತ್ತಿರುವಂತೆ ಮರಿಯಾಗ್ವುದು
ಆ ಮರಿಯೇ ಆಕಾಶದತ್ತ ಹೋಗುವುದು

ಹೋಮಾ ಪಕ್ಷಿಯಂದದಿ ಮನುಜನಿರಬೇಕು
ಹುಟ್ಟುತ್ತಲೆ ಪರಮಾತ್ಮಗೆ ಧ್ಯಾನಿಸಬೇಕು
ಮನಸ್ಸು ಮೂಲೆಯಲ್ಲೂ ಭವ ರಂದ್ರವಿರಬಾರದು
ನೀನು ಗಳಿಸಿದ ಪುಣ್ಯ ಅಲ್ಲಿ ಸೋರಿಹೋಗ್ವುದು

ಸುಟ್ಟ ಹಗ್ಗದ ಹಾಣೆ ಅಹಂಕಾರ ವಿರಲಿ
ಗಾಳಿ ಬಿಟ್ಟರೆ ದರ್ಪ ಹಾರಿ ಹೋಗಿರಲಿ
ದೇವರ ಕೃಪೆಗಾಗಿ ಮನವು ಹಾತೊರೆಯಲಿ
ಮಾಣಿಕ್ಯ ವಿಠಲನಾಗಿ ಸಾರ್ಥಕ ಎನಿಸಲಿ
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...