ಆ ಊರು ಈ ಊರು
ಯಾವುದ್ಯಾವುದೋ ಊರು
ದೇವರ ಊರೆಂದು ನಂಬಿ
ಬಂಧು ಮಿತ್ರ, ಕಳತ್ರರ ಕೂಡಿ
ಸಾವಿರ, ಸಾವಿರ ಖರ್ಚುಮಾಡಿ
ತೀರ್ಥಯಾತ್ರೆ ಮಾಡಿ
ಧನ್ಯತೆಯ ಭಾವವನು ತಳೆಯುವಿರಿ.
ವಿಚಾರ ಮಾಡಿ
ಅವನು ಎಲ್ಲೆಲ್ಲೂ, ಎಲ್ಲರಲ್ಲೂ, ಎಲ್ಲಾ ರೂಪ
ಆಕಾರದಲ್ಲಿರುವನು
ನಂಬಿಕೆ, ನಿಜವೋ ಸುಳ್ಳೋ ಹೇಳಿ!
ಅಲ್ಲಿರುವನು, ಅದೇ ರೂಪದವನು, ಅವನೇ ಇವನು!
ಎನ್ನುವುದು ಅಪಚಾರವಲ್ಲವೇನು?
ಕಳಚಿ! ಭ್ರಮೆ ಕಳಚಿ!
ದೈವದೂರಿನಲ್ಲೇನಾದರೂ ವಿಶೇಷ ಕಾಣುವಿರಾ?
ಅದೇ ಕಲ್ಲು ! ಅದೇ ಮಣ್ಣು !
ಅದೇ ಜನ ! ಅದೇ ಬಾಳುತಾನೆ ?
ತಮ್ಮಲ್ಲಿ, ತಾವಿರುವಲ್ಲಿ
ಕಂಡು ಆನಂದಿಸದವರ
ಎಲ್ಲಿಯೋ ಕಾಣಬಹುದೆಂಬ ಹುಂಬ ಜನರ
ಹತಾಶಾ ಪೂರ್ಣ ಖಾಲಿ ನಡೆತೆಯಲ್ಲವೇನು ?
ಇದ್ದಲ್ಲಿಯೇ ಇದ್ದು
ಏಕತಾನತೆಯಿಂದ ರೋಸಿಹೋಗಿ
ಬದಲಾವಣೆ ಬಯಸಿ
ಬಿಡುವು ಮಾಡಿಕೊಂಡು
ಒಂದೆರೆಡು ದಿನ ಹೊರಗೆ ಹೋಗಿ
ಸುತ್ತಾಡಿ
ಹೊಸ ಜನ, ಹೊಸ ಪರಿಸರ ದರ್ಶನದ
ಜೀವನೋತ್ಸಾಹ ಮರುಪೂರಣ
ಬೋಧ ಕ್ಷಣಗಳ
ಆನಂದದಾಯಕ ಪ್ರವಾಸವಲ್ಲವೇನು ?
*****