ಎಂದಾದರೊಂದು ದಿನ
ನನ್ನ ಆಸೆಯ ಹಕ್ಕಿಗೂ
ಗರಿಯೊಡೆದು, ಪುಕ್ಕ ಬೆಳೆದು
ಜಲ ನೆಲ ವಾಯುವಿನ ಬಲ ಪಡೆದು
ಗಗನ ಹೆತ್ತರಕೆ ಹಾರುವವು
ಅದರ ಅಂಚನ್ನು ಸುತ್ತಿ
ಮಿಂಚನ್ನು ಮೀರಿ
ಅಡೆ ತಡೆ ತೊಡಕುಗಳ
ಓಸರಿಸಿ
ತಾರೆಗಳನು ಮುಟ್ಟುವ
ರವಿ-ಚಂದ್ರರನ್ನು ತಟ್ಟುವ
ಜತುನದಲ್ಲಿ ತಮ್ಮ ಹುಟ್ಟಿನ
ಅರ್ಧವನ್ನು ಪಡೆಯುವವು
ಆಸೆಗಳೆ ಹೀಗೆ…..
ಬೆಂಬಿಡವು, ಮುಗಿಯಲಾರವು
ತೆರವಾಗಲಾರವು.
ಮನುಷ್ಯನ ಎಲ್ಲ ದುಃಖಕೆ
ಎಲ್ಲಿ ನೋವಿಗೆ ನಿಮಿತ್ತವಾಗುವವು.
ಹಿಂದೊಬ್ಬ ಇದ್ದ
ಆಸೆಗಳೆ ದುಃಖದ ಕಾರಣ
ಎಂದಿದ್ದ… ಪ್ರಬುದ್ಧ
ಅವನೆ ಗೌತಮ, ಅವನೆ ಬುದ್ಧ
ಅವತಾರಿ, ಪರಮ ಸಿದ್ಧ
ಅವನೆಂದಂತೆ ಆಸೆಗಳ ದೂರವಿಟ್ಟೆ
ಸುಳಿಯದಿರು ನಿಕಟ, ಅಕಟಕಟ
ಎಂದು ತಾಕೀತು ಮಾಡಿ ನೋಡಿದ
ಆದರೂ….
*****