ಇಡಿಪಸ್ ಕಾಂಪ್ಲೆಕ್ಸನ ಡಿ.ಎಚ್ ಲಾರೆನ್ಸ್ – ರಮ್ಯ ಆದರೆ ಅಸ್ತವ್ಯಸ್ತ ಬದುಕು

ಇಡಿಪಸ್ ಕಾಂಪ್ಲೆಕ್ಸನ ಡಿ.ಎಚ್ ಲಾರೆನ್ಸ್ – ರಮ್ಯ ಆದರೆ ಅಸ್ತವ್ಯಸ್ತ ಬದುಕು

ಭಾಗ -೧

ಆತನ ಕೃತಿಗಳು ಆತನ ಖಾಸಗಿ ಬದುಕನ್ನು ಪ್ರತಿನಿಧಿಸಿದ್ದವು. ಆತನ ಅಸ್ತವ್ಯಸ್ತ ಆದರೆ ರಮ್ಯ ರಮಣೀಯ ಬದುಕಿನ ಶೈಲಿ ಆತನ ಕೃತಿಗಳನ್ನು ಶ್ರೀಮಂತಗೊಳಿಸಿ, ಸಾಹಿತ್ಯ ಕ್ಷೇತ್ರದಲ್ಲಿ ಅಮರಗೊಳಿಸಿತು. ಆತನೇ ಇಪ್ಪತ್ತನೇ ಶತಮಾನದ ಮೇರು ಸಾಹಿತಿ ಡೆವಿಡ್ ಹರ್ಬರ್ಟ ಲಾರೆನ್ಸ್.

ಡಿ. ಎಚ್.ಲಾರೆನ್ಸ್ ಜನಿಸಿದ್ದು ಇಂಗ್ಲೆಂಡಿನ ನಾಟಿಂಗಹ್ಯಾಮಶೈರನ ಇಸ್ಟವುಡ್ ಎಂಬಲ್ಲಿ ೧೮೮೫ ಸಪ್ಟೆಂಬರ ೧೧ರಂದು. ಆತ ಮನೆಯ ಐದು ಜನ ಮಕ್ಕಳಲ್ಲಿ ನಾಲ್ಕನೇಯವನಾಗಿದ್ದ. ಹೆಚ್ಚು ಕಲಿತಿಲ್ಲದ ಲಾರೆನ್ಸನ ತಂದೆ ಅರ್ಥರ ಲಾರೆನ್ಸ ಗಣಿ ಕಾರ್‍ಮಿಕನಾಗಿದ್ದ. ಅದರೊಂದಿಗೆ ಮಹಾನ್ ಕುಡುಕನೂ ಆಗಿದ್ದ. ಕಾರ್‍ಮಿಕ ವಲಯದ ಬದುಕಿನಲ್ಲಿ ಹಾಯಾಗಿದ್ದ ಆತ ಬದುಕನ್ನು ಗಂಭೀರವಾಗಿ ಪರಿಗಣಿಸಿದವನೂ ಆಗಿರಲಿಲ್ಲ. ಅಲ್ಲದೇ ಭಯಂಕರ ಕುಡಿತದ ಚಟ ಅಂಟಿಸಿಕೊಂಡಿದ. ಸಂಸಾರದ ಜವಾಬ್ದಾರಿಗಳನ್ನು ನಿಭಾಯಿಸಲು ಶ್ರಮಿಸುತ್ತಿರಲಿಲ್ಲ. ಆದರೆ ತಾಯಿ ಲಿಡಿಯಾ ಬ್ರೆಡ್ಸೆಲ್ ಶಾಲಾ ಶಿಕ್ಷಕಿಯಾಗಿದ್ದಳು. ಮದ್ಯಮ ವರ್ಗದ ಕುಟುಂಬಕ್ಕೆ ಸೇರಿದ ಆಕೆ ತೌರಿನಲ್ಲಿ ನೆಮ್ಮದಿಯ ಬದುಕು ಸಾಗಿಸಿದವಳು. ವಿವಾಹದ ನಂತರ ಬವಣೆಯ ಬದುಕಿಗೆ ಶರಣಾಗಬೇಕಾಯಿತು. ಐದು ಮಕ್ಕಳನ್ನು ಹೊಂದಿದ ತುಂಬು ಕುಟುಂಬವನ್ನು ಶಾಂತಿಯಿಂದ ಆರಾಮದಿಂದ ತೂಗಿಸಲು ತಾಯಿ ನಿರಂತರವಾಗಿ ಪ್ರಯತ್ನಿಸುತ್ತಿದ್ದಳು. ಕಾರ್‍ಮಿಕ ಕುಡುಕ ಗಂಡನ ನೆರಳು ಮಕ್ಕಳ ಮೇಲೆ ಬೀಳದಂತೆ ಎಚ್ಚರ ವಹಿಸಿದಳು. ಮದ್ಯಮ ವರ್ಗದ ಸಂಸ್ಕಾರಯುತ ಜೀವನವನ್ನು ಕಟ್ಟಿಕೊಟ್ಟಳು. ತಂದೆ ಮತ್ತು ತಾಯಿಯ ನಡುವೆ ಅವರ ಆಚಾರ ವಿಚಾರಗಳಲ್ಲಿ ಅಜಗಜಾಂತರ ವೈತ್ಯಾಸವಿತ್ತು. ಸದಾ ಸಂಕಷ್ಟಗಳ ನುಂಗುತ್ತಾ ಮಕ್ಕಳಿಗಾಗಿ ಹೆಣಗುತ್ತಿದ್ದ ಆಕೆಯನ್ನು ಬಾಲ್ಯದಿಂದಲೇ ಲಾರೆನ್ಸ ಅತಿಯಾಗಿ ಪ್ರೀತಿಸಲು ಇದು ಕಾರಣವಾಗಿತ್ತು. ಕಾರ್‍ಮಿಕ ವರ್‍ಗದ ತಂದೆ ಮತ್ತು ಸುಸಂಸ್ಕೃತ ಸಾಧನೆಯ ಛಲಹೊಂದಿದ ಶಾಲಾ ಶಿಕ್ಷಕಿಯಾಗಿದ್ದ ತಾಯಿ ಮದ್ಯೆ ಎರ್ಪಟ್ಟ ಕಂದಕ ಮಕ್ಕಳು ಬೆಳೆಯುತ್ತಿದ್ದಂತೆ ವಿಸ್ತಾರವಾಗುತ್ತದೆ.

ಹೀಗಾಗಿ ಪ್ರಾಯಕ್ಕೆ ಬರುತ್ತಿದ್ದಂತೆ ಅವನಿಗರಿವಿಲ್ಲದೇ ತಾಯಿಯ ತ್ಯಾಗ, ತಂದೆಯ ಬೇಜವಾದಾರಿಯ ವರ್ತನೆ ತಂದೆಯನ್ನು ದ್ವೇಷಿಸುವಂತೆ ಮಾಡಿತು. ತಾಯಿ ಲಿಡಿಯಾ ತನ್ನ ಮಕ್ಕಳು ಲಂಡನ್ನಿನಲ್ಲಿ ಪ್ರಸಿದ್ಧ ವೈಟ್ ಕಾಲರಿನ ಕೆಲಸ ಸಿಗಲೆಂದು ಬಯಸಿದ್ದಳು. ಈ ಪ್ರಯತ್ನದಲ್ಲೇ ಗಂಡನಿಂದ ವಿಮುಖಳಾಗುತ್ತ ಲಿಡಿಯಾ ಮಕ್ಕಳಿಗೆ ಹತ್ತಿರವಾಗುತ್ತಾಳೆ. ಹೀಗಾಗಿ ಪ್ರಾಯಕ್ಕೆ ಬರುತ್ತಿದ್ದಂತೆ ಅವನಿಗರಿವಿಲ್ಲದೇ ತಾಯಿಯ ತ್ಯಾಗ, ತಂದೆಯ ಕ್ರೌರ್ಯ, ಬೇಜವಾದಾರಿಯ ವರ್ತನೆ ತಂದೆಯನ್ನು ದ್ವೇಷಿಸುವಂತೆ, ತಾಯಿಯನ್ನು ಅತಿಯಾಗಿ ಪ್ರೀತಿಸುವಂತೆ ಮಾಡಿತು. ತಾಯಿಯ ಬಗ್ಗೆ ಹೊಂದಿದ ಅಸಂಗತವಾದ ಈ ಮನೋವ್ಯಾಕುಲತೆಯನ್ನು ೨೦ನೇ ಶತಮಾನದ ಶ್ರೇಷ್ಠ ಮನಃಶಾಸ್ತ್ರಜ್ಞ ಸಿಗ್ಮಂಡ ಪ್ರಾಯ್ಡ “ಇಡಿಪಸ್ ಕಾಂಪ್ಲೆಕ್ಸ್” ಎಂದು ಹೆಸರಿಸಿದ್ದಾನೆ.

೧೯೦೩ ರಿಂದ ೧೯೦೮ ರವರೆಗೆ ನಾಟಿಂಗಹ್ಯಾಮನ ಹೈಸ್ಕೂಲ್ ಮತ್ತು ಯುನಿರ್ವಸಿಟಿ ಕಾಲೇಜಿನಲ್ಲಿ ಶಿಕ್ಷಕನಾಗಿದ್ದ ಲಾರೆನ್ಸ ೧೯೧೧ರಲ್ಲಿ ಕ್ಷಯರೋಗಕ್ಕೆ ಬಲಿಯಾದ ಕಾರಣ ಆ ಕೆಲಸ ಬಿಟ್ಟು ಬಿಡಬೇಕಾಯಿತು. ಅದ್ಭುತ ಬರಹಗಾರ ಮಾತ್ರವಲ್ಲದೇ ಅದ್ವೀತೀಯ ಚಿತ್ರಕಾರನೂ ಆಗಿದ್ದ ಲಾರೆನ್ಸ್‍ನ ಕಾದಂಬರಿಗಳ ಪ್ರಮುಖ ವಸ್ತು ಕಾಮೋನ್ಮತಿ. ಲಾರೆನ್ಸನ ಬರವಣಿಗೆಯ ಆಕರ್ಷಣೆ ಎಂದರೆ ತನ್ನ ಬದುಕಿನ ನೈಜ ಘಟನೆಗಳನ್ನು, ಅನುಭವಗಳನ್ನು ತನ್ನ ಕಾಲ್ಪನಿಕ ಬರವಣಿಗೆಯಲ್ಲಿ ಭಟ್ಟಿ ಇಳಿಸಿರುವುದು.

ವಯೋಸಹಜವಾದ ಆಕರ್ಷಣೆಗಳಿಂದ ಲಾರೆನ್ಸ್ ಹೊರತಾಗಿರಲಿಲ್ಲ. ತಾಯಿಯ ಹೊರತಾಗಿ ಆತ ಪ್ರೀತಿಸಿದ ಮೂವರು ಹೆಣ್ಣುಗಳೊಂದಿಗೆ ಆತನ ಸಂಬಂಧ ದೀರ್ಘವಾಗಿರಲಿಲ್ಲ. ಆದಾಗ್ಯೂ ಆತ ಬದುಕನ್ನು ಇಂಚಿಂಚೂ ಸವಿದಿದ್ದ. ಆತನ ಮೊದಲ ಕಾದಂಬರಿಯ ಪ್ರಥಮ ಸಾಲು “ನಥಿಂಗ್ ಈಸ್ ಸಿಗ್ನಿಫಿಕೆಂಟ್ ಬಟ್ ಲೈಫ್” ಆತನ ಬದುಕಿನ ನಿಲುವನ್ನು ಪ್ರತಿಫಲಿಸುತ್ತದೆ. ತಾಯಿಯನ್ನು ಹೊರತು ಪಡಿಸಿ ಆತ ಬಹುವಾಗಿ ಪ್ರೀತಿಸಿದ್ದವಳು ಬಾಲ್ಯದ ಗೆಳತಿ ಜೆಸ್ಸಿ ಚೇಂಬರ್‍ಸ್. ಆತನೊಂದಿಗೆ ಭಾವನಾತ್ಮಕ ಹಾಗೂ ಭೌದ್ದಿಕ ಬಾಂದವ್ಯವನ್ನು ಹೊಂದಿದ್ದ ಆಕೆ ಲಾರೆನ್ಸ್ ನ ಕುಟುಂಬದೊಂದಿಗೂ ಆತ್ಮೀಯ ಸಂಪರ್ಕ ಹೊಂದಿದ್ದಳು. ಅವರಿಬ್ಬರಲ್ಲಿ ಬಾಲ್ಯದಿಂದಲೂ ಗಟ್ಟಿ ಅನುಬಂಧವಿತ್ತು. ಆದರೆ ಈ ಸಂಬಂಧ ಆತನ ಕಾದಂಬರಿ “ಸನ್ಸ್ ಎಂಡ ಲವರ್” ಪೂರ್ಣಗೊಳ್ಳುವ ಹಂತದಲ್ಲಿ ಮುರಿದು ಬಿದ್ದದ್ದು ದುರಂತ. ತಮ್ಮಿಬ್ಬರ ಅಪೂರ್ವ ಸ್ನೇಹ ಕೊನೆಗೊಂಡ ಬಗೆಯನ್ನು ಜೆಸ್ಸಿ ತನ್ನ ಕೃತಿಯಲ್ಲಿ ವಿವರಿಸುತ್ತಾಳೆ. ಸನ್ಸ್ ಎಂಡ್ ಲವರ್ಸ್” ಕಾದಂಬರಿಯ ಮೂರನೇ ಎರಡು ಭಾಗವನ್ನು ಬರೆದು ಮುಗಿಸಿದ. ಲಾರೆನ್ಸ್ ಮುಂದುವರೆಸಲು ಆತನ ಜೀವದ ಭಾಗವಾಗಿದ್ದ ಜೆಸ್ಸಿಯ ಸಹಾಯ ಬೇಡಿದ. ಆತನ ಹಸ್ತಪ್ರತಿ ಓದಿ ಮುಗಿಸಿದ ಆಕೆ ತಾಯಿಯೊಂದಿಗಿನ ಅಸಂಗತವೆನಿಸುವ ಸಂಬಂಧವನ್ನು ಸರಿಪಡಿಸಿ ಮರುಚಿತ್ರಿಸುವಂತೆ ಸೂಚಿಸಿದಳು. ಲಾರೆನ್ಸ್ ತಾಯಿಯೊಂದಿಗೆ ಹೊಂದಿದ ಅತಿ ಪ್ರೇಮವೆನ್ನುವ ಸಂಬಂಧ ವಿಚಿತ್ರ ಅಸಂಗತ ಸಹಜವೆನಿಸುವುದಿಲ್ಲವೆಂದು ಸ್ಪಷ್ಟಪಡಿಸುವ ಪ್ರಯತ್ನಪಟ್ಟಳು.

ಇದಾದ ನಂತರ ಲಾರೆನ್ಸ ಕ್ರಮೇಣ ಅಕೆಯಿಂದ ವಿಮುಖನಾಗ ತೊಡಗಿದ. ಕೃತಿಯನ್ನು ಸಿದ್ದಪಡಿಸಿ ಅಂಚೆಯಲ್ಲಿ ಆಕೆಗೆ ರವಾನಿಸಿದ. ಅಲ್ಲದೇ ಕೃತಿಯಲ್ಲಿ ಜೆಸ್ಸಿಗೆ ಸಂವಾದಿಯಾಗಿ ಬಂದ ಪಾತ್ರವಾದ ಮೇರಿಯಮ್‍ಳನ್ನು ನಕಾರಾತ್ಮಕವಾಗಿ ನಿಕೃಷ್ಟವಾಗಿ ಚಿತ್ರಿಸಿದ. ತನ್ನ ತಾಯಿಯ ಪಾತ್ರವನ್ನು ಉದ್ದಾತ್ತಿಕರಿಸಿದ. ಇವೆಲ್ಲವೂ ಆತನ ಆತ್ಮಪೂರ್ವಕವಾಗಿ ಪ್ರೀತಿಸುತ್ತಿದ್ದ ಜೆಸ್ಸಿಯಲ್ಲಿ ನೋವಿನ ಕಡಲನ್ನೆ ಸೃಷ್ಟಿಸಿದವು. ಆತ ಆಕೆಯನ್ನು ದೂರಮಾಡತೊಡಗಿದ. ಕಾದಂಬರಿ ಆಕೆಯ ಬದುಕಿಗೆ ಬರಸಿಡಿಲಾಗಿತ್ತು. ತಾಯಿಗಾಗಿ ಆಕೆಯಿಂದ ವಿಮುಖನಾಗುವ ಆತನ ಸಂಬಂಧ ಲೂಯಿ ಬರ್ಹೂಸ್ನೊಂದಿಗೆ ಸ್ವಲ್ಪಕಾಲ ತಳಕು ಹಾಕಿಕೊಂಡಿತು. ಆದರೆ ಅದು ಬಹಳ ಕಾಲ ನಿಲ್ಲಲಿಲ್ಲ. ೨೫ ವರ್ಷಗಳ ದುರಂತ ದಾಂಪತ್ಯ ನಡೆಸಿ ಕ್ಯಾನ್ಸರಿಗೂ ಬಲಿಯಾಗಿ ೧೯೧೦ರಲ್ಲಿ ಮರಣ ಹೊಂದುವವರೆಗೂ ಆತನ ಬದುಕಿನುದ್ದಕ್ಕೂ ತಾಯಿ ಬೆಂಬಿಡದೆ ಕಾಡಿದಳು. ಆಕೆಯನ್ನು ಆತ ಹುಚ್ಚನಂತೆ ಪ್ರೀತಿಸಿದ್ದ.

ತಾಯಿಯ ಮರಣದ ನಂತರ ಆತನ ಬದುಕಿನಲ್ಲಿ ಬಂದವಳು ಆತನಿಗಿಂತ ಐದು ವರ್ಷ ಹಿರಿಯಳು ಮತ್ತು ವಿವಾಹಿತೆ ಫ್ರ್ಯೇಡಾ ವೀಕ್ಲೀ. ಅದು ಮೊದಲ ಮಹಾಯುದ್ದದ ಸನ್ನಿವೇಷ. ಲಾರೆನ್ಸ್‍ನ ಭಾಷಾ ಟ್ಯೂಟರ್‍ನ ಪತ್ನಿ ಮೂರು ಮಕ್ಕಳ ತಾಯಿ ಫ್ರ್ಯೇಡಾ ವೀಕ್ಲೀಯೊಂದಿಗೆ ಸಂಬಂದ ಬೆಳೆಯಿತು. ಆಕೆ ಕೂಡಾ ಗಂಡ ಮಕ್ಕಳ ಬಿಟ್ಟು ಲಾರೆನ್ಸನೊಂದಿಗೆ ಜರ್ಮನಿಗೆ ಓಡಿ ಹೋದಳು. ಆದರೆ ಈ ಸಂದರ್ಭ ಆತನ ಬದುಕಿನಲ್ಲಿ ಹಲವು ಸಮಸ್ಯೆಗಳ ಸೃಷ್ಟಿಸಿದವು. ಜರ್ಮನ ಆತನನ್ನು ಬ್ರಿಟಿಷ್ ಗೂಢಾಚಾರಿಯೆಂದು ಗೃಹಿಸಿ ಬಂಧಿಸಿತು. ಆ ಸಮಯದಲ್ಲಿ ಫ್ರೇಢಾಳ ತಂದೆ ತಮ್ಮ ಪ್ರಭಾವ ಬಳಸಿ ಲಾರೆನ್ಸನನ್ನು ಬಿಡುಗಡೆಗೊಳಿಸಿದರು. ೧೯೧೪ರಲ್ಲಿ ಪುನಃ ಹಿಂತಿರುಗಿ ಇಂಗ್ಲೆಂಡಿಗೆ ಬಂದು ವಿವಾಹವಾದ ಈ ದಂಪತಿ ಅದೇ ವರ್ಷ ಗೂಢಾಚಾರಿಕೆಯ ಆಪಾದನೆ ಮೇಲೆ ಇಂಗ್ಲೆಂಡಿನಿಂದಲೂ ಗಡಿಪಾರಿನ ಶಿಕ್ಷೆಗೊಳಗಾದರು. ಅಲ್ಲಿಂದ ಮುಂದೆ ಲಾರೆನ್ಸ ಮತ್ತು ಫ್ರೇಢಾ ಹಲವು ದೇಶಗಳ ಸುತ್ತುತ್ತ ಬದುಕಬೇಕಾಯಿತು. ಸಂಕಷ್ಟಗಳ ಮೇಲೆ ಸಂಕಷ್ಟಗಳು ಆತನನ್ನು ಜರ್ಜರಿತಗೊಳಿಸಿದವು.

ಆದಾಗ್ಯೂ ಆತ ಬದುಕನ್ನು ಬಹುವಾಗಿ ಪ್ರೀತಿಸಿದ್ದ. “ಲಿವ್ಡ್ ಹಿಸ್ ಶಾರ್‍ಟ್ ಲೈಫ್ ಲಿವಿಂಗ್” ಹಾಗಾಗಿ ಲಾರೆನ್ಸ ಬಗ್ಗೆ ಈ ಮಾತು ಸಹಜವೆನಿಸುತ್ತದೆ. ಹಲವು ಸಲ ಹತಾಶೆಗೂ ಒಳಗಾದ. ಹಲವರನ್ನು ಪ್ರೀತಿಸಿದ. ಅನೇಕರಿಂದ ಪ್ರೀತಿಸಲ್ಪಟ್ಟ. ಹಲವು ದೇಶಗಳ ಸುತ್ತಿದ. ಹಲವು ಸಂಬಂಧಗಳಲ್ಲಿ ಬೆಸೆಯಲ್ಪಟ್ಟ. ಕಾವ್ಯ, ಪ್ರವಾಸ, ಕಥನ, ಕಾದಂಬರಿಗಳು, ಸಣ್ಣಕಥೆಗಳು, ಪ್ರಬಂದಗಳು ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೈಯಾಡಿಸಿದ ಲಾರೆನ್ಸ್ ಕ್ಷಯರೋಗದಿಂದ ೧೯೩೦ ಮಾರ್ಚ ೪ ರಂದು ಫ್ರಾನ್ಸಿನ ವ್ಯಾನಿಸನಲ್ಲಿ ತನ್ನ ೪೫ನೇ ವಯಸ್ಸಿಲ್ಲಿ ಮರಣಿಸಿದ. ಹೀಗಾಗಿ ಅಪ್ರಕಟಿತ ಕೃತಿಗಳನ್ನು ಉಳಿದುಬಿಟ್ಟವು.

ಮರಣಹೊಂದುವವರೆಗೂ ತಲ್ಲಣಗಳ ತೆರೆಗಳ ಮೇಲೆ ಸದಾ ಅತೃಪ್ತ ಆತ್ಮದಂತೆ ಆತ ಅರಸುತ್ತಾ ನಡೆದದ್ದು, ಹುಡುಕಿದ್ದು ಅವನಿಗರಿವಿಲ್ಲದೇ ಮೂಡಿದ ತಾಯಿಯ ಬಗೆಗಿನ ಅಸಂಗತವೋ ಅಸಂಬದ್ಧವೋ ಎನಿಸುವ ಪ್ರೇಮ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇವನು
Next post ಕೊನೆಯ ತೀರ್ಪಿನ ದಿನ

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…