ಎಲ್ಲ ಮಾಹಿತಿಗಳನ್ನೂಳಗೊಂಡ ಬಣ್ಣದ ವಿಡಿಯೋ ಮೊಬೈಲ್

ಎಲ್ಲ ಮಾಹಿತಿಗಳನ್ನೂಳಗೊಂಡ ಬಣ್ಣದ ವಿಡಿಯೋ ಮೊಬೈಲ್

ಅಮೆರಿಕಾದೇಶವು ತಂತ್ರಜ್ಞಾನದಲ್ಲಿ ಮುಂದೆಮುಂದೆ ಹೋಗುತ್ತ ಹೊಸ ಆವಿಷ್ಕಾರಗಳಿಗೆ ಕಾರಣವಾಗುತ್ತಲಿದೆ. ಅದರಲ್ಲೂ ಮೊಬೈಲ್ ಫೋನ್‌ನಲ್ಲಿ ವಿಶಿಷ್ಟವಾದ, ಅಪೂರ್ವವೆನಿಸಿದ ಮೊಬೈಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. “ಇಟೇಲ್ ಪಿ ೩೦೦” ಎಂದು ಇದರ ಹೆಸರು. ಈ ಪಾಕೆಟ್ ಪಿಸಿಯ ಸ್ಕ್ರೀನ್ ೩೨೦೨೪೦ ಪಿಕ್ಸೆಲ್ ರಿಜಲ್ಯೂಶನ್ ಹೊಂದಿದ್ದು ಟಚ್‌ಸ್ಕ್ರೀನ್ ಹೊಂದಿದೆ. ಸ್ಟೈಲಸ್ ಅಥವಾ ಒಂದು ಬೆರಳು ಉಪಯೋಗಿಸಿ ಮಾಹಿತಿಯನ್ನು ತುಂಬುವ ಮತ್ತು ಪಡೆಯುವ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿ ಉಪಯೋಗಿಸಲಾಗಿರುವ ಟ್ರಾನ್ಸ್‌ಟೆಕ್ಟಿವ್ ತಂತ್ರಜ್ಞಾನದಿಂದ ಪರದೆಯ ಮೇಲಿನ ಅಕ್ಷರಗಳನ್ನು ಅತಿಸ್ಪಷ್ಟವಾಗಿ ಓದಬಹುದು. ೧೨ ಬಿಟ್‌ವರ್ಣ ಪರದೆ ೪೦೯೬ ವರ್ಣಗಳನ್ನು ಬಿಂಬಿಸಬಲ್ಲ ಸಾಮರ್ಥ್ಯ ಹೊಂದಿದೆ. ಇದರಲ್ಲಿರುವ ಮೊಬೈಲ್ Phone ನ್ನು ವಿಶ್ವವ್ಯಾಪಿಯಾಗಿ ಯಾವುದೇ G.S.M/G.P.R.S. ಜಾಲಗಳಲ್ಲಿ ಉಪಯೋಗಿಸಬಹುದು. ಇದರೊಳಗೆ ವೆಬ್‌ಕ್ಯಾಮರಾ (640-480) ಸಹ ಅಳವಡಿಸಲಾಗಿದೆ. ಇದನ್ನು ಉಪಯೋಗಿಸಿಕೊಂಡು ಸಣ್ಣ ಅವಧಿಯ ವಿಡಿಯೋ ಮತ್ತು ಸ್ಥಿರಚಿತ್ರಗಳನ್ನು ತೆಗೆದು E ಮೆಲ್ ಮಾಡಬಹುದು. P-300ನಲ್ಲಿ 200 M.H.Z ಹಿತಾಚಿ A.R.M.9 ಪ್ರೊಸೆಸರ್ 64 ಎಂಬಿ ಎಸ್‌ಡಿರ್‍ಯಾಮ್ ಹೊಂದಿದೆ. ಈP.C. ಮೈಕ್ರೋಸಾಪ್ಟ್ ವಿಂಡೋಸ್ ಮೊಬೈಲ್ 2003 ಪಾಕೆಟ್ PC O.S ಆಧಾರದ ಮೇಲೆ ನಡೆಯುತ್ತದೆ. ಅಲ್ಲದೇ ವಿಂಡೋಸ್ ಸಿ. ಇ. 4-2 ಆಪರೇಟಿಂಗ್ ಸಿಸ್ಟಮ್ ಮತ್ತು ಪಾಕೆಟ್ P.C.ಆವೃತ್ತಿಯ ಕ್ಯಾಲೆಂಡರ್ ಇನ್‌ಬಾಕ್ಸ್, ಎಕ್ಸೆಲ್, ಇಂಟರ್ನೆಟ್ ಎಕ್ಸ್‌ಪ್ಲೋರರ್, ಎಂ.ಎಸ್.ರೀಡರ್ ಮಿಡಿಯಾ ಪ್ಲೇಯರ್, ಇಮ್ಯಾಜ್ ಮೇಕರ್ ಮಲ್ಟಿ ಮಿಡಿಯಾ ಮ್ಯಾನೇಜರ್ ಫೋಟೋ ಕ್ಯಾಪ್ಚರ್ ಸಿಮ್‌ಮ್ಯಾನೇಜರ್, ಬ್ಯಾಕ್ ಅಪ್ ಯುಟಿಲಿಟಿ, ಕಾಂಟಾಸೈ ಅಡ್ಜಸ್ಟರ್, ಮತ್ತು ಸಿಸ್ಟಮ್ ಕನ್ಸೋಲ್‌ಗಳನ್ನು ಇದು ಹೊಂದಿದೆ.

ದಿಲ್ಲಿ ಮುಂಬೈ, ಮತ್ತು ಬೆಂಗಳೂರಿನ ಕೆಲವು ಆಯಾ ಮಳಿಗೆಗಳಲ್ಲಿ ಲಭ್ಯವಿರುವ ಈ ಉತ್ಪನ್ನದ ಬೆಲೆ ೩೫೯೯ ರೂ.ಗಳು ೨೧ ನೆ ಶತಮಾನದ ವೈಯಕ್ತಿಕ ಸಂವಹನದ ಹಾಗೂ ಮಾಹಿತಿಗಳ ಅಪೂರ್ವ ಮೊಬೈಲ್ ಇದಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜವಾಬುದಾರಿ
Next post ಪಾಪಿ

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…