ಸಾಧುಗಳಿಗೆ ಶಿವನ ಚಿಂತೆಯು ಅನಂತವು ||ಪ||
ಬೇಧಭಾವವಳಿದು ಮಾಯಾ ಭ್ರಾಂತಿ ಕಳೆದು
ಭವನ ತುಳಿದು ಶಾಂತರೂಪದಿಂದ ಮೆರೆಯುವ ||ಅ.ಪ.||
ದುಡ್ಡು ಹಣವು ಹೆಡ್ಡತನವನು ಜಡದೊತ್ತೆ
ಗುಡ್ಡನೇರಿ ತೋರ್ಪ ಫನವನು
ಅಡ್ಡಬರುವ ಅಖಿಲ ವಿಷಯ
ಜಡ್ಡುಗಳಿದು ಜನನ ಮರಣ
ಕಡ್ಡಿಮುರಿದು ಕರ್ಮ ಹಿಡಿದು
ಮಡ್ಡರಂತೆ ಮಾತನಾಡುವ ||೧||
ತಂದೆ ಶಿಶುನಾಳಧೀಶನ ವಂದಿಸುವ ಗುರುಗೋ-
ವಿಂದರಾಜಾನಂದ ತೋಷನ
ಒಂದೇ ಲಕ್ಷ್ಯವಿಟ್ಟು ಸದಾ
ಬಿಂದುವಸ್ತು ಸವಿದು ಪರಮಾನಂದ ವನದೊಳಗಿರ್ಪ
ಚಂದದಿಂದ ಮಾತನಾಡುವ
****