ಮನುಜನಿಗಿಂತ ಮೃಗಪ್ರಾಣಿಯೊಂದಿಲ್ಲ
ಕಾಡುಮೃಗ ಹೊಟ್ಟೆಪಾಡಿಗೆ ಭೇಟೆಯಾಡಿದರೆ|
ಮನುಜ ಅಹಂಕಾರ, ಸ್ವಾರ್ಥಕೆ
ಇನ್ನೊಬ್ಬರ ಜೀವದನದ ಜೊತೆ ಬೇಟೆಯಾಡುತ
ಮನುಕುಲಕೆ ಮೃತ್ಯುವಾಗಿಹನು||
ಮನುಜ ಮನುಜನಂತೆ ನಡೆದರೆ
ಬೇಕಿಲ್ಲ ಮಾನವನ ಶಿಕ್ಷೆ ರಕ್ಷಣೆಯ
ಕಾನೂನು, ಬಂದಿಖಾನೆ|
ಮನುಜ ಮಾನವೀಯತೆಯಲಿ ಮೆರೆದರೆ
ಬೇಕಿಲ್ಲ ಮನಶಾಂತಿಯ ಮಂತ್ರ, ಸೂತ್ರದ ಮೊರೆ||
ಮನುಜ ಆದರ್ಶಮಾರ್ಗದಿ ಮುನ್ನಡೆದರೆ
ಬೇಕಿಲ್ಲ ನೀತಿಸಂಹಿತೆಯ ಮಾನದಂಡ|
ಮನುಜ ತ್ಯಾಗ ಹಸ್ತವ ನೀಡಿದ್ದೇಯಾದರೆ
ಬರ ಕ್ಷಾಮಾದಿಗಳಿಂದ ಮುಕ್ತವೀಧರೆ||
ಮನುಜನೂ ಪ್ರಾಣಿ ನಿಜ, ಮೃಗವಾದರೆ ಹೇಗೆ?
ಸಹನೆ ಸಹಕಾರ ಶಾಂತಿ ಕರುಣೆ ಪ್ರೀತಿಯಿಲ್ಲದ
ಹೃದಯ, ಢಾಂಬಿಕತೆ, ಬರೀ ಸ್ವಾರ್ಥದಿ
ಜೀವಿಸಿದರೆ ಅದು ಮನು ಜನ್ಮವೇ?
ಬದಲಾಗು ಮಾನವ ಮೊದಲು ಮಾನವನಾಗು||
*****