ಕವಿತೆಯಾಗಿ ನಾನಿದ್ದೆ
ರಾಗವಾಗಿ
ನೀನೂ ಬಂದೆ
ರಾಗವು
ಸೇರದೆ ಕವಿತೆಗೆ
ಜೀವ
ಬರುವುದೇ ಗೆಳತಿ
ನನ್ನ ಜೀವದ
ಜೀವ ನೀನು
ನೀನಿಲ್ಲದೆ
ನಾನಿಲ್ಲ ಇನ್ನು
ಸಂಗೀತದ
ಸಾಗರವೇ ನೀನು
ಅದರೊಳಗಿನ
ಸ್ವರವಾದೆ ನಾನು
ಕಲಾ ದೇವಿಯ
ಕಂಠಸಿರಿ ನೀ
ಆಲಿಸುವ
ಕರಣವಾಗಿ ನಾ
ಹಂಬಲಿಸುತಿದೆ
ನನ್ನ ಮನವು
ಗಟ್ಟಿಯಾಗಿರಲಿ
ಗೆಳೆತನ ಅನುದಿನವು
*****