ಒಂದು ಕಾಲವಿತ್ತು ಒಂದು ಫಿಲ್ಮ್ ಮೂಲಕ ಬೆಳಕನ್ನು ಹರಿಸಿ ಫಿಲ್ಮಿನಲ್ಲಿರುವ ಚಿತ್ರಗಳನ್ನು ದೊಡ್ಡದನ್ನಾಗಿ ತೋರಿಸುವ ವಿಧಾನ. ಇದನ್ನು ತೋರಿಸುವ ಯಂತ್ರಕ್ಕೆ ಪ್ರೋಜೆಕ್ಟರ್ ಎಂದು ಕರೆದರೂ ಹೊಸ ಆವಿಷ್ಕಾರ ಬಂದ ನಂತರ ವಿನೂತನ ಪ್ರಯೋಗಗಳಾಗಿ ಹೊಸ ನಮೂನೆಯ ಪ್ರೋಜೆಕ್ಟರ್‌ಗಳು ಬಂದಿವೆ. ಹಳೆಯದರದಲ್ಲಿ ಅನೇಕ ನ್ಯೂನ್ಯತೆಗಳಿದ್ದ ಕಾರಣವೂ ಸಹ ಅವು ಮೂಲೆ ಗುಂಪಾದವು. ಈದೀಗ ಸುಧಾರಣೆಗೊಂಡು ನೂತನ ತಂತ್ರಜ್ಞಾನ ‘ಇರೀಡಿಯಂ’ ಮಸೂರದ ಪ್ರೋಜೆಕ್ಟರ್ ಹೊರಬಂದಿವೆ.
ಇರೀಡಿಯಂ ತಂತ್ರಜ್ಞಾನದ ಈ ಪ್ರೋಜೆಕ್ಟರ್ ಬಹಳ ಚಿಕ್ಕದ್ದು ಇದನ್ನು ಬೇಕಾದರೆ ಮಡಚಿ ಜೇಬಿನಲ್ಲಿಟ್ಟುಕೊಳ್ಳಬಹುದು. ಇದರ ಮಸೂರ (ಲೆನ್ಸ್)ನಲ್ಲಿ ಇರೀಡಿಯಂ ಪದಾರ್ಥದ ಲೇಪನವಿರುತ್ತದೆ. ಇದರಲ್ಲಿ ಹರಿಯುವ ಬೆಳಕನ್ನು ಅದು ವಿದ್ಯುನ್ಮಾನಮಯ ‘ಡಯೋಡ್’ ಟ್ಯೂಬ್‌ಗಳಿಗೆ ಕಳಿಸುತ್ತದೆ. ಈ ಬಿಂಬ ಸಂಕೇತಗಳು ವಿದ್ಯುತ್ ಸಂಕೇತಗಳಾಗಿರುತ್ತವೆ. ಈ ಡಯೋಡ್ ಟ್ಯೂಬುಗಳು ನಂತರ ಮರು ಬೆಳಕಿಗೆ ಪರಿವರ್ತಿಸಿ ಪರದೆಯ ಮೇಲೆ ಬೀಳುತ್ತವೆ. ಈ ಚಿತ್ರಗಳು ಅತ್ಯಂತ ಸ್ಪಷ್ಟವಾಗಿರುತ್ತವೆ. ಇನ್ನೊಂದು ವಿಶೇಷವೇನೆಂದರೆ ಇದಕ್ಕೆ ವಿದ್ಯುತ್ ಶಕ್ತಿಯ ಅವಶ್ಯಕತೆ ಇಲ್ಲವಿರುವುದು. ಈ ಪ್ರೋಜೆಕ್ಟರ್ ದುಬಾರಿಯಾದರೂ ಕೆಲಸ ಮಾಡುವುದು ಸುಲಭ.
ಈ ಪ್ರಯೋಗಗಳು ಯಶಸ್ವಿಯಾಗಿ ವಿದೇಶಗಳಲ್ಲಿ ಮತ್ತು ಕೆಲವು ನಿವಾಸಗಳಲ್ಲಿ ಪ್ರದರ್ಶನಗೊಳ್ಳುತ್ತವೆ. ಎಲ್ಲೆಂದರಲ್ಲಿ ಸಾಗಿಸಬಹುದಾದ ಇದರ ಸಾಧನೆ ಹಿರಿದಾಗಿದೆ. ಮುಂದಿನ ದಿನಗಳಲ್ಲಿ ಶ್ರೀಮಂತರೆಲ್ಲರ ಮನೆಗಳಲ್ಲಿಯೂ ರಂಜಿಸುವ ದಿನ ದೂರವಿಲ್ಲ.
*****