ಹಿಂದೂಮುಸಲ್ಮಾನರ ಐಕ್ಯ – ೩

ಹಿಂದೂಮುಸಲ್ಮಾನರ ಐಕ್ಯ – ೩

ಮಾಯೆ ಶಿವದಾಸನ ಒಬ್ಬೊಂಟಿಗಳಾದ ಮೊಮ್ಮಗಳು. ಬಾಲ್ಯದಲ್ಲಿಯೇ ಅವಳಿಗೆ ಮಾತಾ-ಪಿತೃಗಳ ವಿಯೋಗವಾಗಿತ್ತು. ಶಿವದಾಸನಿಗೆ ಮತ್ತೆ ಇಬ್ಬರು ಮಕ್ಕಳಿದ್ದರು. ಅವರ ಮಕ್ಕಳು-ಮರಿಗಳಿಂದ ಅವನ ಮನೆ ಸುಶೋಭಿತವಾಗಿತ್ತು; ಆದರೆ ಶಿವದಾಸ ಆ ಎಲ್ಲ ಹುಡುಗರಿಗಿಂತ ತಂದೆತಾಯಿಗಳಿಲ್ಲದ ಈ ಮಾಯೆಯನ್ನೇ ಹೆಚ್ಚಾಗಿ ಪ್ರೀತಿಸುತ್ತಿದ್ದ. ಮಾಯೆಯು ಅಜ್ಜನ ಸಹವಾಸದಲ್ಲಿಯೇ ವಿಶೇಷವಾಗಿರುತ್ತಿದ್ದದರಿಂದ, ಅವನು ಅವಳಿಗೆ ಓದು-ಬರೆಹ-ಸ್ತೋತ್ರ ಪಾಠಗಳನ್ನು ಕಲಿಸಿದ್ದ ಶಿವದಾಸನ ಬಳಿಗೆ ಗುಲಾಮ ಆಲಿಯ ಬರ- ಹೋಗೋಣ ಹೆಚ್ಚು ಅದರಿಂದ ಅವನಾದರೂ ಶಿವದಾಸನ ಇತರ ಮೊಮ್ಮಕ್ಕಳಿಗಿಂತ ಮಾಯೆಯನ್ನು ಬಹಳವಾಗಿ ಪ್ರೀತಿಸುತ್ತಿದ್ದ. ಮಾಯೆಯ ಮನೋಹರ ರೂಪ, ಮಾಧುರ್ಯಯುಕ್ತ ಕಂಠಸ್ವರ, ನಗೆ ಮೊಗ ಇವೆಲ್ಲವುಗಳು ಅವಳನ್ನು ನೋಡಿದ ಪ್ರತಿಯೊಬ್ಬರಲ್ಲಿಯೂ ಅವಳ ವಿಷಯದ ಆದರವನ್ನು ವೃದ್ಧಿಗೊಳಿಸುತ್ತಿದ್ದವು. ಪದ್ಧತಿಯಂತೆ ಬಾಲ್ಯದಲ್ಲಿಯೇ ಮಾಯೆಯ ವಿವಾಹವಾಗಿತ್ತು; ಆದರೆ ಲಗ್ನವಾದ ತುಸ ದಿವಸ ಗಳಲ್ಲಿಯ ವಿಧಿವಶಾತ್ ಆಕಗೆ ವೈಧವ್ಯ ಪ್ರಾಪ್ತವಾಯಿತು! ಸಂಸಾರ ಧರ್ಮಕ್ಕಾಗಿ ಮಾಯೆಯನ್ನು ದೇವರು ಸೃಷ್ಟಿಸಿರಲಿಲ್ಲ: ತನ್ನ ಸೇವೆಗಾಗಿಯೇ ಅವಳಿಗೆ ಸ್ತ್ರೀ ಜನ್ಮವನ್ನು ಕೊಟ್ಟು ಮರ್ತ್ಯಲೋಕಕ್ಕೆ ಕಳಿಸಿದ್ದನು!

ಗುಲಾಮ‌ಅಲಿಯು ಚಂಡೀಮಂಟಪದಲ್ಲಿ ಕುಳಿತಾಗ ಸಾಶ್ರುನಯನಗಳಿಂದ ಶಿವದಾಸನನ್ನು ಕುರಿತು:- ಬ್ರಾಹ್ಮಣೋತ್ತಮನೇ, ನಮ್ಮ ಈ ತಂಗಿ ತನ್ನ ಶೇಷಾಯುಷ್ಯವನ್ನು ಯಾವ ವಿಧವಾಗಿ ಕಳೆಯಬೇಕು? ಈ ವಿಷಯಕ್ಕೆ ನೀವೇನಾದರೂ ಆಲೋಚಿಸಿರುವಿರೇನು?’ ಎಂದು ಪ್ರಶ್ನೆ ಮಾಡಲು,

“ಜಹಗೀರದಾರರೇ, ವಿಚಾರವನ್ನೇನು ಮಾಡತಕ್ಕದ್ದಿದೆ? ಜನ್ಮ-ಜನ್ಮಾಂತರದ ಕರ್ಮಫಲದಿಂದಲೇ ಅವಳಿಗೀ ಬಾಲವೈಧವ್ಯ ಪ್ರಾಪ್ತವಾಗಿದೆ; ಇಲ್ಲದಿದ್ದರೆ ಈ ನಮ್ಮ ಮಾಯೆ ಇಷ್ಟೊತ್ತಿಗೆ ಸಂಸಾರದ ಮಧುರ ಫಲಗಳನ್ನು ಸೇವಿಸಹತ್ತುತ್ತಿದ್ದಳಲ್ಲವೆ?” ಎಂದು ನುಡಿದು ಶಿವದಾಸನು ಉಸಿರ್ಗರೆದ.

“ಹಾಗಾದರೆ ಸಂಸಾರಧರ್ಮವರ್ಜಿತಳಾದ ಇವಳು ಇನ್ನು ತನ್ನ ಆಯುಷ್ಯವನ್ನು ಹೇಗೆ ಕಳೆಯಬೇಕು?”,

“ಪತಿ-ಪತ್ನಿ ಧರ್ಮದಿಂದ ವಂಚಿತಳಾದ ಮಾತ್ರದಿಂದ ಅವಳಿಗೆ ಬೇರೆ ಸಂಸಾರೋಪಾಧಿಗಳು ಇರುವದಿಲ್ಲೆಂತಲ್ಲ; ಬೇಕಾದಷ್ಟಿರುತ್ತವೆ. ವೃದ್ಧರಾದ ಅತ್ತೆ-ಮಾವಂದಿರ ಸೇವಾ-ಶುಕ್ರೂಷೆಗಳಲ್ಲಿಯೂ ಭಾವ ಮೈದುನರ ಸಂತತಿ ಪಾಲನ-ಪೋಷಣಗಳಲ್ಲಿಯೂ ನಿರತಳಾಗಲಿಕ್ಕೆ ಇವಳಿಗೆ ಆಸ್ಪದವಿರುತ್ತದೆ.”

“ಸ್ತ್ರೀಯರು ಅವೆಲ್ಲ ಸಂಸಾರೋಪಾಧಿಗಳಲ್ಲಿ ಸಹಜವಾಗಿ ನಿರತರಾಗುವಂತಿದ್ದರೂ, ಪ್ರಿಯಕರನಿಲ್ಲದ ಆ ಸಂಸಾರ ಶಕಟ ಎಳೆಯಲಿಕ್ಕೆ ವಿಚಾರವಂತ ವಿಧವೆಯರಿಗೆ ಹುರುಪು ಬರುವದಿಲ್ಲ. ಅತ್ತೆ-ಮಾವಂದಿರೂ ಸಂಸಾರದ ಬೇರೆ ಪ್ರಮುಖರೂ ಪ್ರಸಂಗೋಪಾತ್ ಇವರನ್ನು ತುಸ ಜರೆದರಂತೂ ಕೆಲಸವೇ ಮುಗಿಯಿತು. ಆದ್ದರಿಂದ ಶಿವದಾಸರೇ, ಇವಳನ್ನು ಅಂಥ ಅನಿಶ್ಚಿತ ವಾತಾವರಣದ ಸಂಸಾರದಲ್ಲಿ ತೊಡಗಿಸುವದಕ್ಕಿಂತ, ಸದಾ ನಿಶ್ಚಿತವಾದೀ ಚಂಡಿ ಮಹಾಮಾಯೆಯ ಸಂಸಾರದಲ್ಲಿ ತೊಡಗಿಸಿ ಬಿಡುವದು ಒಳಿತೆಂದು ನನಗೆ ತೋರುತ್ತದೆ. ಈ ದೇವತೆಯ ಸೇವಾಸೂತ್ರಗಳಿಂದಲೇ ಇವಳ ತನುಮನಗಳಿಗೆ ನಿಜವಾದ ಸುಖ-ಶಾಂತಿಗಳು ದೊರೆತರೆ ದೊರೆಯುವ ಸಂಭವವಿರುತ್ತದೆ. ಈ ಉದ್ದೇಶವನ್ನಿಟ್ಟು ಕೊಂಡು ನೀವೀ ಎದುರಿಗಿನ ವಿಶಾಲವಾದ ಗಂಗಾತೀರದಲ್ಲಿ ಒಂದು ದೇವತೆಯನ್ನು ಪ್ರತಿಷ್ಠಾಪನೆ ಮಾಡಿರಿ. ನಮ್ಮ ತಂಗಿ ಆ ದೇವಾಲಯದಲ್ಲಿ ವಾಸಿಸಿ ದೇವರ ಸೇವೆಯನ್ನೂ ದೀನ-ದುರ್ಬಲ ರಾದವರ ಸೇವೆಯನ್ನೂ ಮಾಡಲಿ. ನಾನು ಆ ದೇವಾಲಯವನ್ನು ಕಟ್ಟಿಸಲಿಕ್ಕೆ ಬೇಕಾಗುವಷ್ಟು ಹಣ ಕೊಡುವೆನಲ್ಲದೆ, ಆ ದೇವತೆಯ ಪೂಜಾ-ಪುರಸ್ಕಾರಗಳ ವಿನಿಯೋಗಕ್ಕಾಗಿಯೂ ದೀನ-ದುರ್ಬಲರ ಊಟ-ಉಪಚಾರಗಳ ಖರ್ಚಿಗಾಗಿಯೂ ಒಂದು ತಾಲೂಕಿನ ಉತ್ಪತ್ತಿಯನ್ನು ನಮ್ಮ ತಂಗಿಯ ಹೆಸರಿಗೆ ಇನಾಮು ಬರೆದು ಕೊಡುವೆನು. ನನ್ನ ತಂಗಿ ದೇವರನ್ನು ಆರಾಧಿಸಲಿ. ಅನಾಥ ಜನರನ್ನು ಸಂತೋಷಗೊಳಿಸಿದರೆ, ದೇವರ ಸಂತುಷ್ಟತೆಯು ತಾನೇ ಆಗುವದು; ದೀನ-ದುರ್ಬಲರಿಗೆ ಉಣಬಡಿಸುವದೇ ದೇವರಿಗೆ ನೈವೇದ್ಯವನ್ನರ್ಪಿಸೋಣ, ಅಂಥವರಿಗೆ ಬಟ್ಟೆ-ಬರೆಗಳನ್ನು ಕೊಟ್ಟರೆ ದೇವರಿಗೆ ವಸ್ತ್ರಾಭರಣಗಳನ್ನು ಕೊಟ್ಟಂತಾಗುವದು. ಅನಾಥರ ಕಷ್ಟವನ್ನು ಪರಿ ಹರಿಸುವದೇ ದೇವರ ಮುಖ್ಯ ಸೇವೆಯೆಂದು ನನ್ನ ನಿಶ್ಚಿತ ಮತವಾಗಿರುತ್ತದೆ. ಬ್ರಾಹ್ಮಣಶ್ರೇಷ್ಠರೇ, ಈ ನನ್ನ ಲೋಕಸೇವ-ದೇವಸೇವೆಗಳ ಕಲ್ಪನೆಯು ನಿಮಗೆ ಸಮ್ಮತವಾದರೆ, ನೀವು ನನ್ನ ತಂಗಿಯನ್ನು ಆ ಅಸ್ಥಿರವಾದ ಸಂಸಾರದ ಕೊಳೆಪಾಟದಲ್ಲಿ ದೂಡುವದಕ್ಕಿಂತ, ಸ್ಥಿರವಾದ ಈ ದೇವತಾರಾಧನೆಯಲ್ಲಿ ತೊಡಗಿಸುವದು ತಕ್ಕದ್ದಾಗಿರುತ್ತದೆ.”

ಗುಲಾಮ ಆಲಿಯ ಈ ಸ್ಫೂರ್ತಿದಾಯಕ ವಚನಗಳನ್ನು ಕೇಳಿ, ಶಿವದಾಸನು ಕುಳಿತ ಸ್ಥಳದಿಂದೆದ್ದು ಆ ಜಹಗೀರದಾರನನ್ನು ಆಲಿಂಗಿಸಿ: “ಜಹಗೀರದಾರರೇ, ನಿಮ್ಮಲ್ಲಿಯ ಹಿಂದು-ಮುಸಲ್ಮಾನರ ವಿಷಯದ ಸಮತ್ವವು ಧನ್ಯವಾಗಿರುತ್ತದೆ!” ಎಂದಂದನು. ಜಹಗೀರದಾರನಾದರೂ ಶಿವದಾಸನನ್ನು ತನ್ನ ಬಾಹುದ್ವಯಗಳಿಂದ ದೃಢವಾಗಿ ಆಲಿಂಗಿಸಿದನು. ಆಗ ಅವರೀರ್ವರ ನೇತ್ರಗಳಿಂದ ಆನಂದಬಾಷ್ಪಗಳು ಹೊರಬಿದ್ದು ಸಂಗಮ ಸ್ಥಳದಲ್ಲಿ ಗಂಗಾ, ಯಮುನೆಗಳ ನೀರು ಒಟ್ಟಾಗಿ ಹರಿಯುವಂತೆ, ಅವು ಭೂಮಿಯ ಮೇಲೆ ಬೀಳುವಾಗ ಸಂಗಮ ಹೊಂದಿಯೇ ಬಿದ್ದವು.

ಅವರೀರ್ವರಲ್ಲಿ ಈ ಪ್ರಕಾರ ಸಂಭಾಷಣವಾದ ಕೆಲವು ದಿವಸಗಳಲ್ಲಿಯೇ ಗಂಗಾತೀರದ ವಿಶಾಲವಾದ ಸ್ಥಳದಲ್ಲಿ ಒಂದು ನೂತನ ಚಂಡಿಮಂಟಪ ಕಟ್ಟಲ್ಪಟ್ಟಿತು. ಆ ದೇವಾಲಯದ ಸುತ್ತಲೂ ನೇತ್ರಾನಂದಕರವಾದ ಹೂದೋಟವೂ, ದೇವಾಲಯಕ್ಕೆ ಹೊಂದಿ ದೀನ-ದುರ್ಬಲರ ವಾಸಕ್ಕಾಗಿ ಚಿಕ್ಕ-ದೊಡ್ಡ ಧರ್ಮಶಾಲೆಯಂಥ ಬೀಡಾರಗಳೂ ಪರಿಶೋಭಿಸಿದುವು. ಸುಮುಹೂರ್ತದಲ್ಲಿ ಶಿವದಾಸನು ದೇವತಾ ಪ್ರತಿಷ್ಠಾಪನೆ ಮಾಡಿದನು. ವಚನವಿತ್ತಂತೆ ಜಹಗೀರದಾರನು ಒಂದು ತಾಲೂಕಿನ ಆದಾಯವನ್ನು ಮಾಯೆಯ ಹೆಸರಿಗೆ ಬರೆಸಿಟ್ಟನು. ಆ ದೇವಾಲಯದಲ್ಲಿ ವಾಸಿಸಿ ಮಾಯೆಯು ದೇವತೆಯ ಆರಾಧನೆಯಲ್ಲಿಯೂ, ದೀನ-ದುರ್ಬಲರನ್ನು ಸಂತೋಷಿಸುವದರಲ್ಲಿಯೂ ತನ್ನ ಎಲ್ಲ ಶಕ್ತಿ-ಸಮಯಗಳನ್ನು ವಿನಿಯೋಗಿಸಲಾರಂಭಿಸಿದಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಾಯಿ ಸರಸ್ವತಿ
Next post ಅನಾಥ

ಸಣ್ಣ ಕತೆ

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…