ಹಾದಿ ಅಯಸ್ಕಾಂತದಲ್ಲಿ
ಎಲ್ಲವೂ ಕಂಡದ್ದೆಲ್ಲವೂ ಆಹಾ!
ಚಿಲುಮೆಯೆದ್ದು ಸ್ವಾಹಾ
ಮಾಡಬೇಕೆಂಬ ಮಾಡಲೇಬೇಕೆಂಬ ಬಯಕೆ.
ಆಗ-
ಚೆಂಗು ಚೆಂಗಿನ ಚೆಲುವಾಗಿ ನೀನು ಕಂಡಿದ್ದೆ;
ಮತ್ತ ಕಣ್ಣಿನ ಮುಂದೆ
ಮಂದಾನಿಲದಂತೆ ಬೀಸಿ
ಪನ್ನೀರು ಸೂಸಿ
ಕಣ್ಣಕಾಮನ ಕಳಿಸಿ
ಕರೆದಿದ್ದೆ; ನಾನು ಬಿರಬಿರನೆ ಬಂದಿದ್ದೆ,
ಬಂದೆ ಬಂದೆ ಹಿಂದೆ ಹಿಂದೆ ಹಿಂದೆ
ಭೇದಿಸುವೆನೆಂಬ ಬೀರತನದಿಂದ ಬಂದಾಗ
ಭೇದಿಸಿಯೇ ಬಿಟ್ಟೆ-
ನೆಂದು ಕಣ್ಣ ಉಜ್ಜುಜ್ಜಿ ನೋಡಿದಾಗ
ನೀನಾಗಿದ್ದೆ ಮಾರೀಚ.
*****
Related Post
ಸಣ್ಣ ಕತೆ
-
ಕೆಂಪು ಲುಂಗಿ
ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…
-
ಕರೀಮನ ಪಿಟೀಲು
ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…
-
ಯಾರು ಹೊಣೆ?
"ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…
-
ಬಸವನ ನಾಡಿನಲಿ
೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…
-
ಲೋಕೋಪಕಾರ!
ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…