ಅಲ್ಲೀಕೇರಿಗೆ ಹೋಗುನು ಬರ್ತೀರೇನ್ರೇ

ಅಲ್ಲೀಕೇರಿಗೆ ಹೋಗುನು ಬರ್ತೀರೇನ್ರೇ ನೀವು
ಒಲ್ಲದಿದ್ದರೆ ಇಲ್ಲೆ ಇರತೀರೇನ್ರೇ ||ಪ||

ಕಲ್ಲೌ ಮಲ್ಲೌ ಕೂಡಿಕೊಂಡು ದೀವಳಿಗೆ ಹಬ್ಬದಲ್ಲಿ
ಉಲ್ಲಾಸದಿಂದ ಅಲ್ಲಮಪ್ರಭುವಿನ ಮರೆತೀರೇನ್ರೇ ಇಲ್ಲೇ ಇರತೀರೇನ್ರೇ ||ಅ.ಪ.||

ಮಡಿಯನುಟ್ಟು ಮೀಸಲದಡಗಿ ಮಾಡಬೇಕ್ರೇ ಅದಕೆ
ತಡವು ಆದರೆ ನಿಮ್ಮ ಗೊಡವಿ ನಮಗೆ ಯಾಕ್ರೇ
ಹುರಕ್ಕಿ ಹೋಳಿಗೆ ಹೂರಣಕಡಬು
ಕಡಲಿ ಪಚ್ಚಡಿ ಕಟ್ಟಿನಾಂಬ್ರಾ
ಚಟಗಿ ಮುಚ್ಚಳ ಬಾನದ ಗಡಗಿ ಹೆಡಗಿ ಜೋಕ್ರೆ ನೀವು
ದೇವರ ಗುಡಿಗೆ ದೃಡದಿ ಹೋಗಿ ಧೂಪ ಹಾಕ್ರೇ ||೧||

ಊರ ಹೊರಗಿನ ಸಾರಿ ಮೀರಿದ ಸ್ಥಳವ ನೋಡ್ರೆ ಅದಕ
ಸೇರದಿದ್ದರ ನಿಮ್ಮ ಸ್ನೇಹ ನನಗೆ ಬ್ಯಾಡ್ರೇ
ಮೂರು ಗಿರಿಯ ಮರೆಯಲ್ಲಿರುವ
ನೀರು ತರುವ ಕೆರೆಯ ಬದಿಗೆ
ಜಾರುತರದ ಬುರುಜಿನೊಳು ಬಾಜಾರ್ ಹೂಡ್ರೆ ಮುಂದೆ
ಪಾರುಗಾಣುವಂಥ ಸುಸ್ರಿ ತಂದು ಇಡ್ರೇ ||೨||

ವಸುಧೆಯೊಳು ಶಿಶುನಾಳಧೀಶನ ಹೆಸರು ಹೇಳ್ರೇ ಹೇಸಿ
ವ್ಯಸನಿಕರಾದವರೆಲ್ಲ ಇದಕ ಬರಲೇ ಬೇಡ್ರೇ
ಕುಶಲದಿಂದ ಕೋಲ ಪಿಡಿದು
ಹಸನಾಗಿ ಪದ ನುಡಿದು
ರಸಿಕರಾದವರೆಲ್ಲ ನೀವು ಕೂತು ಕೇಳ್ರೇ ತುಸು
ಕಸರು ಇದ್ದರೆ ಇಲ್ಲಿ ಅದನು ತಿದ್ದಿ ಹೇಳ್ರೇ ||೩||

****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗುಜಗುಜಮಾಪೂರ ಆಡೋಣ
Next post ಸಾಧುಗಳಿಗೆ ಶಿವನ ಚಿಂತೆ

ಸಣ್ಣ ಕತೆ

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…