ಶ್ರೀಯವರು ತಮಿಳು ಸಾಹಿತ್ಯದ ಸಾರವನ್ನು ಕನ್ನಡಿಗರಿಗೆ ಒದಗಿಸಿಕೊಡಬಯಸಿ ಒಂದೆರಡು ಮಹಾಗ್ರಂಥಗಳನ್ನು ಕನ್ನಡಕ್ಕೆ ಇಳಿಸಿದ್ದರು. ನಮ್ಮ ದುರ್ದೈವದಿಂದ ಎಲ್ಲವೂ ಗೆದ್ದಲಪಾಲಾಗಿ ಒಂದೆರಡು ತುಣುಕುಗಳು ಮಾತ್ರ ಉಳಿದಿವೆ. “ಶಿಲಪ್ಪದಿಗಾರಂ” ಎಂಬ ಪ್ರಸಿದ್ದ ತಮಿಳು ಕಾವ್ಯದ ಕನ್ನಡ ಭಾಷಾಂತರಕ್ಕೆ ಮುನ್ನುಡಿಯಾಗಿ ಬರೆದುವು ಈ ಹದಿನೇಳು ಸಾಲುಗಳು.
ಮುನ್ನುಡಿ
ಕೂರ ಕಲೆಮಗಳ್ ಅರಸು ತೊರೆದಿರ್‍ದ
ಚೇರಲ್ ಇಳಂಗೋವಡಿಗಳ್ ಅರುಳ,
ಮುತ್ತ ಮಿಳ್ ಪಾಟ್ಟೆನ ತಮಿಳ್‌ಮಗಳ್ ಪೆತ್ತ
ನುಣ್ ತಣ್‌ಬೆಳಗಿನ ಮುತ್ತಿನಮಣಿಯನ್
ಆರಾ ಅವರ್ದೆನ ತೀರಾ ತಣವಿನ್,
ಇನ್ನುಂ ತನ್ ಪೋಲ್ ಕನ್ನಡ ಮಕ್ಕಳ್
ಅರುಂಪೆರಲ್ ಕಾದಲ್ ಪೆಣ್ಣಣಿ ಕಲ್ಪಿನ್
ತಿರುಮಾಪತ್ತಿನಿ ಕಣ್ಣಕಿ ತೊಳುತು
ಅರಿವೆನ ಅರನೇ, ಅರನೆನ ಅರುಳೇ
ಎಂದರಿನಾಲ್ವಾಳ್ ಬಲ್ವಿಡಿವಿಡಿಗೆನ,
ಕಂಡ ಕಂಡ ಮಲರ್ ಚೆಲ್ವನೆ ಕೊಂಡು
ಬಂಡುಣಿ ತನತೇ ಜೇನೀನ್ಬಂತು,
ಕಂಡೆಡೆ, ಕಂಡೆಡೆ ಚೆಲ್ವಗಳಾಯ್ದು
ತೆರಳ್ಚಿ ಮನೆಕಡೆ ತರ್‍ಪೋನ್, ತಂದನ್
ತಾಯ ಕಯ್ಯೋಳಿಡೆ ಶ್ರೀಯೆಂಬೊರ್‍ವನ್-
ಬೇಡುವನೊಂದನ್ ನಲವಿಂದೀಯೆ,
ಒಲ್ವ ಮಕ್ಕಳೊಳ್ ಚೆಲ್ಪನಿಡು ತಾಯೆ!
*****