ಭಾವನ ಭಾವನ ಚೇತನ

ಭಾವನ ಭಾವನ ಭಾವನ
ನಿನ್ನ ಉಳಿವಿನಲಿ ನನ್ನ ಚೇತನ
ಚೇತನ ಚೇತನ ಚೇತನ ||
ಬದುಕೆಂಬ ಬಳ್ಳಿಯಲಿ
ಹೂವೆಂಬ ಚೇತನ ಭಾವನ ||

ಉಣ್ಣುವ ತುತ್ತು ತುತ್ತಿನಲ್ಲಿ
ಅನಂತ ಅನಂತ ಚೇತನ
ಬಡವ ಬಲ್ಲಿದ ಭೇದ ತೊರೆದ
ನಿತ್ಯನೂತನ ನೂತನ ಭಾವನ ||

ಜೋಗುಳ ಹಾಡುವ ತಾಯಿ
ಮಮತೆಯಿಂದ ಕಂದನೆತ್ತಿ
ಮುತ್ತನಿತ್ತ ಭಾವಚೇತನ
ನೀನೊಲಿದ ವಾತ್ಸಲ್ಯ ಭಾವನ ||

ಉಸಿರು ಉಸಿರಲ್ಲಿ ಹಸಿರಾಗಿ
ಹಸಿರು ಹಸಿರಲ್ಲಿ ಉಸಿರಾಗಿ
ಋತು ಚಕ್ರಧಾರೆ ಸೃಷ್ಟಿ
ಚೆಲುವ ಚೇತನ ಭಾವನಾ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

ಪಾಳೇಗಾರ Previous post ಪಾಳಯಗಾರ ಶಬ್ದದ ಸಾಧಾರಣಾರ್ಥ
Next post ಸಂಪಿಗೆಯ ಹೂ

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…