ಅವಳೊಬ್ಬ ವಿರಹಿ. ತನ್ನಿಂದ ದೂರಾದ ಪ್ರಿಯನ ನಿರೀಕ್ಷೆಯಲ್ಲಿ ಪಾರಿಜಾತ ಗಿಡದ ಕಟ್ಟೆಯಲ್ಲಿ ಕುಳಿತಿದ್ದಳು. ಅರಳಿದ ಪಾರಿಜಾತಗಳು ಒಂದೊಂದಾಗಿ ಬಿದ್ದು ಅವಳ ಕನಸಿನ ಗೋಪುರವನ್ನು ಅಲಂಕರಿಸುತ್ತಿತ್ತು. ಅವಳ ತಳಮಳಗೊಂಡ ಮನವು ಮಾತ್ರ ಕಣ್ಣಲ್ಲಿ ಅಶ್ರು ಹನಿಸುತಿತ್ತು. ಗರ್ಭದಲ್ಲಿ ಭ್ರೂಣ ಬೆಳೆಯುತಿತ್ತು. ಕನಸು ನನಸಿನ ಸಮಾಂತರದ ಹಳಿಯಲ್ಲಿ ಅವಳ ಹೃದಯ ಪ್ರಿಯಕರನ ಬರುವಿಗಾಗಿ ಡಭಡಭ ಎಂದು ಹೋಡೆದುಕೊಳ್ಳುತಿತ್ತು. “ಮಣ್ಣಲ್ಲಿ ಬಿದ್ದ ಪಾರಿಜಾತ ದೈವ ಸಾನಿಧ್ಯ ಸೇರ್‍ಇತೇ?” ಎಂದು ಪರಿತಪಿಸುತಿತ್ತು.
*****