ಅದು ಸಮಯ

ಅದು ಸಮಯ ಇದು ಸಮಯ
ಕನಸುಮಯ ಈ ಸಮಯ
ಎಬ್ಬಿಸಬೇಡಿ

ಇದು ಹಗಲು ಸಮಯ
ಇದು ಇರುಳು ಸಮಯ
ಹಗಲಿರುಳ ನಡುವೆ ಸಂಧ್ಯೆ ಸಮಯ

ಇದು ಮಳೆಯ ಸಮಯ
ಇದು ಬಿಸಿಲ ಸಮಯ
ಮಳೆ ಬಿಸಿಲ ಮಧ್ಯೆ ಚಳಿ ಸಮಯ

ಇದು ಮೊಗ್ಗು ಸಮಯ
ಇದು ಮುಗುಳು ಸಮಯ
ಮೊಗ್ಗು ಮುಗುಳ ನಡುವೆ ಭ್ರಮರ ಸಮಯ

ಇದು ಹಸಿರೆಲೆ ಸಮಯ
ಇದು ಹಣ್ಣೆಲೆ ಸಮಯ
ಹಸಿರು ಹಣ್ಣಿನ ಮಧ್ಯೆ ಒಸಗೆ ಸಮಯ

ಇದು ಮಾತು ಸಮಯ
ಇದು ಮೌನ ಸಮಯ
ಮಾತು ಮೌನದ ನಡುವೆ ಅರ್ಥ ಸಮಯ

ಇದು ಆಗುವ ಸಮಯ
ಇದು ಮಾಗುವ ಸಮಯ
ಆಗುವ ಮಾಗುವ ಮಧ್ಯೆ ಮಹಾಕಲ್ಪ ಸಮಯ

ಅದು ಸಮಯ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೨೦
Next post ಶಿಲಪ್ಪದಿಗಾರಂ

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…