ಎಲ್ಲೀ ಕಾಣೆ ಎಲ್ಲೀ ಕಾಣೆ

ಎಲ್ಲೀ ಕಾಣೆ ಎಲ್ಲೀ ಕಾಣೆ
ಎಲ್ಲಮ್ಮನಂಥಾಕಿನ ಎಲ್ಲೀ ಕಾಣೆ        ||ಪ||

ಎಲ್ಲೀ ಕಾಣೆನು ಶಿವನೊಲ್ಲಭಿ ಎನಿಸಿದಿ
ಕಲ್ಲಿನೊಳಗೆ ಪುಟ್ಟಿ ಉಗುರುಗೊಳ್ಳಕೆ ಇಳದಿ    ||ಅ.ಪ.||

ಬಾಳಮಂದಿ ಬತ್ತಲ ಮಾಡಿದಿ ನೀ ಎಂಥಾಕೆವ್ವಾ
ಬೇವನುಡಿಸಿ ಮೋಜ ನೋಡಿದಿ
ತಾಳ ಜಾಗುಟೆ ಗೆಜ್ಜೆ ನುಡಿಸಿ
ಕಾಲೊಳು ಕಂಚಿನ ಕೊಳಾ ಹಾಕಿ ಕುಣಿಸ್ಯಾಡಿದಿ
ಮ್ಯಾಳಗೊಂಡು ಭಿಕ್ಷೆ ಬೇಡಿಸಿದಿ
ಜೋಲಿಗೆ ಹಾಕಿ ಜೋಗವ್ವೆಂದು ಜನಕ ಕಾಡಿದಿ
ಕಳ್ಳ ಸುಳ್ಳರಿಗೊಲಿದಿ ಕಾಲ ಕರ್ಮವ ಗೆಲಿದಿ
ಭಲೆರೆ ಭಲೆರೆ ಏಳುಕೊಳ್ಳನಾಳುವ ಶರಣೆ        ||೧||

ಬಲ್ಲಿದವರನೆಲ್ಲ ಹಿಡಿದು ಬೆನ್ನಿಲೆ ಸೀಲಿ
ಬಾಯಿಗೆ ಬೀಗ ಜಡಿದು
ಸಲ್ಲು ಸಲ್ಲಿಗೊಮ್ಮೆ ನುಡಿದು
ಉಧೋ ಎಂಬುದೊಳ್ಳೆದವ್ವ ನಿನ್ನ ಬಿರುದು
ಚಲ್ವ ಹೆಂಗಸರ ಶೀರಿ ಸೆಳೆದು
ಚಲ್ಲಣ ತೊಡಿಸಿ ಬುಲ್ಲಿ ತುಂಬಾ ಅರ್ಲ ಜಡಿದು
ಕೋಲುದೀವಟಿಗಿ ಬತ್ತಿ ಮೇಲೆ ಜಗವ ಹೊತ್ತಿ
ಭೂಲೋಕದೊಳು ನಿನ್ನ ಜಾಲಕಿನ್ನೆಣೆಯುಂಟೆ?    ||೨||

ಮಂಡಲದೊಳು ಮಾಯಕಾರ್ತಿ ಜಮದಗ್ನಿಮುನಿಯ
ಚಂಡಕೊರಸಿದ ಮಾಯಕಾರ್ತಿ
ದಂಡು ತಂದು ಗಿರಿಗೆ ಮುತ್ತಿದಿ ಮುನಿಗಳ ಗವಿಗೆ
ಗುಂಡ ಬಡಿದು ಗುಮರಿ ಹಾಕಿದಿ
ಮಿಂಡೇರಂತೆ ನೀರ ತರತಿ ಮಳಲಿನ ಕೊಡಕೆ
ದುಂಡ ಹಾವಿನ ಸಿಂಬಿ ಸುತ್ತಿದಿ
ಗಂಡ-ಹೆಂಡಿರ ಬಿಡಿಸಿ ಭಂಡಾರ ಚೀಲವ ಹೊರಿಸಿ
ರಂಡೀಹುಣ್ಣಿವೆಗಳಿದು ರಾಜಮುತ್ತೈದಿಯಾದೆವ್ವ    ||೩||

ಚಿಕ್ಕ ಮಲಕಿನ ದುರದುಂಡಿ ನೀ ಎಂಥಾಕೆವ್ವಾ
ಚಿಕ್ಕ ಮಗನೊಳು ಕಲಹಗೊಂಡಿ
ಎಕ್ಕಯ್ಯನ ಪ್ರಾಣಗೊಂಡಿ
ಕಕ್ಕಯ್ಯ ಶರಣರಿಗೊಪ್ಪುವಂಥ ರಾಜಮಿಂಡಿ
ಸೊಕ್ಕಿದ ಜನರ ಮನಸ ಕಂಡಿ
ಕಾರಿಕ ಕಾಯಿಕ್ಕಿ ಕರ್ಪುರ ಕಾಣಿಕಗೊಂಡಿ
ದಿಕ್ಕಿನೋಳ್ ಶಿಶುನಾಳ ಮುಕ್ಕಣ್ನನೊಳುಕೂಡಿ
ಅಕ್ಕರದಲಿ ಗುರುನಾಥ ಗೋವಿಂದಗೊಲಿದಿ        ||೪||

*    *    *    *

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಲ್ಲಮ್ಮನ ಜಾತ್ರೆಗೆ ಬಲ್ಲವರು ಹೋಗಿ
Next post ಸರಿಗಾಣೆನು ಧರಣಿಯೊಳಗಮ್ಮ

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…